Skip to main content
ವಿಡಿಯೋ
sports

ಈ ಸಲ ಕೂಡ ಕಪ್‌ ನಮ್ದೇ - ಆರ್‌ಸಿಬಿ ಮಹಿಳಾ ಕ್ರಿಕೆಟ್‌ ತಂಡಕ್ಕೆ 2ನೇ ಟ್ರೋಫಿ!

By Shravanthi R
ಈ ಸಲ ಕೂಡ ಕಪ್‌ ನಮ್ದೇ - ಆರ್‌ಸಿಬಿ ಮಹಿಳಾ ಕ್ರಿಕೆಟ್‌ ತಂಡಕ್ಕೆ 2ನೇ ಟ್ರೋಫಿ!

ವಡೊದರಾದಲ್ಲಿ ನಡೆದ 2026ನೇ ಸಾಲಿನ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು 2ನೇ ಬಾರಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದೆ. ಸ್ಮೃತಿ ಮಂದಾನ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವಿನ ಪ್ರಾಬಲ್ಯ ತೋರಿ ತನ್ನ ಅಭಿಮಾನಿಗಳ ಹೃದಯವನ್ನು ಗೆಲುವಂತೆ ಮಾಡಿದೆ.

ವಡೊದರಾದಲ್ಲಿ ನಡೆದ 2026ನೇ ಸಾಲಿನ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡವು 2ನೇ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದೆ. ಸ್ಮೃತಿ ಮಂದಾನ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೆಲುವಿನ ಪ್ರಾಬಲ್ಯ ತೋರಿ ತನ್ನ ಅಭಿಮಾನಿಗಳ ಹೃದಯವನ್ನು ಗೆಲುವಂತೆ ಮಾಡಿದೆ. 

ಗುರುವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ರೋಚಕ ಫೈನಲ್‌ ಪಂದ್ಯದಲ್ಲಿ 6 ವಿಕೆಟ್‌ ಅಂತರದ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ತಂಡದ ಸಾಧನೆಗೆ ಕ್ರಿಕೆಟ್‌ ಗಣ್ಯರ ಶ್ಲಾಘನೆಯ ಅಭಿನಂದನೆಗಳು ಕೇಳಿಬಂದಿದೆ. Janasya Women's Peach Poly Silk Embellished Kurta with Pant

ನಿಗದಿತ 20 ಓವರ್‌ನಲ್ಲಿ 203ರನ್‌ ಸ್ಕೋರ್‌ ಮಾಡಿ ಟಾರ್ಗೆಟ್‌ ನೀಡಿದ ಡೆಲ್ಲಿ ತಂಡವು, ಕಳೆದ ನಾಲ್ಕು ಸೀಸನ್‌ನಲ್ಲಿ ನಾಲ್ಕೂ ಬಾರಿ ಫೈನಲ್‌ ಪ್ರವೇಶಿಸಿ ಸೋಲುವ ಮೂಲಕ ನಿರಾಸೆಯನ್ನು ಅನುಭವಿಸಿತು. ಈ ಮೂಲಕ ಆರ್‌ಸಿಬಿ ಫ್ರಾಂಚೈಸಿ, ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ (ಹ್ಯಾಟ್ರಿಕ್‌) ಪ್ರಶಸ್ತಿ ಗೆಲ್ಲುವ ಮೂಲಕ ತನ್ನ ಫ್ಯಾನ್ಸ್‌ಗೆ ಖುಷಿ ತಂದಿದೆ. ಕಳೆದ ವರ್ಷ ಆರ್‌ಸಿಬಿ ಮಹಿಳಾ ತಂಡ ಹಾಗೂ ಐಪಿಎಲ್‌ನಲ್ಲಿ ರಜತ್‌ ಪಟಿದಾರ್‌ ತಂಡವು ಚೊಚ್ಚಲ ಟ್ರೋಫಿ ಎತ್ತುವ ಮೂಲಕ ಜಯಭೇರಿಯಾಯಿತು. ಇದನ್ನೂ ಓದಿ: ಪಿಐಬಿ ವತಿಯಿಂದ ವಿಶೇಷ ಪ್ರವಾಸ: ಈಶಾನ್ಯದ ಏಳು ರಾಜ್ಯಗಳ ಬೆಸೆವ ಕೊಂಡಿ ಅಸ್ಸಾಂ ರೈಫಲ್ಸ್ ಕೇಂದ್ರಕ್ಕೆ ಭೇಟಿ..!