Skip to main content
ವಿಡಿಯೋ
1/2
general

ಸಿಲೆಂಡರ್ ಅಭಾವ: ಬೆಂಗಳೂರಿನ ಆಶ್ರಮಗಳಲ್ಲೂ ತೀವ್ರ ಸಂಕಷ್ಟ..!

By Sushmitha R
ಸಿಲೆಂಡರ್ ಅಭಾವ: ಬೆಂಗಳೂರಿನ ಆಶ್ರಮಗಳಲ್ಲೂ ತೀವ್ರ ಸಂಕಷ್ಟ..!

ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಅಭಾವ ತೀವ್ರಗೊಂಡಿದ್ದು, ಇದು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ನಿರಾಶ್ರಿತರ ಆಶ್ರಮಗಳಿಗೂ ಭಾರಿ ಸಮಸ್ಯೆಯಾಗಿದೆ.

ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ಅಭಾವ ತೀವ್ರಗೊಂಡಿದ್ದು, ಇದು ಸಾಮಾನ್ಯ ಜನರಿಗೆ ಮಾತ್ರವಲ್ಲದೆ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಮತ್ತು ನಿರಾಶ್ರಿತರ ಆಶ್ರಮಗಳಿಗೂ ಭಾರಿ ಸಮಸ್ಯೆಯಾಗಿದೆ. ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಗ್ಯಾಸ್ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ಗಳು ಸಿಗದೇ ಹೋಟೆಲ್‌ಗಳು, ಪಿಜಿ, ಹಾಸ್ಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ.

ಆದರೆ ಇದರಿಂದ ಹೆಚ್ಚು ನೋವು ಅನುಭವಿಸುತ್ತಿರುವುದು ಸಮಾಜದ ದುರ್ಬಲ ವರ್ಗದ ಆಶ್ರಮಗಳು.ಲಗ್ಗೆರೆಯಲ್ಲಿರುವ ಆಸರೆ ಆಶ್ರಮದಲ್ಲಿ ಸಿಲಿಂಡರ್ ಇಲ್ಲದೇ ಅಡುಗೆ ಮಾಡಲಾಗುತ್ತಿಲ್ಲ. ಆಶ್ರಮದ ಅಧ್ಯಕ್ಷ ನಾಯ್ಡು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನ ಬೇಯಿಸಲು ಸಿಲಿಂಡರ್ ಇಲ್ಲ. ವೃದ್ಧರು, ನಿರಾಶ್ರಿತರು ಊಟ ಮಾಡದೇ ಇರುವ ಪರಿಸ್ಥಿತಿ.

ಸರ್ಕಾರದ ಕಣ್ಣಿಗೆ ಇವರು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಆಶ್ರಮದಲ್ಲಿ ನೂರಾರು ಜನರು ವಾಸಿಸುತ್ತಿದ್ದು, ಪಕ್ಕದ ನಿವಾಸಿಗಳ ಮನೆಯಲ್ಲಿ ಅಡುಗೆ ಮಾಡಿಸಿ ಊಟ ವಿತರಿಸಲಾಗುತ್ತಿದೆ. ಇದು ತಾತ್ಕಾಲಿಕ ಪರಿಹಾರವಷ್ಟೇ.Shining Diva Fashion 18k Gold & Silver Plated Pearl Jewellery Set | Latest Stylish Design Fancy Traditional Jewellery | Trendy Celebrity Inspired Designer Jewellery

ಅಂತೆಯೇ ನೆಲಮಂಗಲದ ಸೊಂಡಿಕೊಪ್ಪದ ಸ್ನೇಹ ಜೀವ ಆಶ್ರಮದಲ್ಲೂ ಇದೇ ಸಮಸ್ಯೆ. ಸಿಲಿಂಡರ್ ಇಲ್ಲದೇ ಒಲೆ ಹಾಕಿ ಅಡುಗೆ ಮಾಡಬೇಕಾಗಿ ಬಂದಿದೆ. ಆಶ್ರಮದಲ್ಲಿ ನೂರಾರು ಅನಾಥ ಮಕ್ಕಳು, ವೃದ್ಧರು ಇದ್ದಾರೆ.

