Skip to main content
general

ಹೊಸ ಆರ್ಥಿಕ ವರ್ಷದ ಮೊದಲ ದಿನವೇ ದುಬಾರಿ: ನೀರಿನ, ವಿದ್ಯುತ್ ಮತ್ತು ಟೋಲ್ ದರ ಏರಿಕೆ..!

By Sushmitha R
ಹೊಸ ಆರ್ಥಿಕ ವರ್ಷದ ಮೊದಲ ದಿನವೇ ದುಬಾರಿ: ನೀರಿನ, ವಿದ್ಯುತ್ ಮತ್ತು ಟೋಲ್ ದರ ಏರಿಕೆ..!

ಹೊಸ ಆರ್ಥಿಕ ವರ್ಷ 2026-27ರ ಮೊದಲ ದಿನವಾದ ಇಂದಿನಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರು ನಗರದ ನೀರಿನ ದರಗಳಲ್ಲಿ ಏರಿಕೆಯಾಗಲಿದೆ.

ಹೊಸ ಆರ್ಥಿಕ ವರ್ಷ 2026-27ರ ಮೊದಲ ದಿನವಾದ ಇಂದಿನಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರು ನಗರದ ನೀರಿನ ದರಗಳಲ್ಲಿ ಏರಿಕೆಯಾಗಲಿದೆ. ಇದರಿಂದ ಗ್ರಾಹಕರಿಗೆ ನೇರ ಹಣಕಾಸು ಹೊರೆ ಬೀಳಲಿದೆ.

ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಶೇ. 3ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದೆ. ಸಾಮಾನ್ಯ ಕಾರುಗಳಿಗೆ 5ರಿಂದ 10 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಯಿದೆ. ವಾಣಿಜ್ಯ ಬಳಕೆಯ ವಾಹನಗಳಿಗೆ 15ರಿಂದ 40 ರೂಪಾಯಿ ಅಧಿಕ ಪಾವತಿಸಬೇಕಾಗುತ್ತದೆ. ಸಗಟು ಬೆಲೆ ಸೂಚ್ಯಂಕ ಗೆ ಅನುಗುಣವಾಗಿ ಈ ಹೆಚ್ಚಳ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, NHAI ತನ್ನ ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂಪಾಯಿ ಹೆಚ್ಚಿಸಿದೆ. ಹಿಂದೆ 3,000 ರೂಪಾಯಿ ಇದ್ದ ವಾರ್ಷಿಕ ಪಾಸ್ ಈಗ 3,075 ರೂಪಾಯಿಗೆ ಏರಿಕೆಯಾಗಲಿದೆ. ಈ ಬದಲಾವಣೆಯೂ ಇವತ್ತಿನಿಂದ ಜಾರಿಗೆ ಬರಲಿದೆ. ZENEME Gold-Plated Matte Finish Velvet White American Diamonds Studded Bangles Set Of 36 For Girls and Women

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೂಡ ಏಪ್ರಿಲ್ 1ರಿಂದ ನೀರಿನ ದರವನ್ನು ಶೇ.3ರಷ್ಟು ಹೆಚ್ಚಿಸುತ್ತಿದೆ. ಇದು ವಾರ್ಷಿಕ ಸ್ವಯಂಚಾಲಿತ ಏರಿಕೆಯಾಗಿದ್ದು, ಬೆಂಗಳೂರಿಗರಿಗೆ ಮತ್ತೊಂದು ಹೊರೆಯಾಗಲಿದೆ. ಈ ಹೆಚ್ಚಳವು ಎಲ್ಲಾ ವರ್ಗದ ಗ್ರಾಹಕರಿಗೆ ಅನ್ವಯವಾಗಲಿದೆ.

