ಕಂಗನಾ ರನೌತ್ ಬಾಲಿವುಡ್‌ನ ಖ್ಯಾತ ನಟಿ ಮಾತ್ರವಲ್ಲ, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಭಾರತೀಯ ಸಿನಿರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಭಾರತೀಯ ನಟಿಯರ ಪಟ್ಟಿಯಲ್ಲಿ ಕಂಗನಾ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಐದು ಪ್ರಶಸ್ತಿಗಳನ್ನು ಪಡೆದಿರುವ ಶಬಾನಾ ಆಜ್ಮಿ ಇದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಂಗನಾ ಮಹಿಳಾ ಪ್ರಧಾನ ಹಾಗೂ ಸಾಮಾಜಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಕಥೆಗಳಿರುವ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta
ಈಗ ಕಂಗನಾ ರನೌತ್ ಹೊಸ ಸಿನಿಮಾವೊಂದರಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಸಿನಿಮಾ 2008ರಲ್ಲಿ ನಡೆದ ಮುಂಬೈ ಉಗ್ರ ದಾಳಿಯಿಂದ ಪ್ರೇರಿತವಾಗಿರುವ ಕಥೆಯನ್ನು ಹೊಂದಿದೆ. ಆ ದಾಳಿಯ ಸಂದರ್ಭದಲ್ಲಿ ಉಗ್ರರು ರೈಲ್ವೆ ನಿಲ್ದಾಣ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ಆಸ್ಪತ್ರೆಯ ಮೇಲೂ ದಾಳಿ ನಡೆಸಿದ್ದರು. ಆಸ್ಪತ್ರೆಯಲ್ಲಿ ನಡೆದ ಭಯಾನಕ ಘಟನೆಗಳನ್ನು ಆಧರಿಸಿ ಈ ಸಿನಿಮಾದ ಕಥೆ ರೂಪಿಸಲಾಗಿದೆ.
ಈ ಸಿನಿಮಾದಲ್ಲಿ ಕಂಗನಾ ರನೌತ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆಗೆ ಮರಾಠಿ ಸಿನಿರಂಗದ ಖ್ಯಾತ ನಟಿ ಗಿರಿಜಾ ಓಕ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಮನೋಜ್ ತಪಾಡಿಯಾ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಲಿದೆ. ಸಿನಿಮಾದ ಚಿತ್ರೀಕರಣವನ್ನು ಸೆಟ್‌ನಲ್ಲಿ ನಡೆಸಲಾಗಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಚಿತ್ರತಂಡ ಈ ಸಿನಿಮಾವನ್ನು ಈ ವರ್ಷವೇ ಬಿಡುಗಡೆ ಮಾಡುವ ಯೋಜನೆ ಮಾಡಿಕೊಂಡಿದೆ. ಸಿನಿಮಾಗೆ ‘ಭಾರತ ಭಾಗ್ಯ ವಿಧಾತ’ ಎಂಬ ಶೀರ್ಷಿಕೆ ಇಡಲಾಗಿದೆ.ಇರಾನ್–ಇಸ್ರೇಲ್ ಯುದ್ಧದ ಪರಿಣಾಮ: ದುಬೈನಲ್ಲಿ ಸಿಲುಕಿದ್ದ ನಟ ಅಜಿತ್ ಕುಮಾರ್ ಸುರಕ್ಷಿತವಾಗಿ ಭಾರತಕ್ಕೆ ವಾಪಸ್..!
ಸಂಸದೆ ಆದ ಬಳಿಕ ಕಂಗನಾ ರನೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಸಂಸದೆ ಆಗುವ ಮೊದಲು ಅವರು ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸಿ, ಅದನ್ನು ತಾವೇ ನಿರ್ದೇಶಿಸಿದ್ದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈಗ ಕಂಗನಾ ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಥ್ರಿಲ್ಲರ್ ಸಿನಿಮಾವೊಂದರ ಜೊತೆಗೆ ‘ಭಾರತ ಭಾಗ್ಯ ವಿಧಾತ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.