Skip to main content
ವಿಡಿಯೋ
1/2
crime

ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ: ಸಂಬಳ ಕೊಡದ ಮಾಲೀಕನಿಗೆ 80 ಲಕ್ಷದ ಬರೆ ಎಳೆದ ತಂದೆ-ಮಗ..!

By Sushmitha R
ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ: ಸಂಬಳ ಕೊಡದ ಮಾಲೀಕನಿಗೆ 80 ಲಕ್ಷದ ಬರೆ ಎಳೆದ ತಂದೆ-ಮಗ..!

ಸಿಲಿಕಾನ್ ಸಿಟಿಯ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 12 ಗಂಟೆಗಳ ಅವಧಿಯಲ್ಲಿ ಭೇದಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಪೊಲೀಸರು ಕೇವಲ 12 ಗಂಟೆಗಳ ಅವಧಿಯಲ್ಲಿ ಭೇದಿಸಿದ್ದಾರೆ.

ಎಲೆಕ್ಟ್ರಾನಿಕ್ಸ್ ಶಾಪ್ ಒಂದರಲ್ಲಿ ಕೆಲಸಕ್ಕಿದ್ದ ಯುವಕನೇ ತನ್ನ ತಂದೆಯ ಸಹಾಯದೊಂದಿಗೆ ಈ ಕೃತ್ಯ ಎಸಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಸಂಬಳದ ಕಿರಿಕ್ ಕಳ್ಳತನಕ್ಕೆ ಕಾರಣ:

ಕೆಲಸದಲ್ಲಿದ್ದ ಹೇಮಂತ್‌ಗೆ ಸಂಬಳದ ವಿಷಯದಲ್ಲಿ ಮಾಲೀಕ ನಿತೀಶ್ ಜೊತೆ ತೀವ್ರ ಜಗಳವಾಗಿತ್ತು. ಇದರಿಂದ ಸಿಟ್ಟಿಗೆದ್ದ ಹೇಮಂತ್ ಕೆಲಸ ಬಿಟ್ಟು ಹೊರಬಂದಿದ್ದನು.

ಮಾಲೀಕನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ ಈತ, ಕಳ್ಳತನಕ್ಕೆ ಸ್ಕೆಚ್ ಹಾಕಿದನು. ಈ ಕೆಲಸಕ್ಕೆ ತನ್ನ ತಂದೆಯನ್ನೇ ಜೊತೆಗೆ ಕರೆದುಕೊಂಡಿದ್ದು ವಿಶೇಷ.

80 ಲಕ್ಷ ಮೌಲ್ಯದ ಬಿಡಿಭಾಗಗಳ ಕಳವು:

ಕಳೆದ ಮಾರ್ಚ್ 13 ರಂದು ತಂದೆ-ಮಗ ಸೇರಿ ಎಲೆಕ್ಟ್ರಾನಿಕ್ಸ್ ಶಾಪ್‌ನ ಶಟರ್ ಮುರಿದು ಒಳನುಗ್ಗಿದ್ದರು. ಇಡೀ ಲ್ಯಾಪ್‌ಟಾಪ್ ಹೊತ್ತೊಯ್ಯುವ ಬದಲು, ಹೆಚ್ಚು ಬೆಲೆ ಬಾಳುವ 700 ಲ್ಯಾಪ್‌ಟಾಪ್‌ಗಳ RAM ಬೋರ್ಡ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಮಾತ್ರ ವ್ಯವಸ್ಥಿತವಾಗಿ ಬಿಚ್ಚಿ ಕಳವು ಮಾಡಿದ್ದರು. ಕಳುವಾದ ಈ ಬಿಡಿಭಾಗಗಳ ಒಟ್ಟು ಮೌಲ್ಯ ಸುಮಾರು 80 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.VK Women's Floral Printed Maxi Western Dress Midi Party Dress for Women

ಪೊಲೀಸರ ಮಿಂಚಿನ ಕಾರ್ಯಾಚರಣೆ:

ಮಾಲೀಕ ನಿತೀಶ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ಗೋವಿಂದಪುರ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕೇವಲ 12 ಗಂಟೆಯೊಳಗೆ ತಂದೆ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 2.29 ಲಕ್ಷ ನಗದು ಹಾಗೂ ಕಳವು ಮಾಡಲಾಗಿದ್ದ ಎಲ್ಲಾ 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನು ಓದಿ :ಪತಿ-ಪತ್ನಿ ಜಗಳ ಬಿಡಿಸಲು ಹೋದ ವ್ಯಕ್ತಿಯ ಬಲಿ; ಬುದ್ಧ ಸರ್ಕಲ್‌ನಲ್ಲಿ ಮಚ್ಚಿನಿಂದ ಕೊಚ್ಚಿ ಬರ್ಭರ ಹತ್ಯೆ!

ಸದ್ಯ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳತನದಲ್ಲಿ ತಂದೆಯನ್ನೇ ಭಾಗಿ ಮಾಡಿದ ಮಗನ ಕೃತ್ಯ ಕಂಡು ಪೊಲೀಸರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಇದನ್ನು ಓದಿ:ಬೆಳಗಾವಿಯಲ್ಲಿ 'ತಲ್ವಾರ್' ಹಿಡಿದು ಆಟವಾಡೋ ಪುಡಿ ರೌಡಿಗಳಿಗೆ ಪೊಲೀಸರ ಬ್ರೇಕ್: ಒಂದೇ ತಿಂಗಳಲ್ಲಿ 7 ಕೇಸ್ ದಾಖಲು!