ಬಿಪಿ, ಶುಗರ್ ರೋಗಿಗಳು ಇರುವುದರಿಂದ ಸಮಯಕ್ಕೆ ಸರಿಯಾಗಿ ಆಹಾರ ಸಿಗದಿದ್ದರೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವ ಭಯವಿದೆ. ಹೋಟೆಲ್, ಪಿಜಿಗಳಿಗೆ ಮಾತ್ರ ಸರ್ಕಾರದ ಗಮನ? ಆಶ್ರಮದಲ್ಲಿರುವವರು ಮನುಷ್ಯರಲ್ಲವೇ? ಎಂದು ಆಶ್ರಮದ ನಿರ್ವಾಹಕರು ಪ್ರಶ್ನಿಸುತ್ತಿದ್ದಾರೆ.ವಿಧಾನಸಭೆಯಲ್ಲಿ 'ಇವ ನಮ್ಮವ ಇವ ನಮ್ಮವ ಮಸೂದೆ-2026' ಮಂಡಿಸಿದ ಸಚಿವ ಪ್ರಿಯಾಂಕ್ ಖರ್ಗೆ..!

ರಾಜ್ಯ ಸರ್ಕಾರವು ಆಸ್ಪತ್ರೆಗಳು, ಶಾಲೆಗಳು, ಹಾಸ್ಟೆಲ್‌ಗಳಿಗೆ ಪೂರೈಕೆಯನ್ನು ಆದ್ಯತೆ ನೀಡುತ್ತಿದೆ ಎಂದು ಹೇಳಿದ್ದರೂ, ಆಶ್ರಮಗಳಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಕಾಳಸಂತೆಗಳು ಚುರುಕಾಗಿವೆ ಮೂರು ಪಟ್ಟು ಹಣಕ್ಕೆ ಸಿಲಿಂಡರ್ ಮಾರಾಟವಾಗುತ್ತಿದೆ. ಇದರಿಂದ ದುಬಾರಿ ದರದಲ್ಲಿ ಖರೀದಿಸಲು ಆಶ್ರಮಗಳಿಗೆ ಸಾಧ್ಯವಿಲ್ಲ.

ಕೆಲವು ಆಶ್ರಮಗಳು ಒಲೆ ಅಥವಾ ಇತರ ವಿಧಾನಗಳನ್ನು ಬಳಸುತ್ತಿವೆಯಾದರೂ, ಇದು ಸುರಕ್ಷಿತವಲ್ಲ ಮತ್ತು ದೀರ್ಘಕಾಲೀನ ಪರಿಹಾರವಲ್ಲ.ಈ ಸಂಕಷ್ಟದಿಂದ ದುರ್ಬಲ ವರ್ಗದ ಜನರು ಹೆಚ್ಚು ನೋವು ಅನುಭವಿಸುತ್ತಿದ್ದಾರೆ. ಅಸ್ಸಾಂ ಕುರುಕ್ಷೇತ್ರ 2026: ಹಿಮಂತ ಬಿಸ್ವ ಶರ್ಮಾ ಕೋಟೆಗೆ ಲಗ್ಗೆ ಇಡುತ್ತಾರಾ ಈ 'ಮೂವರು ಗೊಗೊಯ್'ಗಳು?

ಸರ್ಕಾರ ತ್ವರಿತವಾಗಿ ಹಸ್ತಕ್ಷೇಪಿಸಿ, ಆಶ್ರಮಗಳಿಗೆ ವಿಶೇಷ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಈ ಆಶ್ರಮಗಳಲ್ಲಿ ಊಟದ ಸಮಸ್ಯೆಯಿಂದ ಆರೋಗ್ಯ ಸಂಕಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಜನರು ಈ ಬಗ್ಗೆ ಗಮನ ಹರಿಸಬೇಕು ಮತ್ತು ಸರ್ಕಾರಕ್ಕೆ ಒತ್ತಡ ತರಬೇಕು.