Skip to main content
ವಿಡಿಯೋ
1/2
politics

ತಮಿಳುನಾಡು 2026 ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದ್ಯಾರು.?

By Sushmitha R
ತಮಿಳುನಾಡು 2026 ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲೋದ್ಯಾರು.?

ಕುಟುಂಬ ರಾಜಕಾರಣದ ಆರೋಪಗಳು, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆಗಳು, ಹಲವು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳು.

ಡಿಎಂಕೆ:

ಶಕ್ತಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಚ್ಚಳಿಯದ ವರ್ಚಸ್ಸು, ಹಲವು ಗ್ಯಾರಂಟಿ ಯೋಜನೆಗಳ ಯಶಸ್ಸು ಉಚಿತ ಬಸ್ ಪ್ರಯಾಣ, ಲಘು ಆಹಾರ, ಮಹಿಳಾ ಆರ್ಥಿಕ ಸಹಾಯ ಇತ್ಯಾದಿ, ಕಾಂಗ್ರೆಸ್, ಎಂಡಿಎಂಕೆ, ವಿಸಿಕೆ, ಎಡಪಕ್ಷಗಳ ಗಟ್ಟಿ ಮೈತ್ರಿ ಮತ್ತು ಕೇಂದ್ರ ಬಿಜೆಪಿ ವಿರುದ್ಧ ತೀವ್ರ ವಿರೋಧ.

ದೌರ್ಬಲ್ಯ: ಕುಟುಂಬ ರಾಜಕಾರಣದ ಆರೋಪಗಳು, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆಗಳು, ಹಲವು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪಗಳು.


ಅವಕಾಶ: ಉದ್ಯಮ ಸೆಳೆಯುವಲ್ಲಿ ಯಶಸ್ವಿ, ಉದ್ಯೋಗ ಸೃಷ್ಟಿ ಭರವಸೆ, ತಮಿಳು ಹೆಗ್ಗುರುತು ಮತ್ತು ರಾಜ್ಯ ಸ್ವಾಯತ್ತತೆಗೆ ಒತ್ತು.


ಸವಾಲು: ನಟ ವಿಜಯ್ ಅವರ ಟಿವಿಕೆ ಪ್ರವೇಶ, ನೀಟ್ ರದ್ದು ಮತ್ತು ಪೆಟ್ರೋಲ್ ಸಬ್ಸಿಡಿ ಭರವಸೆಗಳ ಈಡೇರಿಕೆಯಲ್ಲಿ ವೈಫಲ್ಯ.

ಎಐಎಡಿಎಂಕೆ:


ಶಕ್ತಿ: ಓ.ಪನ್ನೀರ್‌ಸೆಲ್ವಂ ಸೇರ್ಪಡೆಯಾದ ನಂತರ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರೇ ಪ್ರಶ್ನಾತೀತ ನಾಯಕ. ಬಲಿಷ್ಠ ಸಂಘಟನಾ ಶಕ್ತಿ, ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯಕರ್ತರು, ಬಿಜೆಪಿ, ಪಿಎಂಕೆ, ಎಎಂಎಂಕೆಗಳ ಮೈತ್ರಿ.


ದೌರ್ಬಲ್ಯ: ಪನ್ನೀರ್‌ಸೆಲ್ವಂ ಹೋದ ನಂತರ ಥೇನೈ ಜಿಲ್ಲೆ ಮತ್ತು ಮುಕ್ಕಾಲತ್ತೋರ್ ಸಮುದಾಯದಲ್ಲಿ ಹೊಡೆತ, ಡಿಎಂಡಿಕೆ ಪಕ್ಷ ಡಿಎಂಕೆ ಕೂಟಕ್ಕೆ ಸೇರ್ಪಡೆಯಿಂದ ಹಿನ್ನಡೆ ಸಾಧ್ಯತೆ.
Lavie Luxe Women's Merci25 Flap Satchel Handbag for Women | Satchel Bag for Work | Ladies purse | Stylish Shoulder Bag | Gift For Women


ಅವಕಾಶ: ಬಿಜೆಪಿ ಸೇರಿದಂತೆ ಮೈತ್ರಿಕೂಟದಿಂದ ಹಲವು ಸಮುದಾಯಗಳ ಮತ, ಪಳನಿಸ್ವಾಮಿ ಅವರ ನಾಯಕತ್ವ, ಕಾವೇರಿ ಸಮಸ್ಯೆಯಲ್ಲಿ ರಾಜ್ಯ ಪರ ಹೋರಾಟ, ಮೋದಿ-ಶಾ ಪ್ರಚಾರ.


