ವಿಮಾನ ಅಲಭ್ಯತೆ, ತಾಂತ್ರಿಕ ಸಮಸ್ಯೆ ಜೂ.12ರಿಂದ 83 ವಿಮಾನಗಳ ರದ್ದುನವದೆಹಲಿ: ಅಹಮದಾಬಾದ್-ಲಂಡನ್ ಏರ್ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ ಮಂಗಳವಾರ ವಿದೇಶಕ್ಕೆ ತೆರಳಬೇಕಿದ್ದ ಬೆಂಗಳೂರು-ಲಂಡನ್ ವಿಮಾನ ಸೇರಿ 7 ಏರ್ ಇಂಡಿಯಾ ಡ್ರಮ್ಲೈನರ್ ವಿಮಾನಗಳು ರದ್ದಾಗಿವೆ.ಈ ವಿದ್ಯಮಾನ ಪ್ರಯಾಣಿಕರಲ್ಲಿ ಭಾರೀ ಕಳವಳ ಉಂಟು ಮಾಡಿದೆ. ವಿಮಾನ ಅಲಭ್ಯತೆ, ಇರಾನ್ -ಇಸ್ರೇಲ್ ಸಮರದ ಹಿನ್ನೆಲೆಯಲ್ಲಿ ಅಲ್ಲಿನ ವಾಯುಪ್ರದೇಶ ನಿರ್ಬಂಧದ ಕಾರಣ ನೀಡಿ ಏರ್ ಇಂಡಿಯಾ ಈ ನಿರ್ಧಾರ ತೆಗೆದುಕೊಂಡಿದೆ. ಜೊತೆಗೆ ಕೆಲವು ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದಲ್ಲದೆ, ಜೂ.12ರ ವಿಮಾನ ಪತನದ ಬಳಿಕ 83 ವ