ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕಗೊಂಡಿರುವ ಗಣತಿದಾರರು ಮೊದಲ ಹಂತದ ಮನೆ ಪಟ್ಟಿ ಕಾರ್ಯದಲ್ಲಿ ನಿಗದಿಪಡಿಸುವ ಪ್ರದೇಶಗಳ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸಿಕೊಂಡರೆ ಜನಗಣತಿ ಕಾರ್ಯ ಸುಲಭವಾಗುತ್ತದೆ ಎಂದು ತಹಶೀಲ್ದಾರ್ ರುಕಿಯಾ ಬೇಗಂ ಹೇಳಿದರು.
ತಾಲ್ಲೂಕು ಆಡಳಿತದಿಂದ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ನೇಮಕಗೊಂಡಿರುವ ಗಣತಿದಾರರಿಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿಖರವಾದ ಅಂಕಿ-ಅಂಶಗಳು ಸಿಗಲು ಈ ಜನಗಣತಿ ಬಹಳ ಮಹತ್ವದ್ದಾಗಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಸಮಯದಲ್ಲಿ ಕೇಳುವ ಪ್ರಶ್ನೆಗಳಿಗೆ ಕೆಲವರು ಸರಿಯಾದ ಉತ್ತರ ನೀಡದೆ ನಿರಾಕರಿಸಬಹುದು.NMII Fancy Glass Golden Beads & Polka Dots Velvet Bangles Set For Women and Girls | Stylish Designer Bangles | Glass Chudi | Women's Fashion Jewellery-Set of 34
ಆ ಸಂದರ್ಭದಲ್ಲಿ ಸಂಯಮದಿಂದ ಮಾತನಾಡಿ, ಜನಗಣತಿಯ ಮಹತ್ವವನ್ನು ಅವರಿಗೆ ಅರ್ಥಮಾಡಿಸುವಲ್ಲಿ ಶ್ರಮಿಸಬೇಕು ಎಂದು ಸೂಚಿಸಿದರು. ಕಾರ್ಯಾಗಾರದಲ್ಲಿ ಆರು ಮಂದಿ ಅನುಭವಿ ಕ್ಷೇತ್ರ ತರಬೇತಿದಾರರು ಅಗತ್ಯ ಮಾಹಿತಿ ನೀಡಲಿದ್ದಾರೆ.
ಯಾವುದೇ ಮಾಹಿತಿ ಸಮರ್ಪಕವಾಗಿ ತಿಳಿಯದಿದ್ದರೆ ಅಥವಾ ಗಣತಿ ಕಾರ್ಯದಲ್ಲಿ ಸಮಸ್ಯೆ ಎದುರಾದರೆ ತಕ್ಷಣವೇ ಕರೆ ಮಾಡಿ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು. ರಾಷ್ಟ್ರೀಯ ಜನಗಣತಿಯ ಮೊದಲ ಹಂತವಾದ ಮನೆ ಮನೆಗಳ ಪಟ್ಟಿ ಸರ್ವೇ ಕಾರ್ಯ ಏಪ್ರಿಲ್ 16ರಿಂದ ಪ್ರಾರಂಭಗೊಳ್ಳಲಿದೆ. ನಿಗದಿಯಂತೆ ಮೇ 15ರಂದು ಪೂರ್ಣಗೊಳ್ಳಲಿದೆ. ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಅಬ್ಬರ: ಬಿಜೆಪಿಯ 'ಸಾಲ'ದ ಆರೋಪಕ್ಕೆ ಅಂಕಿ-ಅಂಶಗಳ ಸಮೇತ ಸಿಎಂ ಖಡಕ್ ತಿರುಗೇಟು!
ಪ್ರತಿಯೊಬ್ಬ ಗಣತಿದಾರರು ತಮಗೆ ನಿಗದಿಪಡಿಸಿದ ಪ್ರದೇಶಗಳ ಮನೆಗಳನ್ನು ಗುರುತಿಸುವ ನಕ್ಷೆ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವ ಮೂಲಕ ಈ ಮಹತ್ವದ ಯೋಜನೆಯ ಯಶಸ್ಸಿಗೆ ಕೊಡುಗೆ ನೀಡಿ’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ರವಿಕುಮಾರ್, ಬಿಆರ್‌ಸಿ ವೆಂಕಟೇಶ್ ಉಪಸ್ಥಿತರಿದ್ದರು.ಭಾರತದ 2027ರ ರಾಷ್ಟ್ರೀಯ ಜನಗಣತಿಯ ಮೊದಲ ಹಂತವಾಗಿ ಮನೆ ಪಟ್ಟಿ ಮತ್ತು ವಸತಿ ಗಣತಿ ಕಾರ್ಯ ಕರ್ನಾಟಕದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯಲಿದೆ. ಇದಕ್ಕೂ ಮುನ್ನ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ ಅವಕಾಶವಿದೆ. ಡಿಜಿಟಲ್ ವಿಧಾನದಲ್ಲಿ ನಡೆಯುವ ಈ ಜನಗಣತಿ ದೇಶದ ಯೋಜನೆಗಳ ರೂಪಿಸುವಿಕೆಗೆ ನಿಖರ ಡೇಟಾ ಒದಗಿಸುತ್ತದೆ.ಬಂಗಾಳದ ನ್ಯಾಯಾಂಗ ನಿಂದನೆಗೆ ಹೊಸ ತಿರುವು: ಎಐಎಂಐಎಂ ಮಾಜಿ ಅಭ್ಯರ್ಥಿ ಸೇರಿ 35 ಮಂದಿ ಪೊಲೀಸ್ ವಶಕ್ಕೆ
ಗಣತಿದಾರರು ತಮ್ಮ ಕ್ಷೇತ್ರದ ನಕ್ಷೆ, ಮನೆಗಳ ವಿವರಗಳನ್ನು ಸರಿಯಾಗಿ ತಯಾರಿಸಿಕೊಂಡರೆ ಕೆಲಸ ಸುಗಮವಾಗುತ್ತದೆ. ಗಣತಿದಾರರು ಮನೆಗೆ ಭೇಟಿ ನೀಡುವಾಗ ಗೌರವಯುತವಾಗಿ ವರ್ತಿಸಬೇಕು. ಜನರು ನೀಡುವ ಮಾಹಿತಿಯನ್ನು ಗೌಪ್ಯವಾಗಿಡುವುದು ಕಡ್ಡಾಯ.
ತರಬೇತಿ ಕಾರ್ಯಾಗಾರದಲ್ಲಿ ಗಣತಿ ಪ್ರಕ್ರಿಯೆ, ಮೊಬೈಲ್ ಅಪ್ಲಿಕೇಶನ್ ಬಳಕೆ, ಪ್ರಶ್ನಾವಳಿ ವಿವರಗಳ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸುವುದು ಪ್ರತಿ ಗಣತಿದಾರರ ಜವಾಬ್ದಾರಿಯಾಗಿದೆ.ಬಾಗಲಕೋಟೆಯಲ್ಲಿ ಯತ್ನಾಳ್ ‘ಪಂಚ್’ ಡೈಲಾಗ್ಸ್: ಒಂದೇ ವೇದಿಕೆಯಲ್ಲಿದ್ದ ನಿರಾಣಿ, ಚರಂತಿಮಠ ಕಾಲೆಳೆದ ಬಸವನಗೌಡ!