Skip to main content
ವಿಡಿಯೋ
1/2
spirituality

ಮಲೆ ಮಹದೇಶ್ವರ ದೇವಾಲಯಕ್ಕೆ ಗ್ರಹಣದ ತಾಕಿಲ್ಲ: ಗ್ರಹಣದಲ್ಲೂ ಭಕ್ತರಿಗೆ ದರ್ಶನ..!

By Sushmitha R
ಮಲೆ ಮಹದೇಶ್ವರ ದೇವಾಲಯಕ್ಕೆ ಗ್ರಹಣದ ತಾಕಿಲ್ಲ: ಗ್ರಹಣದಲ್ಲೂ ಭಕ್ತರಿಗೆ ದರ್ಶನ..!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ದೇವಾಲಯವು ಯಾವುದೇ ಗ್ರಹಣದ ಸಂದರ್ಭದಲ್ಲಿ ಮುಚ್ಚದಿರುವುದಕ್ಕೆ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಕಾರಣಗಳಿವೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ದೇವಾಲಯವು ಯಾವುದೇ ಗ್ರಹಣದ ಸಂದರ್ಭದಲ್ಲಿ ಮುಚ್ಚದಿರುವುದಕ್ಕೆ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಕಾರಣಗಳಿವೆ. ಇಂದು,ಸಂಭವಿಸುವ ಚಂದ್ರಗ್ರಹಣದ ಸಮಯದಲ್ಲೂ ಈ ದೇವಾಲಯ ತೆರೆದಿರುತ್ತದೆ. ದಸರಿಘಟ್ಟ ಚೌಡೇಶ್ವರಿ ದೇವಾಲಯದ ರಹಸ್ಯಮಯವಾದ ಮಾಹಿತಿ..!

ಆದರೆ ರಾಜ್ಯದ ತಿರುಪತಿ, ಮಂತ್ರಾಲಯ, ಬೆಂಗಳೂರು ಮುಂತಾದ ದೇವಾಲಯಗಳು ಮಧ್ಯಾಹ್ನದಿಂದ ಮುಚ್ಚಲ್ಪಡುತ್ತವೆ. ಹಿಂದೂ ಶಾಸ್ತ್ರಗಳ ಪ್ರಕಾರ, ಗ್ರಹಣ ಸಮಯದಲ್ಲಿ ರಾಹು-ಕೇತು ಗ್ರಹಗಳಿಂದ ಉಂಟಾಗುವ ನಕಾರಾತ್ಮಕ ಶಕ್ತಿಯು ದೇವಾಲಯದ ದೈವಿಕ ಶಕ್ತಿಯನ್ನು ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

RANI SAAHIBA Women's Cotton Embroidered Dupatta

ಆದರೆ, ಮಾದಪ್ಪನ ದೇವಾಲಯಕ್ಕೆ ಈ ನಕಾರಾತ್ಮಕ ಶಕ್ತಿಯು ತಾಕದಿರುವುದೇ ಇದರ ವಿಶೇಷತೆ.ಮಲೆ ಮಹದೇಶ್ವರನನ್ನು ಶಿವನ ಅವತಾರವೆಂದು ಪರಿಗಣಿಸಲಾಗಿದ್ದು, 14-15ನೇ ಶತಮಾನದಲ್ಲಿ ಜೀವಿಸಿದ ವೀರಶೈವ ಸಂತನಾಗಿ ಇವನು ಸಿದ್ಧಿ, ಔಷಧ, ಮತ್ತು ಅಹಿಂಸೆಯನ್ನು ಬೋಧಿಸಿದನೆಂದು ಐತಿಹ್ಯವಿದೆ.

ದೇವಾಲಯವು ಏಳು ಬೆಟ್ಟಗಳಿಂದ ಸುತ್ತುವರೆದಿದ್ದು, ಇದರ ಸುತ್ತಲಿನ ದಟ್ಟ ಕಾಡು ಮತ್ತು ಆಧ್ಯಾತ್ಮಿಕ ವಾತಾವರಣವು ಗ್ರಹಣದ ನಕಾರಾತ್ಮಕ ಶಕ್ತಿಯನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದು ಭಕ್ತರು ನಂಬುತ್ತಾರೆ.ಸೂರ್ಯ ಮಾಯವಾದರೆ ನಾವು ಬದುಕಲು ಸಾಧ್ಯವೇ.?

ಈ ದೇವಾಲಯದ ವಾಸ್ತುಶಿಲ್ಪ ಮತ್ತು ದೈವಿಕ ಶಕ್ತಿಯು ಗ್ರಹಣದ ಪರಿಣಾಮವನ್ನು ತಗ್ಗಿಸುತ್ತದೆ ಎಂಬ ನಂಬಿಕೆಯಿದೆ. ಜುಂಜೇಗೌಡ ಎಂಬ ಕುರುಬ ಗೌಡನಿಂದ ನಿರ್ಮಿತವಾದ ಈ ದೇವಾಲಯವು ಶಿವನ ಲಿಂಗ ರೂಪದಲ್ಲಿ ಪೂಜೆಗೊಳ್ಳುತ್ತದೆ.

ಭಕ್ತರಿಗೆ ಗ್ರಹಣದ ಸಮಯದಲ್ಲೂ ದರ್ಶನ, ಪ್ರಸಾದ, ಮತ್ತು ಜಪ-ತಪದಂತಹ ಆಚರಣೆಗಳಿಗೆ ಯಾವುದೇ ತಡೆಯಿಲ್ಲ. ಇದರ ಹಿಂದಿನ ರಹಸ್ಯವೆಂದರೆ, ಮಾದಪ್ಪನ ದೈವಿಕ ಶಕ್ತಿಯು ರಾಹು-ಕೇತುವಿನ ಪರಿಣಾಮವನ್ನು ತಡೆಯುವಷ್ಟು ಪ್ರಬಲವಾಗಿದೆ ಎಂಬ ಭಕ್ತರ ದೃಢವಾದ ನಂಬಿಕೆ. ಈ ಕಾರಣದಿಂದ, ಗ್ರಹಣದ ಸಂದರ್ಭದಲ್ಲಿ ರಾಜ್ಯದ ಇತರ ದೇವಾಲಯಗಳು ಮುಚ್ಚಿದರೂ, ಮಲೆ ಮಹದೇಶ್ವರ ದೇವಾಲಯವು ಭಕ್ತರಿಗೆ ತೆರೆದಿರುತ್ತದೆ, ದರ್ಶನ ಭಾಗ್ಯವನ್ನು ನೀಡುತ್ತದೆ.ಥಾಮಸ್ ಎಡಿಸನ್ ಅವರ ರೇಡಿಯೋ ಪ್ರವೇಶ