ನವದೆಹಲಿ: ಮೊದಲೆಲ್ಲ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ ಒಂದು ತಿಂಗಳ ನಂತರ ಗುರುತಿನ ಚೀಟಿ ಸಿಗುತ್ತಿತ್ತು. ಆದರೆ ಇನ್ಮುಂದೆ ಹೀಗೆ ಆಗುವುದಿಲ್ಲ, ಯಾಕೆಂದರೆ ಕೇಂದ್ರ ಚುನಾವಣಾ ಆಯೋಗವು ಈ ನಿಯಮಕ್ಕೆ ತಿದ್ದುಪಡಿ ತಂದಿದೆ.ಚುನಾವಣಾ ಆಯೋಗದ ಹೊಸ ವ್ಯವಸ್ಥೆ ಹೇಗಿದೆ ಅಂದ್ರೆ ಚುನಾವಣಾ ನೋಂದಣಿ ಅಧಿಕಾರಿಯಿಂದ ಹಿಡಿದು ಅಂಚೆ ಇಲಾಖೆ ಮೂಲಕ ಮತದಾರರಿಗೆ ವೋಟರ್ ಕಾರ್ಡ್ ತಲುಪಿಸುವವರೆಗೆ ಪ್ರತಿ ಹಂತದ ಟ್ರ್ಯಾಕಿಂಗ್ ಅನ್ನು ಈ ವ್ಯವಸ್ಥೆಯ ಮೂಲಕ ಮಾಡಬಹುದು ಎಂದು ಆಯೋಗ ತಿಳಿಸಿದೆ.ಪ್ರತಿ ಹಂತದಲ್ಲೂ ಕೂಡ ಮತದಾರರಿಗೆ ಎಸ್ಎಂಎಸ್ ಬರುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ತಮ್ಮ ಗುರುತಿನ ಚೀಟಿ ಯಾವ ಹಂತದಲ್ಲಿದೆ ಎನ್ನು