Skip to main content
ವಿಡಿಯೋ
1/2
general

ಸಾಲ ಮಾಡಿ ಬೆಳೆದ ಬೆಳೆ ರಾಶಿ ಮಳೆ ಪಾಲು: ಆಲಿಕಲ್ಲಿಗೆ ಅನ್ನದಾತನ ಬದುಕು ಮಣ್ಣುಪಾಲು..!

By Sushmitha R
ಸಾಲ ಮಾಡಿ ಬೆಳೆದ ಬೆಳೆ ರಾಶಿ ಮಳೆ ಪಾಲು: ಆಲಿಕಲ್ಲಿಗೆ ಅನ್ನದಾತನ ಬದುಕು ಮಣ್ಣುಪಾಲು..!

ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆಯ ಅವಾಂತರ ಸೃಷ್ಟಿಯಾಗಿದೆ. ದೇವದುರ್ಗ ತಾಲೂಕಿನ ಪರತಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿವೆ.

ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆಯ ಅವಾಂತರ ಸೃಷ್ಟಿಯಾಗಿದೆ. ದೇವದುರ್ಗ ತಾಲೂಕಿನ ಪರತಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನಾಶವಾಗಿವೆ.

ಭತ್ತ, ಜೋಳ, ಸಜ್ಜೆ, ಮೆಣಸಿನಕಾಯಿ ಮುಂತಾದ ಬೆಳೆಗಳು ಹಾನಿಗೊಳಗಾಗಿವೆ. ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಶ್ರಮಪಟ್ಟು ಕಾಪಾಡಿಕೊಂಡಿದ್ದ ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ಒಂದೇ ರಾತ್ರಿಯಲ್ಲಿ ಮಣ್ಣುಪಾಲಾಗಿವೆ.

ಅನ್ನದಾತರ ಗೋಳು ಏನು ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ. ಸಾಲ ಮಾಡಿ, ಕಷ್ಟಪಟ್ಟು ಬೆಳೆದ ಬೆಳೆಗಳು ಹಾಳಾಗುವುದರಿಂದ ರೈತರು ಆರ್ಥಿಕವಾಗಿ ಕಂಗಾಲಾಗಿದ್ದಾರೆ. ದೇವದುರ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಿಂದಾಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. GoSriKi Women’s Cotton Blend Embroidered Kurta Set with Pant & Dupatta – Straight Calf‑Length, 3/4 Sleeve, Round Neck – Elegant Ethnic Attire (5 Colors, S–5XL)

ರೈತರು "ಎಂಥಾ ಸ್ಥಿತಿ ಬಂತು" ಎಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಕಟಾವು ಮಾಡಲು ಸಿದ್ಧವಾಗಿದ್ದ ಭತ್ತದ ರಾಶಿಗಳು, ಜೋಳದ ಬೆಳೆಗಳು ಆಲಿಕಲ್ಲುಗಳ ದಾಳಿಗೆ ಒಳಗಾಗಿ ಹಾನಿಗೊಳಗಾಗಿವೆ.ಈ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚಾಗಿದೆ.

ಸರ್ಕಾರ ಮತ್ತು ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಶಾಸಕರು ಹಾಗೂ ತಹಶಿಲ್ದಾರರು ರೈತರ ಬಗ್ಗೆ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.ಇದನ್ನು ಓದಿ: ಬೆಂಗಳೂರಿನಲ್ಲಿ ವಿಪರೀತ ಚಳಿ ಮತ್ತು ಮಳೆಯ ಸಾಧ್ಯತೆ..!

ಪರಿಹಾರ ಘೋಷಣೆ ಮಾಡದೇ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚಿಗೆ ರಾಜ್ಯದ ಹಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ರಾಯಚೂರು ಜಿಲ್ಲೆಯ ಸಿಂಧನೂರು, ದೇವದುರ್ಗ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಈ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.

ಹವಾಮಾನ ಬದಲಾವಣೆಯಿಂದಾಗಿ ಅಕಾಲಿಕ ಮಳೆ, ಆಲಿಕಲ್ಲುಗಳು ಸಾಮಾನ್ಯವಾಗುತ್ತಿವೆ. ರೈತರು ಸರ್ಕಾರದಿಂದ ತ್ವರಿತ ಪರಿಹಾರ, ಬೀಮಾ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನು ಓದಿ :'ದಿತ್ವಾ' ಚಂಡಮಾರುತದ ಎಫೆಕ್ಟ್‌: ಬೆಂಗಳೂರು ಸೇರಿ 14 ಜಿಲ್ಲೆಗಳಲ್ಲಿ ಇಂದು ಮಳೆ ಮುನ್ಸೂಚನೆ!

ಇಲ್ಲದಿದ್ದರೆ ಅವರ ಬದುಕು ಇನ್ನಷ್ಟು ಕಷ್ಟಕರವಾಗುತ್ತದೆ. ಈ ಘಟನೆಯಿಂದ ರಾಯಚೂರಿನ ರೈತ ಸಮುದಾಯದಲ್ಲಿ ಆತಂಕ ಹೆಚ್ಚಾಗಿದ್ದು, ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ.ಇದನ್ನು ಓದಿ:ಬೆಂಗಳೂರಿನಲ್ಲಿ ದಟ್ಟಮಂಜು - 41 ವಿಮಾನ ಹಾರಾಟ ವಿಳಂಬ