ಮಣಿಪುರ : ಅಮೆರಿಕದ ಮ್ಯಾಥ್ಯೂ ವ್ಯಾನ್ಡೈಕ್ ಮತ್ತು ಆರು ಉಕ್ರೇನಿಯನ್ನರ ಬಂಧನ ಹಾಗೂ ಅವರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯು ಕೇವಲ ಕಾಕತಾಳೀಯವಾಗಿರಬಹುದು. ಆದರೆ ಮಣಿಪುರದಿಂದ ಬರುತ್ತಿರುವ ಸುದ್ದಿಗಳು "ಈ ಎಲ್ಲದರ ಹಿಂದೆ ಅವರಿದ್ದಾರೆಯೇ?" ಎಂಬ ಸಂಶಯವನ್ನು ಎಲ್ಲರಲ್ಲಿ ಮೂಡಿಸುತ್ತಿವೆ.
ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಏಪ್ರಿಲ್ 1 ರಂದು ಮಹತ್ವದ ಯಶಸ್ಸು ಲಭಿಸಿದೆ. ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ನಡೆಸಲು ಉದ್ದೇಶಿಸಿದ್ದ ಮೂವರು ಸಕ್ರಿಯ ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಬೃಹತ್ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂವರು ವ್ಯಕ್ತಿಗಳು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಕಣಿವೆಯ ಸ್ಥಳೀಯರಿಗೆ ಪೂರೈಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)
ಖಚಿತ ಮಾಹಿತಿಯ ಮೇರೆಗೆ ತೌಬಲ್ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸರು ಮೊಬೈಲ್ ವಾಹನ ತಪಾಸಣಾ ಕೇಂದ್ರವನ್ನು (MVCP) ಸಕ್ರಿಯಗೊಳಿಸಿ ಈ ಬೃಹತ್ ಶಸ್ತ್ರಾಸ್ತ್ರ ಸಂಗ್ರಹವನ್ನು ಪತ್ತೆಹಚ್ಚಿದ್ದಾರೆ. ಸಂಶಯಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಪೊಲೀಸರಿಗೆ ಆಘಾತ ಕಾದಿತ್ತು. ವಾಹನದಲ್ಲಿ 2,340 ಜೀವಂತ ಗುಂಡುಗಳು (7.62 mm ಮತ್ತು 5.56 mm ಸೇರಿದಂತೆ ವಿವಿಧ ಕ್ಯಾಲಿಬರ್ಗಳ ಗುಂಡುಗಳು), ಎರಡು ಹ್ಯಾಂಡ್ ಗ್ರೆನೇಡ್ಗಳು, ಹಲವಾರು ಕಾಂಬ್ಯಾಟ್ ಸಮವಸ್ತ್ರಗಳು, ಯುದ್ಧೋಪಕರಣಗಳು, ಆಕ್ಷೇಪಾರ್ಹ ದಾಖಲೆಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಮೂವರು ವ್ಯಕ್ತಿಗಳು ನಿಷೇಧಿತ ಸಂಘಟನೆಗೆ ಸೇರಿದವರಾಗಿದ್ದು, ಗಡಿಯ ಆಚೆಯಿಂದ ಶಸ್ತ್ರಾಸ್ತ್ರಗಳನ್ನು ಇಂಫಾಲ್ ಪೂರ್ವ ಮತ್ತು ಕಾಂಗ್ಪೋಕ್ಪಿ ನಡುವಿನ ಅಜ್ಞಾತ ಸ್ಥಳಕ್ಕೆ ಸಾಗಿಸುತ್ತಿದ್ದರು. ಇತ್ತೀಚಿನ ದಾಖಲೆಗಳ ಪ್ರಕಾರ, ಭಯೋತ್ಪಾದನಾ ಕೃತ್ಯಗಳನ್ನು ತಡೆಯಲು ಪೊಲೀಸರು ಇಷ್ಟೊಂದು ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದು ಇದೇ ಮೊದಲು. ನಾಸಿಕ್‌ನ ಕಾಮುಕ ದೇವಮಾನವನ ಕರಾಳ ಮುಖ ಬಯಲು: ಮಾಟ-ಮಂತ್ರದ ಹೆಸರಲ್ಲಿ ಅತ್ಯಾಚಾರ..!
ಬಂಧಿತರ ವಿಚಾರಣೆಯ ಆಧಾರದ ಮೇಲೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅರಣ್ಯದ ಅಂಚಿನಲ್ಲಿರುವ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಈ ಮಾರಕ ಆಯುಧಗಳನ್ನು ಯೋಜಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈ ಮದ್ದುಗುಂಡುಗಳು ಮ್ಯಾನ್ಮಾರ್ನಿಂದ ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಶೇಷವೆಂದರೆ, ಅಮೆರಿಕ ಮತ್ತು ಉಕ್ರೇನ್ ಪ್ರಜೆಗಳ ಬಂಧನದ ಬೆನ್ನಲ್ಲೇ ಈ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇವುಗಳ ನಡುವಿನ ನೇರ ಸಂಬಂಧ ಇನ್ನು ದೃಢಪಟ್ಟಿಲ್ಲವಾದರೂ, ತನಿಖೆ ತೀವ್ರವಾಗಿ ನಡೆಯುತ್ತಿದೆ. ಆಪರೇಷನ್ ಎಪಿಕ್ ಫ್ಯೂರಿ ಅಂತ್ಯದ ಹಂತಕ್ಕೆ: ಇರಾನ್ ಸೇನೆ ಧ್ವಂಸ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್
ಮಣಿಪುರದ ಸಂಘರ್ಷದಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪದ ಬಗ್ಗೆ ಗಂಭೀರ ತನಿಖೆಯ ಅಗತ್ಯವಿದೆ.