Skip to main content
ವಿಡಿಯೋ
1/2
politics

ದಾರಿ ತಪ್ಪಿದ ಸದನ: ಜನರ ಸಮಸ್ಯೆ ಬಿಟ್ಟು ಡಿ.ಕೆ.ಶಿ - ಮುನಿರತ್ನ ಕಿತ್ತಾಟಕ್ಕೆ ವೇದಿಕೆಯಾದ ವಿಧಾನಸಭೆ..!

By Sushmitha R
ದಾರಿ ತಪ್ಪಿದ ಸದನ: ಜನರ ಸಮಸ್ಯೆ ಬಿಟ್ಟು ಡಿ.ಕೆ.ಶಿ - ಮುನಿರತ್ನ ಕಿತ್ತಾಟಕ್ಕೆ ವೇದಿಕೆಯಾದ ವಿಧಾನಸಭೆ..!

ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಬೆಂಗಳೂರು ಅಭಿವೃದ್ಧಿ ಚರ್ಚೆಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ವೈಯಕ್ತಿಕ ವಾಗ್ವಾದ ಸ್ಫೋಟಗೊಂಡಿತು.

ಬೆಂಗಳೂರು: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಬೆಂಗಳೂರು ಅಭಿವೃದ್ಧಿ ಚರ್ಚೆಯ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ವೈಯಕ್ತಿಕ ವಾಗ್ವಾದ ಸ್ಫೋಟಗೊಂಡಿತು.

ಬೆಂಗಳೂರು ಅಭಿವೃದ್ಧಿ ಒಬ್ಬನಿಂದಲೇ ಸಾಧ್ಯವಿಲ್ಲ. ಆಡಳಿತ ಮತ್ತು ವಿರೋಧ ಪಕ್ಷಗಳ ಸಹಕಾರದಿಂದಲೇ ಸಾಧ್ಯ. ನಿಮ್ಮೆಲ್ಲರ ಸಲಹೆಗಳು ಅಗತ್ಯ ಎಂದು ವಿನಯಪೂರ್ವಕ ಹೇಳಿದರು. ಆದರೆ, ಚರ್ಚೆಯ ಕೊನೆಯ ಹಂತದಲ್ಲಿ ಮುನಿರತ್ನ ಅವರಿಗೆ ಉತ್ತರ ನೀಡುವಾಗ ವಿಷಯ ವೈಯಕ್ತಿಕ ಮಟ್ಟಕ್ಕೆ ತಿರುಗಿತು. Shining Diva Fashion Latest Stylish Design Fancy Traditional Necklace Jewellery Set for Women (16781s)

ಡಿ.ಕೆ.ಶಿವಕುಮಾರ್ ಮುತ್ತು ರತ್ನಗಳಿಗೆ ಕೊನೆಯಲ್ಲೇ ಉತ್ತರ ಹೇಳುತ್ತೇನೆ ಎಂದು ಹೇಳಿದ್ದಕ್ಕೆ ಮುನಿರತ್ನ ಪ್ರತಿಕ್ರಿಯಿಸಿದರು. ಇಬ್ಬರೂ ಪರಸ್ಪರ ತೀವ್ರ ಟೀಕೆಗಳನ್ನು ಮಾಡಿ ಸವಾಲು ಹಾಕಿಕೊಂಡರು.

ಕಾಂಗ್ರೆಸ್ ಶಾಸಕರು ಮುನಿರತ್ನ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು. ಮುನಿರತ್ನ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರ ಕೇಳುತ್ತಾ ಉಪಮುಖ್ಯಮಂತ್ರಿ ವಿರುದ್ಧ ಗಟ್ಟಿಯಾಗಿ ಮಾತನಾಡಿದ್ದು ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು. ಅಸ್ಸಾಂ ಮತಸಮರ: 126 ಕ್ಷೇತ್ರಗಳಿಗೆ 722 ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ..!

ಸದನದಲ್ಲಿ ಕೋಲಾಹಲ ಎದ್ದಿತು. ಸಭಾಧ್ಯಕ್ಷ ಖಾದರ್ ಅವರು ಮಧ್ಯ ಪ್ರವೇಶಿಸಿ ಮುನಿರತ್ನ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದರೂ ಅವರು ಪಟ್ಟುಹಿಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ವಿ. ಸುನೀಲ್ ಕುಮಾರ್ ಅವರು ಮುನಿರತ್ನ ಅವರನ್ನು ಸಂಯಮ ವಹಿಸುವಂತೆ ಸಲಹೆ ನೀಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ.

ಖಾದರ್ ಅವರು ಇಂತಹ ಘಟನೆಗಳು ನಡೆಯಬಾರದು. ಇಲ್ಲಿ ನಡೆದದ್ದು ಹಳ್ಳಿಹಳ್ಳಿಗಳಿಗೂ ತಲುಪುತ್ತದೆ. ಸದನದ ಘನತೆ ಕಾಪಾಡಿಕೊಳ್ಳಬೇಕು. ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಎಲ್ಲ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.ಕಾಂಗ್ರೆಸ್ ವಕ್ತಾರ ಪವನ್ ಖೇರಾ ಪತ್ರಿಕಾಗೋಷ್ಠಿ: ಮೋದಿ ಸರ್ಕಾರದ ವಿದೇಶಾಂಗ ನೀತಿಯ ವಿರುದ್ಧ ವಾಗ್ದಾಳಿ

ಇನ್ನು ಮುಂದೆ ಇಂತಹ ವರ್ತನೆ ನಡೆದರೆ ಹೆಸರು ಹೇಳಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಈ ಘಟನೆಯು ಸಂಸದೀಯ ಪರಂಪರೆಗೆ ಕಳಂಕ ತರುವಂತಿದೆ ಎಂದು ಎಲ್ಲ ಪಕ್ಷಗಳ ನಾಯಕರು ಖಂಡಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಚರ್ಚೆಯು ವೈಯಕ್ತಿಕ ಜಗಳಕ್ಕೆ ತಿರುಗಿದ್ದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಅಮಿತ್ ಶಾ ಅವರ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆ, 2026: 16,000 ಎನ್‌ಜಿಒಗಳಿಗೆ ಸಂಕಷ್ಟ