Skip to main content
ವಿಡಿಯೋ
cinema

ಸಲ್ಮಾನ್ ಖಾನ್ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಈಗ ‘ಮಾತೃಭೂಮಿ’ ಎಂದು ಹೆಸರು ಬದಲಾವಣೆ..! ಯಾಕೆ ಗೊತ್ತಾ..?

By Ram Chethan
ಸಲ್ಮಾನ್ ಖಾನ್ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಈಗ ‘ಮಾತೃಭೂಮಿ’ ಎಂದು ಹೆಸರು ಬದಲಾವಣೆ..! ಯಾಕೆ ಗೊತ್ತಾ..?

ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾಗೆ ಚಿತ್ರತಂಡ ಏಕಾಏಕಿ ‘ಮಾತೃಭೂಮಿ’ ಎಂಬ ಹೊಸ ಶೀರ್ಷಿಕೆ ನೀಡಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಆದರೆ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಗೊಂದಲಕ್ಕೂ ಕಾರಣವಾಗಿದೆ

ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾದ ಶೀರ್ಷಿಕೆಯಲ್ಲಿ ಅಚ್ಚರಿಯ ಬದಲಾವಣೆ ನಡೆದಿದೆ. ಮೊದಲು ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಘೋಷಿಸಲಾಗಿದ್ದ ಈ ಚಿತ್ರಕ್ಕೆ ಈಗ ‘ಮಾತೃಭೂಮಿ’ ಎಂಬ ಹೊಸ ಹೆಸರು ಇಡಲಾಗಿದೆ. ಚಿತ್ರತಂಡ ಯಾವುದೇ ಮುನ್ನೋಟವಿಲ್ಲದೆ ಈ ಬದಲಾವಣೆಯನ್ನು ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಮಾರ್ಚ್ 16ರಂದು ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರಲ್ಲಿ “ಯುದ್ಧಕ್ಕೆ ಶಾಂತಿ ಸಿಗಲಿ” ಎಂಬ ಸಂದೇಶ ನೀಡಿರುವುದು ಗಮನ ಸೆಳೆದಿದೆ. Peter England Men's Slim Tapered Jeans | Denim | Casual Wear | Modern Fit

ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಗಾಯಗೊಂಡ ಸೈನಿಕನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಮುಖದೊಂದಿಗೆ ಮುಳ್ಳುತಂತಿಗಳಿಂದ ಸುತ್ತಿಕೊಂಡ ಕಂಬವನ್ನು ಹಿಡಿದು ನಿಂತಿರುವ ಅವರ ಲುಕ್ ಚಿತ್ರಕ್ಕೆ ಗಂಭೀರವಾದ ಯುದ್ಧದ ಹಿನ್ನೆಲೆಯನ್ನು ಸೂಚಿಸುತ್ತದೆ. ಪೋಸ್ಟರ್‌ನಲ್ಲಿ ‘ಮಾತೃಭೂಮಿ’ ಎಂಬ ಶೀರ್ಷಿಕೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಆದರೆ ಚಿತ್ರದ ಬಿಡುಗಡೆ ದಿನಾಂಕವನ್ನು ಹೊಸ ಪೋಸ್ಟರ್‌ನಲ್ಲಿ ಉಲ್ಲೇಖಿಸದಿರುವುದು ಅಭಿಮಾನಿಗಳಲ್ಲಿ ಗೊಂದಲ ಉಂಟುಮಾಡಿದೆ. ಈ ಹಿಂದೆ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು.ಇದನ್ನು ಓದಿ:‘ಬಾಸ್’ ಟೀಸರ್‌ ವಿರುದ್ದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕಿಡಿ..! ಚಿತ್ರತಂಡಕ್ಕೆ ನೋಟಿಸ್‌..! ಇಲ್ಲಿದೆ ಸಂಪೂರ್ಣ ಮಾಹಿತಿ

ಚಿತ್ರದ ನಿರ್ದೇಶಕ ಅಪೂರ್ವ ಲಖಿಯಾ ಈ ಬದಲಾವಣೆ ಬಗ್ಗೆ ಮಾತನಾಡಿ, ಆರಂಭದಲ್ಲೇ ‘ಬ್ಯಾಟಲ್ ಆಫ್ ಗಲ್ವಾನ್’ ಮತ್ತು ‘ಮಾತೃಭೂಮಿ’ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು ಎಂದು ತಿಳಿಸಿದ್ದಾರೆ. ಕಥೆಯ ಮೂಲ ಅರ್ಥ ಸೈನಿಕರ ತ್ಯಾಗ, ಮಾನವೀಯತೆ ಮತ್ತು ದೇಶಪ್ರೇಮವನ್ನು ಹೇಳುವುದರಿಂದ ‘ಮಾತೃಭೂಮಿ’ ಎಂಬ ಹೆಸರು ಹೆಚ್ಚು ಸೂಕ್ತವೆಂದು ತೀರ್ಮಾನಿಸಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ‘ಸಲ್ಮಾನ್ ಖಾನ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.