ಕೊಡಗು ಜಿಲ್ಲೆಯ ಎಲಮ್ಮೆಮಾಡಿನಲ್ಲಿ ನಡೆದ ಮದುವೆಯ ಹಿಂದಿನ ರಾತ್ರಿ ಮದುಮಗನ ಸ್ನೇಹಿತರು ತುಳುನಾಡಿನ ಆಚರಣೆಯಾದ ದೈವ ನರ್ತನವನ್ನು ಹೋಲುವಂತಹ ವೇಷವನ್ನು ಮದುಮಗನಿಗೆ ಹಾಕಿಸಿದ್ದಾರೆ.
ಅಷ್ಟೇ ಅಲ್ಲದೆ, ದೈವದ ಮುಖವರ್ಣಿಕೆ ಮತ್ತು ವೇಷಭೂಷಣಗಳನ್ನು ಅಣಕಿಸುತ್ತಾ, ಅಶ್ಲೀಲವಾಗಿ ಕುಣಿಯುತ್ತಾ ಹುಚ್ಚಾಟ ಮೆರೆದಿದ್ದಾರೆ. ಈ ಅತಿರೇಕದ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.YouBella Jewellery Stylish Gold Plated Floral Necklace Jewellery Set with Earrings and Ring for Women and Girls
ತುಳುನಾಡಿನ ಸಂಸ್ಕೃತಿಯಲ್ಲಿ ದೈವಗಳಿಗೆ ಅತ್ಯಂತ ಪವಿತ್ರ ಸ್ಥಾನವಿದೆ. ದೈವದ ವೇಷ ಹಾಕುವುದು ಕೇವಲ ಮನರಂಜನೆಯಲ್ಲ, ಅದು ಶ್ರದ್ಧೆ ಮತ್ತು ಭಕ್ತಿಯ ಸಂಕೇತ. ಅನ್ಯ ಧರ್ಮೀಯರು ಈ ಪವಿತ್ರ ಆಚರಣೆಯನ್ನು ಅಪಹಾಸ್ಯ ಮಾಡಿರುವುದು ದೈವ ಆರಾಧಕರು ಮತ್ತು ನರ್ತಕರ ಮನಸ್ಸಿಗೆ ಆಳವಾದ ಗಾಯ ಮಾಡಿದೆ. ಈ ಘಟನೆಯನ್ನು ಖಂಡಿಸಿ ದೈವ ಆರಾಧಕರ ಒಕ್ಕೂಟ ಮತ್ತು ನರ್ತಕರ ಸಂಘವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ.
ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.ಸಿದ್ದಗಂಗೆಯಲ್ಲಿ ಸಂಭ್ರಮದ ಸಡಗರ: ಶಿವಕುಮಾರ ಶ್ರೀಗಳ ಜಯಂತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ...!
ಸೌಹಾರ್ದತೆಯಿಂದ ಇರಬೇಕಾದ ಸಮಾಜದಲ್ಲಿ ಇಂತಹ ಕೃತ್ಯಗಳು ಅಶಾಂತಿ ಉಂಟುಮಾಡುತ್ತವೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ಮುಖಂಡರು ಕಿಡಿಕಾರಿದ್ದಾರೆ.
ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮದುವೆ ಸಂಭ್ರಮದ ಹೆಸರಿನಲ್ಲಿ ಮತ್ತೊಂದು ಧರ್ಮದ ನಂಬಿಕೆಯನ್ನು ಅಣಕಿಸುವುದು ಖಂಡನೀಯ. ಈ ಘಟನೆಯು ಸಮಾಜದ ಶಾಂತಿ ಕದಡುವ ಮುನ್ನ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಆರ್‌ಸಿಬಿ ಅಭಿಮಾನಿಗಳೇ ಗಮನಿಸಿ: ಮಾರ್ಚ್ 28ರ ಪಂದ್ಯಕ್ಕೆ ಸಂಚಾರ ಮಾರ್ಗ ಬದಲಾವಣೆ; ಎಲ್ಲೆಲ್ಲಿ ಪಾರ್ಕಿಂಗ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!