ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿರುವುದಾಗಿ ತಿಳಿದುಬಂದಿದೆ. ಇದರ ಪರಿಣಾಮವಾಗಿ ಹೊಸಪೇಟೆ ನಗರದಲ್ಲಿ ಆಟೋಗಳಿಗೆ ಗ್ಯಾಸ್ ಪೂರೈಕೆ ಮಾಡುವ ಕೆಲವು ಬಂಕ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ.Arayna Women's Cotton Printed Floral Straight Kurta with Palazzo Pants and Dupatta
ಹೊಸಪೇಟೆಯ ಟಿಬಿ ಡ್ಯಾಮ್ ರಸ್ತೆ ಬಳಿ ಇರುವ ಗೋ ಗ್ಯಾಸ್ ಎಲ್‌ಪಿಜಿ ಬಂಕ್ ಮಾಲೀಕರು ಬಂಕ್‌ಗೆ ಬೀಗ ಹಾಕಿ ಬಂದ್ ಮಾಡಿದ್ದಾರೆ. ಬಂಕ್ ಮುಂದೆ ಬ್ಯಾನರ್ ಹಾಕಿ, ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ “ಗ್ಯಾಸ್ ಖಾಲಿಯಾಗಿದೆ – ನೋ ಸ್ಟಾಕ್” ಎಂದು ನಾಮಫಲಕವನ್ನು ಅಂಟಿಸಲಾಗಿದೆ.
ಬಂಕ್ ಬಂದ್ ಆಗಿರುವುದರಿಂದ ಗ್ಯಾಸ್ ತುಂಬಿಸಿಕೊಳ್ಳಲು ಬಂದ ಆಟೋ ಚಾಲಕರು ನಿರಾಶೆಯಿಂದ ಹಿಂದಿರುಗುವ ಸ್ಥಿತಿ ಎದುರಾಗಿದೆ. ಕೆಲವು ಚಾಲಕರು ಆಟೋದಲ್ಲಿ ಗ್ಯಾಸ್ ಮುಗಿದ ಕಾರಣ ವಾಹನವನ್ನು ತಳ್ಳಿಕೊಂಡೇ ಹೋಗುತ್ತಿರುವ ದೃಶ್ಯವೂ ಕಂಡುಬಂದಿದೆ.ಇದನ್ನು ಓದಿ:ಭಾರತದಲ್ಲೇ ದೊಡ್ಡ ನೆಟ್‌ಫ್ಲಿಕ್ಸ್ ಸ್ಟುಡಿಯೋ ಹೈದರಾಬಾದ್‌ನಲ್ಲಿ – ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ..!
ಹೊಸಪೇಟೆ ನಗರದಲ್ಲಿ ಸುಮಾರು 4500ಕ್ಕೂ ಹೆಚ್ಚು ಆಟೋಗಳು ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಗ್ಯಾಸ್ ಬಂಕ್ ಬಂದ್ ಆದ ಹಿನ್ನೆಲೆಯಲ್ಲಿ ಚಾಲಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲೇ ಗ್ಯಾಸ್ ಪೂರೈಕೆ ಸಾಮಾನ್ಯವಾಗಬೇಕು ಎಂದು ಆಟೋ ಚಾಲಕರು ಆಶಿಸುತ್ತಿದ್ದಾರೆ.