ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರದ ಪಾಲಿನ ಬಾಕಿ ಮೊತ್ತ 16,863 ಕೋಟಿ ಬಿಡುಗಡೆ ಮಾಡುವ ಬಗ್ಗೆ ಖಾತರಿ ನೀಡಿದರಷ್ಟೇ ಹೊಸ ಒಪ್ಪಂದಕ್ಕೆ ಸಹಿ ಹಾಕುವುದಾಗಿ ರಾಜ್ಯ ಸರ್ಕಾರ ಕೇಂದ್ರ ಜಲಶಕ್ತಿ ಸಚಿವಾಲಯದ ಎದುರು ಪಟ್ಟು ಹಿಡಿದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿರುವ ಈ ಯೋಜನೆಗೆ 2019ರಿಂದ 2025ರ ಅವಧಿಗೆ ಕೇಂದ್ರ ಸರ್ಕಾರ 28,623 ಕೋಟಿ ಹಂಚಿಕೆ ಮಾಡಿತ್ತು. ಆದರೆ ಈವರೆಗೆ ಕೇವಲ 11,760 ಕೋಟಿ ಮಾತ್ರ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಅಗತ್ಯ ದಾಖಲೆಗಳು ಮತ್ತು ಪ್ರಸ್ತಾವನೆ ಸಲ್ಲಿಸುವಲ್ಲಿ ವಿಳಂಬ ಮಾಡಿದೆ ಎಂಬ ಕಾರಣ ನೀಡಿ ಕೇಂದ್ರ ಈ ಹಿಂದೆ ಬಾಕಿ ಮೊತ್ತ ಬಿಡುಗಡೆ ಮಾಡಲು ನಿರಾಕರಿಸಿತ್ತು.
ಯೋಜನೆಯನ್ನು 2028ರ ಡಿಸೆಂಬರ್ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಮಾರ್ಚ್ 10ರಂದು ಅನುಮೋದನೆ ನೀಡಿತ್ತು. ಜಲ ಜೀವನ್ ಮಿಷನ್ 2.0ಗೆ ಒಟ್ಟು ವೆಚ್ಚವನ್ನು 8.69 ಲಕ್ಷ ಕೋಟಿಗೆ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. AFAST Stylish & Chic Glass Bangle/Kada- Perfect For Home, Regulary, Party And Function, Pack Of 6, Red -A54
ರಾಜ್ಯಗಳಿಗೆ ಹೆಚ್ಚುವರಿಯಾಗಿ 1.51 ಲಕ್ಷ ಕೋಟಿ ಕೇಂದ್ರ ಸಹಾಯ ನೀಡಲು ಸಮ್ಮತಿ ಸೂಚಿಸಲಾಗಿದೆ. ಪರಿಷ್ಕೃತ ಯೋಜನೆಯಲ್ಲಿ ರಚನಾತ್ಮಕ ಬದಲಾವಣೆಗಳಿಗೆ ರಾಜ್ಯಗಳೊಂದಿಗೆ ಹೊಸ ಒಪ್ಪಂದ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.
