ಬೆಂಗಳೂರು: ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಕಾಲ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮಾರ್ಚ್ 31ರಂದು ಕೊನೆಗೊಳ್ಳುತ್ತಿದೆ. ಆದರೆ, ಏಪ್ರಿಲ್ 1ರಿಂದ ಬದಲಿಯಾಗಿ ಜಾರಿಯಾಗುವ 'ವಿಬಿ ಜಿ ರಾಮ್ ಜಿ' ಯೋಜನೆಯ ಸಣ್ಣ ಲಕ್ಷಣಗಳೂ ಕಾಣಿಸುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆಯನ್ನು ಗ್ರಾಮೀಣ ಕಾರ್ಮಿಕರಿಗೆ ಮತ್ತು ಗ್ರಾಮಗಳಿಗೆ ತಲುಪಿಸಲು ಅಗತ್ಯವಾದ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಸಿದ್ಧಪಡಿಸಬೇಕಿತ್ತು. ಆದರೆ, ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ. ನಿಧಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ. ಗ್ರಾಮ ಪಂಚಾಯಿತಿಗಳನ್ನು ವರ್ಗೀಕರಿಸಲು ಅಂತಿಮ ನಿಯತಾಂಕಗಳು ತಯಾರಾಗಿಲ್ಲ.
ಸಾಮಾಜಿಕ ಲೆಕ್ಕಪರಿಶೋಧನೆಯಂತಹ ಪ್ರಮುಖ ಪ್ರಕ್ರಿಯೆಗಳು ಕೂಡಾ ವ್ಯಾಖ್ಯಾನಿಸಲ್ಪಟ್ಟಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಸಿಗೆ ಸಮಯವು ಗ್ರಾಮೀಣ ಜನರಿಗೆ ಉದ್ಯೋಗದ ಗರಿಷ್ಠ ಬೇಡಿಕೆಯ ತಿಂಗಳುಗಳಾಗಿವೆ. ಉದ್ಯೋಗ ಖಾತರಿಗೆ ಹೆಚ್ಚು ಅವಲಂಬನೆ ವ್ಯಕ್ತಗೊಳ್ಳುವ ಸಮಯ ಇದು. ಇಂತಹ ಕಷ್ಟಕರ ಸಮಯದಲ್ಲೇ ಉದ್ಯೋಗ ಒದಗಿಸುವ ಯೋಜನೆ ಸ್ಥಗಿತಗೊಂಡಿದೆ. Clara 925 Sterling Silver Swirl Pendant Earrings Chain Necklace Jewellery Set | Platinum Plated, Swiss Zirconia | Modern Gift for Women and Girls
ಅನುಮೋದನೆಗಳು ವಿಳಂಬವಾಗುತ್ತಿವೆ. ಬೇಡಿಕೆಯ ಹೊರತಾಗಿಯೂ ಕುಟುಂಬಗಳು ಉದ್ಯೋಗ ಪಡೆಯಲಾಗುತ್ತಿಲ್ಲ ಎಂಬ ವರದಿಗಳು ಬಂದಿವೆ. ಕೇಂದ್ರ ಸರ್ಕಾರವು ಕಾನೂನಾತ್ಮಕ ಉದ್ಯೋಗ ಖಾತರಿಯನ್ನು ತೆಗೆದು ನಿಯಮ ಆಧಾರಿತ ಹಂಚಿಕೆಗೆ ಬದಲಾವಣೆ ಮಾಡಿರುವುದು ನಕಾರಾತ್ಮಕ ಪರಿಣಾಮ ತೋರಿಸಲು ಆರಂಭಿಸಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ 'ವಿಬಿ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾರತವನ್ನು ಪರಿವರ್ತಿಸುತ್ತದೆ ಎಂದು ಹೇಳಿಕೊಂಡಿತ್ತು. ಆದರೆ, ಅದು ಜನರ ಜೀವನೋಪಾಯಕ್ಕೆ ಮಾರಕವಾಗಿ, ನಕಾರಾತ್ಮಕ ಪರಿವರ್ತನೆ ತರುತ್ತಿದೆ ಎಂಬ ವಾಸ್ತವ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಳೆಯ ನರೇಗಾ ಯೋಜನೆಯಲ್ಲಿ ಬೇಡಿಕೆ ಆಧಾರಿತ ಉದ್ಯೋಗ ಖಾತರಿ ಇತ್ತು. ಹೊಸ ಯೋಜನೆಯಲ್ಲಿ ರಾಜ್ಯಗಳ ಮೇಲೆ ಹೆಚ್ಚು ಆರ್ಥಿಕ ಹೊರೆ ಬೀಳುತ್ತಿದೆ.ಬಿಜು ಪಟ್ನಾಯಕ್ ವಿರುದ್ಧ ಅಮಿತ್ ಶಾ ಆಪ್ತ ನಿಶಿಕಾಂತ್ ದುಬೆ ವಾಗ್ದಾಳಿ: ಸಿಐಎ ಏಜೆಂಟ್ ವಿವಾದ
ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗುವ ಸಾಧ್ಯತೆಯಿದೆ. ಕೇಂದ್ರವು ನಿರ್ದೇಶಿಸಿದ ಸ್ಥಳಗಳಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತದೆ ಎಂಬ ಮಿತಿಗಳು ಗ್ರಾಮೀಣ ಕಾರ್ಮಿಕರಿಗೆ ತೊಂದರೆ ಉಂಟುಮಾಡುತ್ತವೆ ಎಂದು ಸಚಿವರು ಎಚ್ಚರಿಸಿದ್ದಾರೆ. ಕರ್ನಾಟಕ ಸರ್ಕಾರ ಈ ಬದಲಾವಣೆಯ ವಿರುದ್ಧ ರಾಜಕೀಯ ಮತ್ತು ಕಾನೂನು ಹೋರಾಟ ನಡೆಸುತ್ತಿದೆ.
ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ ಪತ್ರಗಳ ಮೂಲಕ ಜನರಿಗೆ ಮಾಹಿತಿ ನೀಡುವ ಅಭಿಯಾನವನ್ನೂ ಆರಂಭಿಸಿದೆ. ನರೇಗಾ ಯೋಜನೆ ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬಾಗಿತ್ತು. ಹೊಸ ಯೋಜನೆಯಲ್ಲಿ 125 ದಿನಗಳ ಉದ್ಯೋಗ ಖಾತರಿ ಘೋಷಿಸಲಾಗಿದ್ದರೂ, ನಿಧಿ ಮತ್ತು ನಿಯಮಗಳ ಕೊರತೆಯಿಂದಾಗಿ ಜಾರಿಯಲ್ಲಿ ಸಮಸ್ಯೆಗಳು ಕಾಣಿಸುತ್ತಿವೆ. ಗ್ರಾಮೀಣ ಕುಟುಂಬಗಳ ಜೀವನಾಧಾರಕ್ಕೆ ಇದು ದೊಡ್ಡ ಆಘಾತವಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.ಬಂಗಾಳದಲ್ಲಿ 'ಭಯ' ವರ್ಸಸ್ 'ವಿಶ್ವಾಸ' - ಅಮಿತ್ ಶಾ ರಣಕಹಳೆ..!