ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ವಿರುದ್ಧದ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಸ್ಥಗಿತ ಗೊಳಿಸಲಾಗಿರುವ ಸಿಂಧು ಜಲ ಒಪ್ಪಂದವನ್ನು ಎಂದಿಗೂ ಪುನರ್ ಸ್ಥಾಪಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ.ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಷಾ ಅವರು, ನೆರೆರಾಷ್ಟ್ರವು ಈ ಒಪ್ಪಂದದ ನಿಯಮ ಗಳನ್ನು ಉಲ್ಲಂಘಿಸಿದೆ ಮತ್ತು ಅದು ನೀರಿನ ಕೊರತೆಯಿಂದ ಬಳಲಿದೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗುವುದಿಲ್ಲ, ಆದರೆ ಅದನ್ನು ಸ್ಥಗಿತಗೊಳಿಸುವ ಹಕ್ಕನ್ನು ನಾವು ಹೊಂದಿದ್ದು, ಸ್ಥಗಿತ ಗೊಳಿಸಿದ್ದೇವೆ.ಎರಡೂ ರಾಷ್ಟ್