ಇಲ್ಲಿಯವರೆಗೆ 12 ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಪರಿಷ್ಕೃತ ಷರತ್ತುಗಳನ್ನು ಪೂರೈಸಿದ ಐದು ರಾಜ್ಯಗಳಿಗೆ ಮಾರ್ಚ್ 31ರಂದು ₹1,516 ಕೋಟಿ ಬಿಡುಗಡೆ ಮಾಡಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ, ಮಧ್ಯಪ್ರದೇಶ ಮತ್ತು ಒಡಿಶಾಕ್ಕೆ ಈ ಅನುದಾನ ಸಿಕ್ಕಿದೆ. ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರು ರಾಜ್ಯಗಳ ಪಂಚಾಯತ್ ರಾಜ್ ಸಚಿವರೊಂದಿಗೆ ಸಮಾಲೋಚನಾ ಸಭೆ ನಡೆಸಿದ್ದರು. ಭಾರತೀಯ ಪ್ರಜಾಪ್ರಭುತ್ವದ ವಿಜಯ: ಸಂವಿಧಾನದ ಆಧಾರಸ್ತಂಭಗಳನ್ನು ಅಲುಗಾಡಿಸುವ ಪ್ರಯತ್ನಕ್ಕೆ ಬ್ರೇಕ್! ಸಾಂಸ್ಥಿಕ ಹಿತದೃಷ್ಟಿಯಿಂದ ಐತಿಹಾಸಿಕ ತೀರ್ಪು
ಈ ಸಭೆಯಲ್ಲಿ ಕರ್ನಾಟಕದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತದ ಬಗ್ಗೆ ಪ್ರಸ್ತಾಪಿಸಿದ್ದಾರೆ.“ಮೊದಲು ಒಪ್ಪಂದಕ್ಕೆ ಸಹಿ ಹಾಕಿ, ಬಾಕಿ ಮೊತ್ತದ ಬಗ್ಗೆ ನಂತರ ಚರ್ಚೆ ನಡೆಸೋಣ” ಎಂದು ಪಾಟೀಲ ಅವರು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಪ್ರಿಯಾಂಕ್ ಖರ್ಗೆ ಕೇಂದ್ರ ಮಾರ್ಗಸೂಚಿಯ ಪ್ರಕಾರವೇ ಡಿಪಿಆರ್ ಸಿದ್ಧಪಡಿಸಲಾಗಿತ್ತು.
ಅನುದಾನ ಬಳಕೆ ಪ್ರಮಾಣಪತ್ರವೂ ಒದಗಿಸಲಾಗಿತ್ತು. ಆದರೂ ಬಾಕಿ ಅನುದಾನ ನೀಡದೆ ಕೇಂದ್ರ ಸತಾಯಿಸುತ್ತಿದೆ. ಇದರಿಂದ ರಾಜ್ಯಕ್ಕೆ ಭಾರಿ ಹೊರೆಯಾಗಿದೆ. ಮುಂದೆ ಇಂತಹ ಹೊರೆ ಹೊರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ವಕ್ತಾರರಿದ್ದಂತೆ! ಅಸ್ಸಾಂ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
ಪುನರ್ ರಚಿತ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವಾಲಯ ಲೆಕ್ಕಾಚಾರ ಹಾಕಿದ್ದು, ಕರ್ನಾಟಕಕ್ಕೆ ಹೆಚ್ಚುವರಿಯಾಗಿ 2,500 ಕೋಟಿ ಹೊರೆಯಾಗಲಿದೆ ಎಂದು ಅಂದಾಜಿಸಿದೆ.
ಈ ಲೆಕ್ಕಾಚಾರದ ಕರಡನ್ನು ಹಣಕಾಸು ಇಲಾಖೆಗೆ ಕಳುಹಿಸಿ ಅಭಿಪ್ರಾಯ ಕೇಳಲಾಗಿದೆ.ಈ ಬಿಕ್ಕಟ್ಟು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳ ಪ್ರಗತಿಯನ್ನು ಪ್ರತಿಕೂಲವಾಗಿ ಪ್ರಭಾವಿಸುತ್ತಿದೆ. ರಾಜ್ಯ ಸರ್ಕಾರ ಕೇಂದ್ರದಿಂದ ತುರ್ತು ಬಿಡುಗಡೆಗೆ ಒತ್ತಾಯಿಸುತ್ತಿದೆ.ಕಾಂಗ್ರೆಸ್‌ನ ಕೀಳುಮಟ್ಟದ ರಾಜಕಾರಣ: ಅಸ್ಸಾಂ ಸಿಎಂ ಪತ್ನಿಯ ವಿರುದ್ಧ ಪವನ್ ಖೇರಾ ಸುಳ್ಳು ಆರೋಪ!