ಸವಾಲು: ಉದ್ಯಮ ಸೆಳೆಯುವಲ್ಲಿ ಡಿಎಂಕೆ ಮೇಲುಗೈ, ಸ್ಟಾಲಿನ್ ಅವರ ವರ್ಚಸ್ಸು, ಪಕ್ಷದ ಹಲವು ನಾಯಕರು ಡಿಎಂಕೆಗೆ ಸೇರ್ಪಡೆ, ಯುವ ಮತದಾರರಲ್ಲಿ ವಿಜಯ್ ಟಿವಿಕೆಗೆ ಸೆಳೆತ.

ಟಿವಿಕೆ:


ಶಕ್ತಿ: ನಟ ಥಲಪತಿ ವಿಜಯ್ ಅವರ ಭಾರಿ ಅಭಿಮಾನಿ ಬಳಗ, ಯುವ ಮತದಾರರ ಆಕರ್ಷಣೆ, ಸಾಮಾಜಿಕ ನ್ಯಾಯ, ದ್ವಿಭಾಷಾ ನೀತಿ ಸಿದ್ಧಾಂತಗಳು, ಹಲವು ಗ್ಯಾರಂಟಿ ಘೋಷಣೆಗಳು.
ಇದನ್ನು ಓದಿ: ಪಂಚರಾಜ್ಯ ಚುನಾವಣೆ ಹಾಗೂ ಕರ್ನಾಟಕದ ಎರಡು ಕ್ಷೇತ್ರಗಳಿಗೆ ಉಪಸಮರ ಘೋಷಣೆ; ಮೇ 4ಕ್ಕೆ ಫಲಿತಾಂಶ!


ದೌರ್ಬಲ್ಯ: ರಾಜಕೀಯ ಅನುಭವ ಕೊರತೆ, ಸಿನಿಮಾ ಶೈಲಿಯ ಭಾಷಣಗಳ ಮೇಲೆ ಟೀಕೆ, ಏಕವ್ಯಕ್ತಿ ಪಕ್ಷ ವಿಜಯ್ ಅವರೊಬ್ಬರೇ ಪ್ರಚಾರಕ, ಕರೂರು ಪ್ರಚಾರ ಸಭೆಯಲ್ಲಿ ಕಾಲ್ತುಳಿತ ಘಟನೆಯಿಂದ ಕೆಟ್ಟ ಹೆಸರು.


ಅವಕಾಶ: ದ್ರಾವಿಡೇತರ ಪಕ್ಷಗಳ ನಿರ್ವಾತ ತುಂಬುವ ಸಾಧ್ಯತೆ, ಯುವಕರನ್ನು ಆಕರ್ಷಿಸುವ ಶಕ್ತಿ.

.
ಸವಾಲು: ಕರೂರು ಕಾಲ್ತುಳಿತದಂತಹ ಘಟನೆಗಳಿಂದ ಕಪ್ಪುಚುಕ್ಕಿ, ಏಕಾಂಗಿ ಸ್ಪರ್ಧೆಯಿಂದ ಅಧಿಕಾರ ದೂರ, ಡಿಎಂಕೆ-ಎಐಎಡಿಎಂಕೆಯಿಂದ ಪ್ರಬಲ ಸ್ಪರ್ಧೆ.

ತಮಿಳುನಾಡು 2026 ಚುನಾವಣೆಯಲ್ಲಿ ಡಿಎಂಕೆಯ ಅಧಿಕಾರ ಉಳಿಸಿಕೊಳ್ಳುವುದು, ಎಐಎಡಿಎಂಕೆಯ ಮರಳಿ ಬರಲು ಪ್ರಯತ್ನ ಮತ್ತು ಟಿವಿಕೆಯ ಯುವ ಆಕರ್ಷಣೆಯ ಮೂಲಕ ಮೂರು ಮುಖ್ಯ ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ನಿರೀಕ್ಷಿಸಲಾಗಿದೆ. ಯುವ ಮತದಾರರು ಮತ್ತು ಮೈತ್ರಿಕೂಟಗಳು ನಿರ್ಣಾಯಕವಾಗಲಿವೆ.ಇದನ್ನು ಓದಿ:ಬಿಜೆಪಿಯು ಮಮತಾ 'ಹೊರಹಾಕಲ್ಪಟ್ಟವರು' ಎಂದು ಘೋಷಿಸಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ!