Skip to main content
ವಿಡಿಯೋ
1/2
crime

ಬಿಜೆಪಿ ನಾಯಕನ ಕೊಲೆ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ, ಆರು ಆರೋಪಿಗಳ ವಿರುದ್ಧ ಕೇಸ್ ದಾಖಲು..!

By Sushmitha R
ಬಿಜೆಪಿ ನಾಯಕನ ಕೊಲೆ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ, ಆರು ಆರೋಪಿಗಳ ವಿರುದ್ಧ ಕೇಸ್ ದಾಖಲು..!

2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುದುಚೇರಿಯ ಪ್ರಭಾವಿ ಬಿಜೆಪಿ ನಾಯಕ ಸೆಂಥಿಲ್ ಕುಮಾರನ್ ಅವರ ಭೀಕರ ಕೊಲೆ ಪ್ರಕರಣ ಈಗ ಮತ್ತೊಂದು ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ.

 

ಪುದುಚೇರಿ: 2023ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪುದುಚೇರಿಯ ಪ್ರಭಾವಿ ಬಿಜೆಪಿ ನಾಯಕ ಸೆಂಥಿಲ್ ಕುಮಾರನ್ ಅವರ ಭೀಕರ ಕೊಲೆ ಪ್ರಕರಣ ಈಗ ಮತ್ತೊಂದು ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ.

ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆಯನ್ನು ಹಳಿ ತಪ್ಪಿಸಲು ಸಂಚು ರೂಪಿಸಿದ ಆರೋಪದ ಮೇಲೆ ಆರು ಮಂದಿ ಆರೋಪಿಗಳ ವಿರುದ್ಧ ಇದೀಗ ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ.

 

ಪ್ರಕರಣದ ಮತ್ತು ಬೆದರಿಕೆ:

ಕಳೆದ ವರ್ಷ ಸೆಂಥಿಲ್ ಕುಮಾರನ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಅಮಾನವೀಯ ಹತ್ಯೆಯು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. rytras Women Kurta with Palazzo Pant Set

ಪ್ರಸ್ತುತ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆದರೆ, ವಿಚಾರಣೆಯ ಗತಿಯನ್ನು ಬದಲಿಸಲು ಮತ್ತು ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಗಂಭೀರ ವಿಷಯ ಬೆಳಕಿಗೆ ಬಂದಿದೆ.

ಸಾಕ್ಷಿಗಳು ನ್ಯಾಯಾಲಯದಲ್ಲಿ ಸತ್ಯ ನುಡಿಯದಂತೆ ತಡೆಯಲು ಆರು ಮಂದಿ ಆರೋಪಿಗಳು ಸಂಚು ರೂಪಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.ಇದನ್ನು ಓದಿ;ಮೆಕ್ಸಿಕೋ ಡ್ರಗ್ ಕಾರ್ಟೆಲ್‌ನ ದೊರೆ ನೆಮೆಸಿಯೊ "ಎಲ್ ಮೆಂಚೊ" ಒಸೆಗುರಾ ಸರ್ವಾಂಟೆಸ್‌ನ ಉದಯ ಮತ್ತು ಪತನ

ತನಿಖಾ ಸಂಸ್ಥೆಗಳ ಕಟ್ಟುನಿಟ್ಟಿನ ಕ್ರಮ:

ನ್ಯಾಯದ ಹಾದಿಯನ್ನು ಸುಗಮಗೊಳಿಸಲು ತನಿಖಾ ತಂಡವು ಆರು ಮಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದೆ. ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಮತ್ತು ಸಾಕ್ಷಿಗಳ ಮೇಲೆ ಒತ್ತಡ ಹೇರುವುದು ಅಪರಾಧವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.ಇದನ್ನು ಓದಿ;ಶಾಲಾ ವಾರ್ಷಿಕೋತ್ಸವದಲ್ಲಿ ರಕ್ತಪಾತ; ಕಲ್ಲು ಎಸೆದನೆಂಬ ಶಂಕೆಯ ಮೇಲೆ ಯುವಕನನ್ನ ಥಳಿಸಿ ಕೊಂದ ಪಾಪಿಗಳು!