Skip to main content
ವಿಡಿಯೋ
general

ಬಿಬಿಸಿ 'ರೆಸ್ಟ್ ಇನ್ ಪೀಸ್'.. ಭಾರತದ ಮಾನ ಹರಾಜು ಹಾಕಲು ಹೊರಟವರಿಗೆ ಈಗ ತಾವೇ ಹರಾಜಾಗುವ ಸ್ಥಿತಿ!

By prasanna jodidar
ಬಿಬಿಸಿ 'ರೆಸ್ಟ್ ಇನ್ ಪೀಸ್'.. ಭಾರತದ ಮಾನ ಹರಾಜು ಹಾಕಲು ಹೊರಟವರಿಗೆ ಈಗ ತಾವೇ ಹರಾಜಾಗುವ ಸ್ಥಿತಿ!

ಭಾರತವನ್ನು ಜರಿಯುತ್ತಾ ಕಾಲ ಕಳೆದ ಬಿಬಿಸಿಗೆ ಈಗ ಬೀಗ ಬೀಳುವ ಕಾಲ!

ಭಾರತದ ಪಾಲಿಗೆ ಇದು ಅತ್ಯಂತ ಶುಭ ಸುದ್ಧಿ; ಬಿಬಿಸಿ ಸಂಸ್ಥೆಯು ಪತನದ ಅಂಚಿನಲ್ಲಿದೆ. ಭಾರತ ವಿರೋಧಿ ಧೋರಣೆಯನ್ನೇ ತನ್ನ ಅಧಿಕೃತ ನೀತಿಯನ್ನಾಗಿ ಮಾಡಿಕೊಂಡಿದ್ದ ಚಾನೆಲ್, ಭಾರತವನ್ನು ಅವಮಾನಿಸಲು ಅಥವಾ ಕೆಟ್ಟದಾಗಿ ಬಿಂಬಿಸಲು ಯಾವುದೇ ಅವಕಾಶವನ್ನೂ ಬಿಡುತ್ತಿರಲಿಲ್ಲ. Amazon Brand - Myx Women's Schiffli Embroidery Ethnic Dress | Fit and Flare | Knee Length (Available in Plus Sizes)

ಕೊನೆಗೂ ಬಹುದಿನಗಳ ನಿರೀಕ್ಷಿತ ಸುದ್ದಿ ಬಂದಿದೆ - ಬಿಬಿಸಿ ದಿವಾಳಿಯ ಹಂತಕ್ಕೆ ತಲುಪಿದೆ. ಹಿಂದೆ ಭಾರತದಲ್ಲಿ ಇದು ಹಲವು ಬಾರಿ ನಿಷೇಧಕ್ಕೊಳಗಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಸಾಕ್ಷ್ಯಚಿತ್ರದ ನಂತರ ಬಿಬಿಸಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಕೂಗು ಕೇಳಿಬಂದಿತ್ತು. ಈಗ ಅವರು ತಾವಾಗಿಯೇ ಕಣ್ಮರೆಯಾಗುತ್ತಿರುವುದು ಭಾರತೀಯರಿಗೆ ನಿರಾಳತೆ ತಂದಿದೆ.

ಏಪ್ರಿಲ್ 2026ರಲ್ಲಿ, ಬಿಬಿಸಿ ತನ್ನ 2,000 ಉದ್ಯೋಗಿಗಳನ್ನು (ಶೇ. 10ರಷ್ಟು ಸಿಬ್ಬಂದಿ) ವಜಾಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಸುಮಾರು 500 ಮಿಲಿಯನ್ ಪೌಂಡ್ ಉಳಿಸುವ ಗುರಿಯನ್ನು ಇದು ಹೊಂದಿದೆ. ಬಿಬಿಸಿ ಇದನ್ನು "ಹಣಕಾಸಿನ ಒತ್ತಡ" ಎಂದು ಕರೆದರೆ, ಅದು ಶೀಘ್ರವೇ ಕುಸಿದುಬೀಳಲಿ ಎಂದು ಜನ ಹಾರೈಸುತ್ತಿದ್ದಾರೆ.

ಯುಕೆ ಜನಸಂಖ್ಯೆಯ ಶೇ. 95 ರಷ್ಟು ಜನರು ಬಿಬಿಸಿ ಸೇವೆ ಬಳಸುತ್ತಿದ್ದರೂ, ಕೇವಲ ಶೇ. 80 ರಷ್ಟು ಮನೆಗಳು ಮಾತ್ರ ಪರವಾನಗಿ ಶುಲ್ಕ ಪಾವತಿಸುತ್ತಿವೆ. ನೆಟ್ಫ್ಲಿಕ್ಸ್, ಯೂಟ್ಯೂಬ್ಗಳಂತಹ ಸಂಸ್ಥೆಗಳ ಪೈಪೋಟಿಯಿಂದಾಗಿ ಬಿಬಿಸಿ ಬಜೆಟ್ ಹದಗೆಟ್ಟಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಪರೀಕ್ಷೆ: ಇಸ್ರೇಲ್-ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರಂಪ್

ಮುಂದಿನ ತಿಂಗಳು ಗೂಗಲ್ ಮಾಜಿ ಕಾರ್ಯನಿರ್ವಾಹಕ ಮ್ಯಾಟ್ ಬ್ರಿಟಿನ್ ಅವರು ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಎಲ್ಲವೂ ಪರಿಶೀಲನೆಯಲ್ಲಿದ್ದು, ಕೆಲವು ಚಾನೆಲ್ ಅಥವಾ ರೇಡಿಯೋ ಕೇಂದ್ರಗಳು ಶಾಶ್ವತವಾಗಿ ಮುಚ್ಚುವ ಸಾಧ್ಯತೆಯಿದೆ. ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಬಿಸಿ ವಿರುದ್ಧ 10 ಬಿಲಿಯನ್ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಸಮರ ಸನ್ನದ್ಧತೆ: ಇರಾನ್‌ಗೆ ಪ್ರತಿದಿನ 400 ಮಿಲಿಯನ್ ಡಾಲರ್ ಹೊಡೆತ ನೀಡಿದ ಅಮೆರಿಕ!

 

ಭಾರತದ ಜನರು ಬಿಬಿಸಿ ತನ್ನ ಶಟರ್ ಎಳೆದು ಕಣ್ಮರೆಯಾಗುವ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.