Skip to main content
ವಿಡಿಯೋ
1/2
politics

ಇಂದು ರಾಜ್ಯಸಭಾ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ..!

By Sushmitha R
 ಇಂದು ರಾಜ್ಯಸಭಾ 37 ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ..!

ಇಂದು ಸೋಮವಾರ ದೇಶದ 10 ರಾಜ್ಯಗಳಲ್ಲಿ ಒಟ್ಟು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಇಂದು ದೇಶದ 10 ರಾಜ್ಯಗಳಲ್ಲಿ ಒಟ್ಟು 37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 11 ಸ್ಥಾನಗಳಿಗೆ ಮಾತ್ರ ಮತದಾನ ನಡೆಯುತ್ತಿದ್ದು, ಇದು ಬಿಹಾರ (5), ಒಡಿಶಾ (4) ಮತ್ತು ಹರ್ಯಾಣ (2) ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ.

ಮತದಾನ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುತ್ತಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಫಲಿತಾಂಶ ರಾತ್ರಿಯ ವೇಳೆಗೆ ಸ್ಪಷ್ಟವಾಗಲಿದೆ. ರಾಜ್ಯಗಳ ವಿವರ ಮಹಾರಾಷ್ಟ್ರದಲ್ಲಿ 7, ತಮಿಳುನಾಡು 6, ಪಶ್ಚಿಮ ಬಂಗಾಳ 5, ಬಿಹಾರ 5, ಒಡಿಶಾ 4, ಅಸ್ಸಾಂ 3, ಛತ್ತೀಸ್‌ಗಢ 2, ಹರಿಯಾಣ 2, ತೆಲಂಗಾಣ 2 ಮತ್ತು ಹಿಮಾಚಲ ಪ್ರದೇಶದಲ್ಲಿ 1 ಸ್ಥಾನ ಖಾಲಿಯಾಗಿದೆ.

ಅವಿರೋಧ ಆಯ್ಕೆಯಾದವರಲ್ಲಿ ಶರದ್ ಪವಾರ್, ರಾಮದಾಸ್ ಆಥಾವಳೆ, ತಂಬಿದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ, ಅಭಿಷೇಕ್ ಮನು ಮುಂತಾದ ಪ್ರಮುಖರು ಸೇರಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಜ್ಯಸಭೆಯಲ್ಲಿ ಪ್ರಸ್ತುತ 134 ಸದಸ್ಯರಿದ್ದು, ಇಂಡಿಯಾ ಮೈತ್ರಿಕೂಟಕ್ಕೆ 80 ಸದಸ್ಯರಿದ್ದಾರೆ. Fashion2wear Women's Georgette Floral Digital Print Short Sleeve Full-Length Fit & Flare Long Gown Dress for Girls (LN-X9TQ-MN1D)

ಇಂದಿನ ಚುನಾವಣೆಯ ನಂತರ ಎನ್‌ಡಿಎ ಬಲ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆರು ರಾಜ್ಯಗಳಲ್ಲಿ ಎನ್‌ಡಿಎ ಅಧಿಕಾರದಲ್ಲಿರುವುದರಿಂದ ಅದಕ್ಕೆ ಅನುಕೂಲವಾಗಿದೆ. ಪೈಪೋಟಿ ಇರುವ ರಾಜ್ಯಗಳು ಬಿಹಾರದಲ್ಲಿ 5 ಸ್ಥಾನಗಳಿಗೆ ಐದು ಅಭ್ಯರ್ಥಿಗಳು ಇದ್ದರೂ ನಾಲ್ಕು ಗೆಲುವು ಖಚಿತವಾಗಿದೆ.

ಜೆಡಿಯುವಿನ ನಿತೀಶ್ ಕುಮಾರ್ ಮತ್ತು ರಾಮನಾಥ್ ಠಾಕೂರ್, ಬಿಜೆಪಿಯ ನಿತಿನ್ ನಬಿನ್ ಮತ್ತು ಶಿವಂ ಕುಮಾರ್ ಸುಲಭ ಗೆಲುವು ನಿರೀಕ್ಷಿಸಲಾಗಿದೆ. ಐದನೇ ಸ್ಥಾನಕ್ಕೆ ಎನ್‌ಡಿಎದ ಉಪೇಂದ್ರ ಖುಶವಾಹ ಮತ್ತು ವಿಪಕ್ಷದ ಎಡಿ ಸಿಂಗ್ ನಡುವೆ ನಿಕಟ ಪೈಪೋಟಿ ಇದೆ. ಕ್ರಾಸ್‌ ವೋಟಿಂಗ್ ಭಯವೂ ಇದೆ.ಇದನ್ನು ಓದಿ: ಬೆಸಗೆಯಲ್ಲಿ ಮನೆ ಹೊರಗೆ ಮಲಗಿದ್ದ ಮಹಿಳೆಗೆ ಶಾಕ್..! ಹಾವು ಡೆಡ್ಲಿ ಅಟ್ಯಾಕ್..! ಇಲ್ಲಿದೆ ಮಾಹಿತಿ

ಒಡಿಶಾದಲ್ಲಿ 4 ಸ್ಥಾನಗಳಿಗೆ ಐದು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿಯ ಇಬ್ಬರು ಮತ್ತು ಬಿಜೆಡಿಯ ಒಬ್ಬ ಅಭ್ಯರ್ಥಿಗಳ ಗೆಲುವು ಖಚಿತ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ. ಇದನ್ನು ಓದಿ: ಬಾವಿಗೆ ಬಿದ್ದ ಚಿರತೆ.. ಬಳಿಕ ಏನಾಯ್ತು ಗೊತ್ತಾ..? ಅರಣ್ಯ ಇಲಾಖೆಯ ಸ್ಮಾರ್ಟ್ ಐಡಿಯಾ..!ಇಲ್ಲಿದೆ ಮಾಹಿತಿ