ಬಿಗ್ ಬಾಸ್ ಸೀಸನ್ 12ರಲ್ಲಿ ಗೆದ್ದು ಗಮನ ಸೆಳೆದ ಗಿಲ್ಲಿ ನಟ ಈಗ ರಾಜ್ಯದಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್ ಆಗಿ ಹೊರಹೊಮ್ಮಿದ ಇವರಿಗೆ ಅಭಿಮಾನಿಗಳ ಪ್ರೀತಿ ದಿನೇದಿನೇ ಹೆಚ್ಚುತ್ತಿದೆ. ಈ ನಡುವೆ ಗಿಲ್ಲಿ ನಟ ಮುಂದಿನ ಸಿನಿಮಾಗಳ ಹಾದಿ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.Arayna Women's Cotton Printed Floral Straight Kurta with Palazzo Pants and Dupatta
ಈಗ ಆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವಂತೆ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ಗಿಲ್ಲಿ ನಟನಿಗೆ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ನಿರ್ಮಾಣದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಗಿಲ್ಲಿ ನಟನನ್ನು ಹೀರೋ ಆಗಿ ಪರಿಚಯಿಸಲು ಯಶ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಯಶ್ ನಟಿಸಬೇಕಾಗಿದ್ದ ‘ಕಿರಾತಕ 2’ ಸಿನಿಮಾವನ್ನು ಇದೀಗ ಹೊಸ ರೀತಿಯಲ್ಲಿ ರೂಪಿಸಿ, ಅದರಲ್ಲಿ ಗಿಲ್ಲಿ ನಟನನ್ನು ಮುಖ್ಯ ಪಾತ್ರದಲ್ಲಿ ಕಾಣಿಸಲು ಯೋಜನೆ ನಡೆಯುತ್ತಿದೆ. ಈ ಚಿತ್ರವನ್ನು ‘ಮಾನ್ಸ್ಟರ್ ಮೈಂಡ್ಸ್’ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿ ಕೂಡ ಸಿಕ್ಕಿದೆ.ಇದನ್ನು ಓದಿ:ರಾಧಿಕಾ ಪಂಡಿತ್ ಬರ್ತ್‌ಡೇ ಪಾರ್ಟಿಯಲ್ಲಿ ಪ್ರಶಾಂತ್ ನೀಲ್ ಎಂಟ್ರಿ..! ಯಶ್ ಜೊತೆ ಸೀಕ್ರೆಟ್ ಮಾತುಕತೆ..?ಇಲ್ಲಿದೆ ಮಾಹಿತಿ
ಇದಕ್ಕಾಗಿ ಗಿಲ್ಲಿ ನಟ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ತಮ್ಮ ಅಭಿನಯ ಮತ್ತು ಫಿಟ್ನೆಸ್ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ. ಬಿಗ್ ಬಾಸ್ ಮೂಲಕ ಜನಮನ ಗೆದ್ದಿರುವ ಇವರಿಗೆ ಸಿನಿಮಾ ಕ್ಷೇತ್ರದಲ್ಲೂ ದೊಡ್ಡ ಯಶಸ್ಸು ಸಿಗುತ್ತದೆಯೇ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.