Skip to main content
ವಿಡಿಯೋ
politics

ಆಪರೇಷನ್ ಎಪಿಕ್ ಫ್ಯೂರಿ ಅಂತ್ಯದ ಹಂತಕ್ಕೆ: ಇರಾನ್ ಸೇನೆ ಧ್ವಂಸ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್

By prasanna jodidar
ಆಪರೇಷನ್ ಎಪಿಕ್ ಫ್ಯೂರಿ ಅಂತ್ಯದ ಹಂತಕ್ಕೆ: ಇರಾನ್ ಸೇನೆ ಧ್ವಂಸ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್

ಇರಾನ್‌ಗೆ ಟ್ರಂಪ್ ಅಂತಿಮ ಗಡುವು: ಏಪ್ರಿಲ್ 6ರೊಳಗೆ ಶರಣಾಗದಿದ್ದರೆ ಇಡೀ ದೇಶದ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ - 'ಶಿಲಾಯುಗ'ಕ್ಕೆ ತಳ್ಳುವ ಎಚ್ಚರಿಕೆ...!

ಬುಧವಾರ ಸಂಜೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಿಂದ 'ಆಪರೇಷನ್ ಎಪಿಕ್ ಫ್ಯೂರಿ' ಕುರಿತು 19 ನಿಮಿಷಗಳ ಕಾಲ ಭಾಷಣ ಮಾಡಿದರು. ಭಾಷಣವು ಇರಾನ್ ನಾಯಕತ್ವಕ್ಕೆ ಅತ್ಯಂತ ಕಠಿಣವಾದ ಎಚ್ಚರಿಕೆಯನ್ನು ನೀಡಿದೆ.

ಇರಾನ್ ಮಿಲಿಟರಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿರುವುದಾಗಿ ಅಧ್ಯಕ್ಷರು ವೇಳೆ ಪ್ರತಿಪಾದಿಸಿದರು. ಇರಾನ್ ನೌಕಾಪಡೆ ಮತ್ತು ವಾಯುಪಡೆಯ ಸಾಮರ್ಥ್ಯಗಳು ಬಹುತೇಕ ನಾಶವಾಗಿವೆ ಮತ್ತು ಇರಾನ್ ಪರಮಾಣು ಕೇಂದ್ರಗಳು ನಿಷ್ಕ್ರಿಯಗೊಂಡಿವೆ ಎಂದು ಅವರು ಹೇಳಿದರು. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಯುದ್ಧವು ಈಗ ಅಂತಿಮ ಹಂತದಲ್ಲಿದ್ದು, ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಅಮೆರಿಕವು ಇರಾನ್ನಿಂದ ಹಿಂತಿರುಗಲಿದೆ ಎಂದು ಅವರು ತಿಳಿಸಿದರು. ಮೊಜ್ತಾಬಾ ಖಮೇನಿ ಇನ್ನೂ ಅಧಿಕಾರದಲ್ಲಿದ್ದರೂ ಸಹ, ಇರಾನ್ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಅಮೆರಿಕ ಈಗಾಗಲೇ ಸಾಧಿಸಿದೆ ಎಂದು ಅವರು ಸಂದರ್ಭದಲ್ಲಿ ಹಕ್ಕು ಮಂಡಿಸಿದರು.

