Skip to main content
ವಿಡಿಯೋ
1/2
cinema

ಭಾರತದಲ್ಲೇ ದೊಡ್ಡ ನೆಟ್‌ಫ್ಲಿಕ್ಸ್ ಸ್ಟುಡಿಯೋ ಹೈದರಾಬಾದ್‌ನಲ್ಲಿ – ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ..!

By Ram Chethan
ಭಾರತದಲ್ಲೇ ದೊಡ್ಡ ನೆಟ್‌ಫ್ಲಿಕ್ಸ್ ಸ್ಟುಡಿಯೋ ಹೈದರಾಬಾದ್‌ನಲ್ಲಿ – ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ..!

ನೆಟ್‌ಫ್ಲಿಕ್ಸ್ ಹೈದರಾಬಾದ್‌ನಲ್ಲಿ ತನ್ನ ಐದನೇ ಐಲೈನ್ ಸ್ಟೂಡಿಯೋವನ್ನು ಉದ್ಘಾಟಿಸಿದೆ. 32,000 ಚದರ ಅಡಿ ಪ್ರದೇಶದ ಈ ಸ್ಟುಡಿಯೋ ದಕ್ಷಿಣದ ಸಿನಿಮಾ ಮತ್ತು ವೆಬ್ ಸರಣಿಗಳಿಗೆ ಅತ್ಯಾಧುನಿಕ VFX ತಂತ್ರಜ್ಞಾನವನ್ನು ಒದಗಿಸಿ, ಸ್ಥಳೀಯ ಕಲಾವಿದರು ಹಾಗೂ ತಾಂತ್ರಿಕ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಒಟಿಟಿ (OTT) ಕ್ಷೇತ್ರದ ದೈತ್ಯ ನೆಟ್‌ಫ್ಲಿಕ್ಸ್, ಭಾರತದಲ್ಲಿ ತಮ್ಮ ಹೂಡಿಕೆಯನ್ನು ವಿಸ್ತಾರಗೊಳಿಸುತ್ತಿದ್ದು, ದಕ್ಷಿಣ ಭಾರತೀಯ ಚಿತ್ರೋದ್ಯಮದ ಮೇಲೆ ವಿಶೇಷ ಭರವಸೆ ಹೊಂದಿದೆ. ಈ ಉದ್ದೇಶಕ್ಕಾಗಿ, ಹೈದರಾಬಾದ್‌ನಲ್ಲಿ ‘ಐಲೈನ್ ಸ್ಟೂಡಿಯೋಸ್’ ಎಂಬ ಹೊಸ ಸ್ಟುಡಿಯೋವನ್ನು ಉದ್ಘಾಟಿಸಿದೆ.Arayna Women's Cotton Printed Floral Straight Kurta with Palazzo Pants and Dupatta

ಹೈದರಾಬಾದ್‌ನ ಹೊಸ ಸ್ಟುಡಿಯೋ ನೆಟ್‌ಫ್ಲಿಕ್ಸ್‌ನ ಐದನೇ ಐಲನ್ ಸ್ಟುಡಿಯೋ ಕೇಂದ್ರವಾಗಿದೆ. ಈ ಸ್ಟುಡಿಯೋ ಸುಮಾರು 32,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಮತ್ತು ಅತ್ಯಾಧುನಿಕ VFX (ವಿಜುವಲ್ ಎಫೆಕ್ಟ್ಸ್) ಮತ್ತು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಸ್ಥಳೀಯ ಕಲಾವಿದರು, ತಾಂತ್ರಿಕ ನಿಪುಣ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ನೆಟ್‌ಫ್ಲಿಕ್ಸ್ ಹೈದರಾಬಾದ್‌ಗೆ ಬರುವುದರಿಂದ ಹಾಲಿವುಡ್ ಹೈದರಾಬಾದ್‌ಗೆ ಬಂದಂತಾಗಿದೆ ಎಂದಿದ್ದಾರೆ. ಅವರು ಕಂಪನಿಯ ಕಾರ್ಪೊರೇಟ್ ಕಚೇರಿಯನ್ನು ‘ಭಾರತ್ ಫ್ಯೂಚರ್ ಸಿಟಿ’ಗೆ ಸ್ಥಳಾಂತರಿಸಲು ಆಹ್ವಾನ ನೀಡಿದ್ದಾರೆ ಮತ್ತು ಸರ್ಕಾರದಿಂದ ಪೂರ್ಣ ಸಹಕಾರ ನೀಡಲು ಭರವಸೆ ನೀಡಿದರು.ಇದನ್ನು ಓದಿ:ನಟ ದರ್ಶನ್ ಪತ್ನಿಗೆ ಆನ್‌ಲೈನ್ ಕಿರುಕುಳ: ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್..!ಇಲ್ಲಿದೆ ಮಾಹಿತಿ

ಕೆಲವು ವರ್ಷಗಳಿಂದ ನೆಟ್‌ಫ್ಲಿಕ್ಸ್ ತೆಲುಗು ಚಿತ್ರರಂಗದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ‘ಆರ್ ಆರ್ ಆರ್’ ಚಿತ್ರದ ಯಶಸ್ಸಿನ ನಂತರ ಸಿಇಒ ಹೈದರಾಬಾದ್‌ಗೆ ಬಂದು ರಾಜಮೌಳಿ, ಜೂ ಎನ್‌ಟಿಆರ್ ಸೇರಿದಂತೆ ತೆಲುಗು ಚಿತ್ರರಂಗದ ಪ್ರಮುಖ ತಾರೆಯರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್ ಸ್ಥಾಪಿಸಿದ ಈ ಸ್ಟುಡಿಯೋ ದಕ್ಷಿಣದ ಸಿನಿಮಾಗಳ ಮತ್ತು ವೆಬ್ ಸರಣಿಗಳಿಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಮತ್ತು ಭಾರತೀಯ ಓದುಗರಿಗೆ, ಪ್ರೇಕ್ಷಕರಿಗೆ ಇನ್ನಷ್ಟು ಹೈ-ಕ್ಲಾಸ್ ಕಂಟೆಂಟ್ ಒದಗಿಸಲಿದೆ.