No Noise. Just News
By Ram Chethan • Aug 27, 2025, 04:24 PM
'ಕೆಡಿ' ನಂತರ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ದುನಿಯಾ ಸೂರಿ ಜೊತೆಗಿನ ಸಂಭಾವ್ಯ ಸಹಯೋಗದ ಸುದ್ದಿ ಅಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾದಿದ್ದಾರೆ.
ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಸಂದೇಶಗಳ ವಿರುದ್ಧ ರಮ್ಯಾ ಪೊಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ, ಶಿವರಾಜ್ಕುಮಾರ್ ಕುಟುಂಬ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಕುಟುಂಬದ ಒಳಗಿನ ಘಟನೆಗಳಲ್ಲಿ ಮೌನವಾಗಿದ್ದವರಿಗೆ ಈಗ ಏಕಾಏಕಿ ಧ್ವನಿ ಬಂದಿದೆ ಎಂದು ಶ್ರೀದೇವಿ ಭೈರಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದ್ದರು.ಇದಕ್ಕೆ ವಿನಯ್ ರಾಜ್ಕುಮಾರ್ ಉತ್ತರಿಸಿದ್ದರೆ.
ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಕ್ಕೆ ಸಜ್ಜಾದ ನಟ ವಿಜಯ್ ಹಾಗೂ ಅವರ ಭದ್ರತಾ ಸಿಬ್ಬಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. 2026ರ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ಅವರ ರಾಜಕೀಯ ಪ್ರಯತ್ನಕ್ಕೆ ದೊಡ್ಡ ಸವಾಲಾಗಲಿದೆ.
ಹ್ಯುಂಡೈ ಬ್ರ್ಯಾಂಡ್ ರಾಯಭಾರಿಗಳಾದ ಶಾರುಖ್ ಮತ್ತು ದೀಪಿಕಾ ವಿರುದ್ಧ ರಾಜಸ್ಥಾನದಲ್ಲಿ ವಾಹನ ವಂಚನೆ ಪ್ರಕರಣ ದಾಖಲಾಗಿದೆ. ಕಾರಿನ ದೋಷಪೂರಿತ ಸೇವೆ ಕುರಿತು ಗ್ರಾಹಕರ ದೂರು ಆಧರಿಸಿ ಸೆಕ್ಷನ್ 420 ಅಡಿಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.