ಅಮೀಬಾ ಹೋಲಿಕೆ: ಆರ್‌ಎಸ್‌ಎಸ್ ಶತಮಾನೋತ್ಸವದ ಸಂದರ್ಭದಲ್ಲೇ ಬಿಜೆಪಿಯನ್ನು ಟೀಕಿಸಿದ ಅವರು, ಬಿಜೆಪಿ ಒಂದು 'ಅಮೀಬಾ' ಇದ್ದಂತೆ, ರಾಜಕೀಯ ಲಾಭಕ್ಕಾಗಿ ಯಾವುದೇ ಸಂದರ್ಭದಲ್ಲೂ ಎಲ್ಲಿ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂದರು.
ಅಮಿತ್ ಶಾ ವಿರುದ್ಧ ವಾಗ್ದಾಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದ ಅವರು, "ತಂದೆ ದೇಶಪ್ರೇಮ ಮತ್ತು ರಾಷ್ಟ್ರೀಯತೆಯ ಪಾಠ ಮಾಡುತ್ತಾರೆ, ಆದರೆ ಮಗ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುತ್ತಾರೆ" ಎಂದು ಲೇವಡಿ ಮಾಡಿದರು.
ಪಕ್ಷದ ನಿಷ್ಠೆ: ಶಿವಸೇನೆಯನ್ನು ಒಡೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ ಅವರು, "ನನ್ನನ್ನು ಬಿಟ್ಟು ಹೋದವರು 'ಹಿತ್ತಾಳೆ', ಇಂದಿಗೂ ನನ್ನ ಜೊತೆಗಿರುವವರು 'ಚಿನ್ನ'" ಎಂದು ಬಣ್ಣಿಸಿದರು.
ಸಾಮಾಜಿಕ ಸೌಹಾರ್ದತೆ: ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಬಿಜೆಪಿ ಹಿಂದೂ-ಮುಸ್ಲಿಂ ಸಂಬಂಧವನ್ನು ಹಾಳುಮಾಡುತ್ತಿದೆ ಮತ್ತು ಇಲ್ಲದ ವಿಚಾರಗಳನ್ನು ದೊಡ್ಡದು ಮಾಡುತ್ತಿದೆ ಎಂದು ದೂರಿದರು.
ಸೋನಮ್ ವಾಂಗ್ಚುಕ್ ಬಂಧನ: ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಖಂಡಿಸಿದ ಅವರು, ಬಿಜೆಪಿ ಆಡಳಿತದಲ್ಲಿ ಹಕ್ಕುಗಳಿಗಾಗಿ ಹೋರಾಡುವುದು ಅಪರಾಧವಾಗಿದೆ. ಈ ಕಾರಣಕ್ಕಾಗಿಯೇ ನಾವು 'ಜನ ಸುರಕ್ಷಾ ಕಾಯ್ದೆ'ಯನ್ನು ವಿರೋಧಿಸುತ್ತಿದ್ದೇವೆ ಎಂದರು.
ಮಣಿಪುರ ಮತ್ತು ಮುಂಬೈ ಅನುದಾನ: ಮಣಿಪುರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಮತ್ತು ಅಲ್ಲಿಗೆ ಭೇಟಿ ನೀಡಲು ತಡಮಾಡಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಮುಂಬೈನ ಪ್ರವಾಹ ಪೀಡಿತ ಪ್ರದೇಶಗಳಿಗೆ ಅನುದಾನ ನೀಡುವ ಬದಲು ಸರ್ಕಾರ ಚುನಾವಣೆಗೆ ಹಣವನ್ನು ಬಳಸುತ್ತಿದೆ ಎಂದು ಆರೋಪಿಸಿದರು.
ತಮಿಳುನಾಡು 'ಕಾರ್ಟೆಲ್ ತೊಟ್ಟಿಲು' ಆಗಿದೆಯೇ?
ಏಕನಾಥ್ ಶಿಂದೆ ವಿರುದ್ಧ ಕಿಡಿ: ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ, ತನ್ನ ಪಕ್ಷವನ್ನು ಕದ್ದಿದ್ದಾರೆ ಎಂದು ಆರೋಪಿಸಿ ಏಕನಾಥ್ ಶಿಂದೆ ಅವರ ವಿರುದ್ಧವೂ ಠಾಕ್ರೆ ಆಕ್ರೋಶ ಹೊರಹಾಕಿದರು.