ಇನ್ನು ವಿದ್ಯುತ್ ದರದ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ದರ ಪರಿಷ್ಕರಣೆ ಮಾಡಿದೆ. ಎಸ್ಕಾಂಗಳ ಹಿಂದಿನ ಆದಾಯ ಖೋತಾ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ! ಕರೆಂಟ್, ನೀರು ಮತ್ತು ಟೋಲ್ ದರ ದುಬಾರಿ

ಪ್ರಮುಖ ಬದಲಾವಣೆಗಳು:

LT-3A ವಾಣಿಜ್ಯ: 7.00 ರೂ. → 7.10 ರೂ. ಕಿ.ವ್ಯಾ.ಗೆ 235 ರೂ.

LT-5 ಕೈಗಾರಿಕೆ: 4.50 ರೂ. → 5.20 ರೂ. ಹೆಚ್‌ಪಿ.ಗೆ 165 ರೂ.

HT-2A ಕೈಗಾರಿಕೆ: 6.60 ರೂ. → 6.70 ರೂ. ಕೆವಿ.ಗೆ 365 ರೂ.

HT-2B ವಾಣಿಜ್ಯ: 5.95 ರೂ. → 6.90 ರೂ. ಕೆವಿ.ಗೆ 390 ರೂ.

ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಬಿಲ್ 1 ಲಕ್ಷ ರೂ. ದಾಟಿದರೆ ಪ್ಯಾನ್ ಕಡ್ಡಾಯ. ಬೆಂಗಳೂರು ಸೇರಿದಂತೆ ಹೆಚ್ಚುವರಿ 4 ನಗರಗಳು ಶೇ. 50 HRA ಸೌಲಭ್ಯ ಪಟ್ಟಿಗೆ ಸೇರ್ಪಡೆಯಾಗಿವೆ. ರೈಲು ಟಿಕೆಟ್ ರದ್ದುಪಡಿಸುವಲ್ಲಿ ಹೊಸ ನಿಯಮಗಳು ಜಾರಿಯಾಗಲಿವೆ.

ಉದ್ಯೋಗಿಯ ಮೂಲ ವೇತನವು ಒಟ್ಟು ವೇತನದಲ್ಲಿ ಕನಿಷ್ಠ ಶೇ. 50 ಇರಬೇಕು ಎಂಬ ಹೊಸ ಕಾರ್ಮಿಕ ಸಂಹಿತೆ ಜಾರಿಯಾಗುತ್ತಿದೆ. ಟೋಲ್‌ಗಳಲ್ಲಿ ನಗದು ಪಾವತಿ ಸಂಪೂರ್ಣ ಸ್ಥಗಿತಗೊಳ್ಳಲಿದೆ.ಮಾನವೀಯತೆ ಮೆರೆದು ₹6 ಲಕ್ಷ ನೀಡಿದ್ರೂ ವಿದೇಶಿ ಪ್ರವಾಸಿಗನ ವಿರುದ್ಧವೇ ಕೇಸ್ ದಾಖಲಿಸಿದ ಕುಟುಂಬಸ್ಥರು!

ಹೊಸ ಆದಾಯ ತೆರಿಗೆ ಕಾಯಿದೆಯಡಿ ಬ್ಯಾಂಕ್‌ಗಳಲ್ಲಿ ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ಒಳಗಿನ ಠೇವಣಿಗೆ ಪ್ಯಾನ್ ನಮೂದಿಸುವ ಅಗತ್ಯವಿಲ್ಲ. ಹೊಸ ಆರ್ಥಿಕ ವರ್ಷದ ಈ ಏರಿಕೆಗಳು ಸಾಮಾನ್ಯ ಜನರ ಜೀವನ ವೆಚ್ಚವನ್ನು ಹೆಚ್ಚಿಸುವ ಸಾಧ್ಯತೆಯಿದೆ. ವಿಶೇಷವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳು ಇದರ ಪರಿಣಾಮಕ್ಕೆ ಒಳಗಾಗಲಿವೆ.ಕುವೈತ್‌ನಲ್ಲಿ ಯುದ್ಧದ ಕಾರ್ಮೋಡ: ವಿದ್ಯುತ್ ಮತ್ತು ನೀರು ಶುದ್ಧೀಕರಣ ಘಟಕದ ಮೇಲೆ ಇರಾನ್ ದಾಳಿ..!