Skip to main content
ವಿಡಿಯೋ
crime

ಪಾರ್ಟಿಗೆ ಹೋದ ಯುವಕ ಶವವಾಗಿ ಪತ್ತೆ..ಗೆಳೆಯ ನಾಪತ್ತೆ, ಪೊಲೀಸರ ತನಿಖೆ ಶುರು..!ಇಲ್ಲಿದೆ ಮಾಹಿತಿ

By Ram Chethan
ಪಾರ್ಟಿಗೆ ಹೋದ ಯುವಕ ಶವವಾಗಿ ಪತ್ತೆ..ಗೆಳೆಯ ನಾಪತ್ತೆ, ಪೊಲೀಸರ ತನಿಖೆ ಶುರು..!ಇಲ್ಲಿದೆ ಮಾಹಿತಿ

ಗುಂಡ್ಲುಪೇಟೆ ಸಮೀಪದ ದೊಡ್ಡಕೆರೆ ಏರಿ ಬಳಿ 23 ವರ್ಷದ ನಂಜುಂಡಸ್ವಾಮಿ ಕತ್ತು ಸೀಳಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಪಾರ್ಟಿಗೆಂದು ಕರೆದೊಯ್ದ ಸ್ನೇಹಿತ ಅಜಯ್ ನಾಪತ್ತೆಯಾಗಿದ್ದು, ಗಾಂಜಾ ಅಥವಾ ಮದ್ಯದ ನಶೆಯಲ್ಲಿ ಈ ಹತ್ಯೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಾಗಿ ಪೊಲೀಸರ ತಂಡ ಶೋಧ ಕಾರ್ಯ ಆರಂಭಿಸಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಸಮೀಪ ಇರುವ ದೊಡ್ಡಕೆರೆ ಏರಿ ಬಳಿ 23 ವರ್ಷದ ಯುವಕನೊಬ್ಬನು ಬರ್ಬರವಾಗಿ ಕೊಲೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಗುಂಡ್ಲುಪೇಟೆ ತಾಲೂಕಿನ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂದು ಗುರುತಿಸಲಾಗಿದೆ. ಪಾರ್ಟಿಗೆ ಹೋಗುತ್ತೇನೆ ಎಂದು ಗೆಳೆಯನ ಜೊತೆ ಮನೆ ಬಿಟ್ಟಿದ್ದ ನಂಜುಂಡಸ್ವಾಮಿ ನಂತರ ಕತ್ತು ಸೀಳಿ ಹತ್ಯೆಗೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.Arayna Women's Cotton Printed Floral Straight Kurta with Palazzo Pants and Dupatta

ಮಾಹಿತಿಯ ಪ್ರಕಾರ, ಅಜಯ್ ಎಂಬ ಸ್ನೇಹಿತನು ನಂಜುಂಡಸ್ವಾಮಿಯನ್ನು ಪಾರ್ಟಿಗೆ ಬರಲು ಹೇಳಿ ಕರೆದುಕೊಂಡು ಹೋಗಿದ್ದನು. ಆದರೆ ಆ ನಂತರ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ನಡೆದ ಬಳಿಕ ಅಜಯ್ ಕಾಣೆಯಾಗಿರುವುದರಿಂದ ಅವನ ಮೇಲೆ ಶಂಕೆ ವ್ಯಕ್ತವಾಗುತ್ತಿದೆ. ಪಾರ್ಟಿಯಲ್ಲಿ ಮತ್ತಾರಾದರೂ ಇದ್ದರಾ ಅಥವಾ ಇಬ್ಬರ ನಡುವೆ ಏನಾದರೂ ಜಗಳ ನಡೆದಿತ್ತೇ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ.

ನಂಜುಂಡಸ್ವಾಮಿ ಬೆಂಗಳೂರಿನಲ್ಲಿ ಹಾಗೂ ನಂಜನಗೂಡಿನಲ್ಲಿ ಸಣ್ಣಪುಟ್ಟ ಕೆಲಸಗಳು ಮತ್ತು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದನು. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪಾರ್ಟಿ ವೇಳೆ ಮದ್ಯ ಅಥವಾ ಗಾಂಜಾ ನಶೆಯ ಕಾರಣದಿಂದ ಜಗಳ ಉಂಟಾಗಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ನಂಜುಂಡಸ್ವಾಮಿ ಸಹೋದರ ರಾಜು ನೀಡಿದ ದೂರಿನ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಜಯ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ಆರಂಭಿಸಿದ್ದಾರೆ.ಹೊಸಪೇಟೆಯಲ್ಲಿ ಗ್ಯಾಸ್ ಕೊರತೆ: “ನೋ ಸ್ಟಾಕ್” ಬೋರ್ಡ್ ನೋಡಿ ಆಟೋ ಚಾಲಕರು ಕಂಗಾಲು..!

ಇನ್ನೊಂದೆಡೆ, ತಮ್ಮ ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮೃತನ ತಂದೆ ಕರಿಯಯ್ಯ ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನೆ ಕುರಿತು ಸಂಪೂರ್ಣ ಸತ್ಯ ಹೊರಬರಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.