Skip to main content
ವಿಡಿಯೋ
cinema

“ನಮ್ಮ ಜೀವನ ನಮ್ಮದೇ” – ವೈರಲ್ ಆಡಿಯೋ ಬಳಿಕ ರಶ್ಮಿಕಾ ಸ್ಪಷ್ಟನೆ..!ಇಲ್ಲಿದೆ ಮಾಹಿತಿ

By Ram Chethan
“ನಮ್ಮ ಜೀವನ ನಮ್ಮದೇ” – ವೈರಲ್ ಆಡಿಯೋ ಬಳಿಕ ರಶ್ಮಿಕಾ ಸ್ಪಷ್ಟನೆ..!ಇಲ್ಲಿದೆ ಮಾಹಿತಿ

ರಶ್ಮಿಕಾ ಮಂದಣ್ಣ ಬ್ರೇಕ್‌ಅಪ್ ಬಗ್ಗೆ ಅವರ ತಾಯಿ ಸುಮನ್ ಅವರದ್ದೆಂದು ಹೇಳಲಾಗಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಷಯ ಮತ್ತೆ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ, ಇನ್‌ಸ್ಟಾಗ್ರಾಂ ಮೂಲಕ ತಮ್ಮ ಖಾಸಗಿ ಜೀವನದ ಬಗ್ಗೆ ಇತರರು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಬ್ರೇಕ್‌ಅಪ್ ವಿಚಾರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಬ್ರೇಕ್‌ಅಪ್ ಬಗ್ಗೆ ಅವರ ತಾಯಿ ಸುಮನ್ ಅವರದ್ದೆಂದು ಹೇಳಲಾಗುತ್ತಿರುವ ಒಂದು ಆಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಆಡಿಯೋ ಹೊರಬಂದ ನಂತರ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಈ ವಿಷಯ ಮತ್ತೆ ಸುದ್ದಿಯಾಗುತ್ತಿದೆ.Arayna Women's Cotton Printed Floral Straight Kurta with Palazzo Pants and Dupatta

ಈ ಹಿನ್ನೆಲೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಂ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಖಾಸಗಿ ಜೀವನದ ಬಗ್ಗೆ ಕೆಲವರು ಅನಗತ್ಯವಾಗಿ ಮಾತನಾಡುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಅಭಿಮಾನಿಗಳು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಅವರು ಧನ್ಯವಾದ ಹೇಳಿದ್ದಾರೆ.

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ರಶ್ಮಿಕಾ, “ಇಲ್ಲಿಯ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರಿ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಆದರೆ ಈ ಸಮಯದಲ್ಲಿ ಒಂದು ಮಾತು ಹೇಳಬೇಕು ಅನ್ನಿಸುತ್ತದೆ,” ಎಂದು ತಿಳಿಸಿದ್ದಾರೆ.

ತಮ್ಮ ಖಾಸಗಿ ಜೀವನದ ಬಗ್ಗೆ ಕೆಲವರು ಬೈಯುತ್ತಾ ಮಾತನಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, “ನಮ್ಮ ಜೀವನ ಹೇಗಿರಬೇಕು ಎಂದು ಇತರರು ನಿರ್ಧಾರ ಮಾಡಲಾಗುವುದಿಲ್ಲ. ನಮ್ಮ ಜೀವನ ನಮ್ಮದೇ. ನಮ್ಮ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತೇವೆ,” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಇದನ್ನು ಓದಿ:ನಟ ದರ್ಶನ್ ಪತ್ನಿಗೆ ಆನ್‌ಲೈನ್ ಕಿರುಕುಳ: ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್..!ಇಲ್ಲಿದೆ ಮಾಹಿತಿ

ರಶ್ಮಿಕಾ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಲವರು ಅವರ ಮಾತಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ತಮ್ಮ ಖಾಸಗಿ ಜೀವನದ ಬಗ್ಗೆ ಅನಗತ್ಯ ಚರ್ಚೆ ಮಾಡಬಾರದು ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.