ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಡಿಕೆ ಆರ್‌ಎಸ್‌ಎಸ್ ಗೀತೆಯನ್ನು ಸದನದಲ್ಲಿ ಹಾಡುವ ಮೂಲಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.ಈಗ ಪರಮೇಶ್ವರ್ ಅವರ ನಡೆ ಕೂಡ ಚರ್ಚೆಯನ್ನು ಹುಟ್ಟುಹಾಕಿದೆ. ಸಚಿವ ಪರಮೇಶ್ವರ್ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಯಾಗಿದ್ದು ಈಗ ಸದ್ಯದ ಚರ್ಚೆಗೆ ಕಾರಣವಾಗಿದೆ. ತುಮಕೂರಿನ ತಿಪಟೂರಿನಲ್ಲಿ ನಡೆದ ಎಬಿವಿಪಿ ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್ ಅವರು ಭಾಗಿಯಾಗಿದ್ದು ತೀರ್ವ ಅನುಮಾನ ಹುಟ್ಟುಹಾಕಿದೆ.ಇದನ್ನೂ ಓದಿ: ಸಶಸ್ತ್ರ ಸೀಮಾ ಬಲ (SSB) ಇದುವರೆಗೆ ನೇಪಾಳದ ಜೈಲುಗಳಿಂದ ಪರಾರಿಯಾದ 35 ಕೈದಿಗಳನ್ನು ವಶಕ್ಕೆ ಪಡೆದಿದೆ: ಆದರೆ ಇನ್ನೂ ಹೆಚ್ಚುತ್ತಲೇ ಇದೆ ಈ ಸಂಖ್ಯೆ
ತುಮಕೂರಿನ ತಿಪಟೂರಿನಲ್ಲಿ ಎಬಿವಿಪಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು ಆ ಕಾರ್ಯಕ್ರಮಕ್ಕೆ ಪರಮೇಶ್ವರ್ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈಗ ಎಲ್ಲರಲ್ಲೂ ಅನುಮಾನ ಹುಟ್ಟುಹಾಕಿದೆ. ತಿಪಟೂರಿನಲ್ಲಿ ನಡೆದ ವೀರರಾಣಿ ಅಬ್ಬಕ್ಕ 500 ನೇ ಜಯಂತಿ ಪ್ರಯುಕ್ತ ಅವರ ಪಂಜಿನ ಮೆರವಣೆಗೆ ನಡೆಯುತ್ತಿತ್ತು ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್ ಭಾಗಿಯಾಗಿ ರಾಣಿ ಅಬ್ಬಕ್ಕಾಗೆ ಪುಷ್ಪಾರ್ಚನೆ ಮಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಒಳಮೀಸಲಾತಿ ಅನ್ಯಾಯದ ವಿರುದ್ಧ ಹೋರಾಟ ವಿಚಾರ; ಕೈ ಬಿಡುವ ಮಾತಿಲ್ಲ: ಸಾ. ಹೋರಾಟಗಾರ ಭಾಸ್ಕರ್ ಪ್ರಸಾದ್ ಎಚ್ಚರಿಕೆ..!
ಈ ಕಾರ್ಯಕ್ರಮಕ್ಕೆ ಪರಮೇಶವರ್ ಅವರಿಗೆ ಯಾರು ಆಹ್ವಾನ ಕೊಟ್ರು, ಯಾರ ಆಹ್ವಾನದ ಮೇರೆಗೆ ಆ ಕರ್ಯಕ್ರಮಕ್ಕೆ ಗೃಹ ಸಚಿವ ಪರಮೇಶ್ವರ್ ತೆರಳಿದ್ರು ಅನ್ನೋದಕ್ಕೆ ಸ್ವತಃ ಪರಮೇಶ್ವರ್ ಅವರೆ ಉತ್ತರ ನೀಡಬೇಕಾಗಿದೆ. ಈಗ ಅದಕ್ಕೆ ಸ್ವತಃ ಪರಮೇಶ್ವರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ನಾನು ತುಮಕೂರಿನ ತಿಪಟೂರು ಮಾರ್ಗವಾಗಿ ಹೋಗುತ್ತಿದ್ದೆ ಆಗ ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರ್ತಾ ಇತ್ತು.ಇದನ್ನೂ ಓದಿ: ತಡರಾತ್ರಿ ಸುರಿದ ಧರಾಕಾರ ಮಳೆಗೆ ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್ ಮರ, ಸಂಚಾರ ಅಸ್ಥವ್ಯಸ್ಥ…!!
ಹೂ ಹಾಕಿ ಹೋಗಿ ಅಂತ ಹೇಳಿದ್ರು ಹೂ ಹಾಕಿ ಬಂದೇ ಅಂತ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ಧಾರೆ. ಹಾಗೇ ನಾನು ಯಾವುದೇ ಎಬಿವಿಪಿ ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ಹೇಳಿದ್ದಾರೆ. ಇದರ ಬಗ್ಗೆ ವಿವಾದ ಮಾಡಿಕೊಳ್ಳೋದಿದ್ರೆಮಾಡಿಕೊಳ್ಳಲಿ ಬಿಡಿ ಎಂದು ಉತ್ತರಿಸಿದ್ದಾರೆ. ಹಾಗೇ ಸೈದ್ಧಾಂತಿಕ ಬದ್ಧತೆಯ ಕರಿತು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ, ನಾನು ನೈಜ ಕಾಂಗ್ರೆಸ್ಸಿಗ ಕಾಂಗ್ರೆಸ್ಸಿಗನಾಗೇ ಸಾಯ್ತೀನಿ ಎಂದಿದ್ದಾರೆ. ರಾಜಕೀಯ ಶತ್ರು ಯಾವ ಉದ್ಧೇಶದಿಂದ ಹೀಗೆ ಮಾಡುತ್ತಿದ್ದಾರೆ ಅಂತ ಉತ್ತರಿಸಿದ್ದಾರೆ.Noise Aura Buds in Ear Truly Wireless Earbuds with 60H of Playtime, Quad Mic with ENC, Dual Device Pairing, Instacharge(10 Min=150 Min),12Mm Polymer Composite Driver, BT V5.3(Aura Blue)