ಜನವರಿ 25 - ರಾಷ್ಟ್ರೀಯ ಮತದಾರರ ದಿನರಾಷ್ಟ್ರೀಯ ಮತದಾರರ ದಿನದ ಉದ್ದೇಶ ಹಾಗೂ ಪ್ರಮುಖ ಅಂಶಗಳು* 1950 ರ ಜನವರಿ 25 ರಂದು ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಯಿತು.* ಆ ದಿನದ ನೆನಪಿನಲ್ಲಿ 2011 ರಿಂದ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತದೆ.* ರಾಷ್ಟ್ರದ ಯುವ ಜನತೆಗೆ ಮತದಾನದ ಪ್ರಾಮುಖ್ಯತೆಯನ್ನು ಸಾರುವ ಹಾಗೂ ನಾಗರಿಕರಿಗೆ ಅವರ ಹಕ್ಕನ್ನು ಚಲಾಯಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಹಮ್ಮಿಕೊಳ್ಳಲಾಗಿದೆ.* ನಾಗರಿಕರಲ್ಲಿ ಚುನಾವಣೆಯ ಮಹತ್ವವನ್ನು ಮೂಡಿಸಿ ದೇಶದ ಅಭಿವೃದ್ಧಿಗೆ ಯುವ ಜನತೆಯನ್ನು ಪ್ರೇರೇಪಿಸುವ ಕಾರ್ಯಕ್ರಮಗಳು ದೇಶದೆಲ್ಲೆಡೆ ನಡೆಯಬೇಕಿದೆ.