ಭಾಷಣದ ಅತ್ಯಂತ ನಿರ್ಣಾಯಕ ಅಂಶವೆಂದರೆ ಇರಾನ್ ಆಂತರಿಕ ಮೂಲಸೌಕರ್ಯಗಳಿಗೆ ನೀಡಿದ ನೇರ ಬೆದರಿಕೆ. ಬರುವ ಸೋಮವಾರ, ಏಪ್ರಿಲ್ 6, 2026 ರಂದು ರಾತ್ರಿ 8:00 ಗಂಟೆಯೊಳಗೆ ಒಪ್ಪಂದಕ್ಕೆ ಬರದಿದ್ದರೆ, ಅಮೆರಿಕವು ಇರಾನ್ ಪ್ರತಿಯೊಂದು ವಿದ್ಯುತ್ ಉತ್ಪಾದನಾ ಸ್ಥಾವರಗಳ ಮೇಲೆ ಏಕಕಾಲದಲ್ಲಿ ಬೃಹತ್ ದಾಳಿ ನಡೆಸಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಯುದ್ಧವನ್ನು ಕೊನೆಗೊಳಿಸಲು ಇರಾನ್ ಅನ್ನು ಮತ್ತೆ "ಶಿಲಾಯುಗಕ್ಕೆ"  ತಳ್ಳುವ ಕ್ರಮ ಇದಾಗಿದೆ ಎಂದು ಅವರು ಬಣ್ಣಿಸಿದರು. ಆದರೆ, ಭವಿಷ್ಯದ ಪುನರ್ನಿರ್ಮಾಣಕ್ಕಾಗಿ ತಾವು ಇರಾನ್ ತೈಲ ಮೂಲಸೌಕರ್ಯಗಳನ್ನು ಬಿಟ್ಟಿದ್ದೇವೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. ಅಲ್ಪಸಂಖ್ಯಾತ ಸಂಸ್ಥೆಗಳ ಮೇಲೆ ಎಫ್‌ಸಿಆರ್‌ಎ ಬಿಸಿ: ಕೇಂದ್ರಕ್ಕೆ ಸಿಬಿಸಿಐನಿಂದ ವಿಶೇಷ ಮನವಿ

ಹಿಂದೆ ಘೋಷಿಸಲಾಗಿದ್ದ 15 ಅಂಶಗಳ ಸಾರಾಂಶದೊಂದಿಗೆ ಟ್ರಂಪ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಇರಾನ್ ಪರಮಾಣು ಚಟುವಟಿಕೆಗಳ ಸಂಪೂರ್ಣ ಸ್ಥಗಿತ, ಹಾರ್ಮುಜ್ ಜಲಸಂಧಿಯ ಪುನರಾರಂಭ ಮತ್ತು ಹೌತಿಗಳು, ಹಮಾಸ್ ಹಾಗೂ ಹಿಜ್ಬುಲ್ಲಾಗಳನ್ನು ನಿರ್ಮೂಲನೆ ಮಾಡುವ ಮೂಲಕ ಪ್ರಾದೇಶಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ. ಶಾಂತಿಯುತ ತಮಿಳುನಾಡನ್ನು ಕದಡಲು ಬಿಡುವುದಿಲ್ಲ: ಬಿಜೆಪಿಗೆ ಎಚ್ಚರಿಕೆ ನೀಡಿದ ಎಂ.ಕೆ. ಸ್ಟಾಲಿನ್..!

ಇರಾನ್ ಕದನ ವಿರಾಮಕ್ಕಾಗಿ ವಿನಂತಿಸಿದೆ ಎಂದು ತಿಳಿಸಿದ ಟ್ರಂಪ್, ಹಾರ್ಮುಜ್ ಜಲಸಂಧಿಯ ಮಾರ್ಗವು ಮುಕ್ತವಾದ ನಂತರವಷ್ಟೇ ಅದರ ಬಗ್ಗೆ ಯೋಚಿಸುವುದಾಗಿ ಹೇಳಿದರು. ತಮ್ಮ ಭಾಷಣದಲ್ಲಿ ಕಟುವಾದ ಎಚ್ಚರಿಕೆಗಳನ್ನು ನೀಡಿದರೂ ಸಹ, ಟ್ರಂಪ್ ಅವರು ಸಂಘರ್ಷದಿಂದ ಬೇಗನೆ ಹೊರಬರುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ಅಮೆರಿಕ ನೀಡಿರುವ ಏಪ್ರಿಲ್ 6 ಗಡುವಿನೊಳಗೆ ಇರಾನ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