Skip to main content
ವಿಡಿಯೋ
1/2
crime

ಅಮೇರಿಕಾದಲ್ಲಿ ಪತ್ನಿ ಮತ್ತು ಮಗನ ಎದರೇ ಕರ್ನಾಟಕ ಮೂಲದ ವ್ಯಕ್ತಿಯ ತಲೆ ಕಟ್‌…!!

By Pavitra Ganapathi Baradavalli
ಅಮೇರಿಕಾದಲ್ಲಿ ಪತ್ನಿ ಮತ್ತು ಮಗನ ಎದರೇ ಕರ್ನಾಟಕ ಮೂಲದ ವ್ಯಕ್ತಿಯ ತಲೆ ಕಟ್‌…!!

ಅಮೇರಿಕಾ ಅಂತಹ ದೇಶಗಳಲ್ಲಿ ತುಂಬಾ ಸಣ್ಣ ಸಣ್ಣ ವಿಚಾರಗಳೂ ಅತಿರೇಖಕ್ಕೆ ಹೋಗುತ್ತವೆ. ಹಾಗೆ ಇಲ್ಲೊಂದು ಸಣ್ಣ ಘಟನೆಗೆ ಕರ್ನಾಟಕ ಮೂಲದ ವ್ಯಕ್ತಿಯ ತಲೆಯೇ ಕಟ್‌ ಆಗಿದೆ. ಅದೇನೆಂದರೆ ವಾಷಿಂಗ್‌ ಮಿಷಿನ್‌ ಬಳಸುವ ವಿಚಾರಕ್ಕೆ ಹೋಟೆಲ್‌ನಲ್ಲಿ ಸಿಬ್ಬಂದಿಗಳ ನಡುವೆ ನಡೆದ ಜಗಳ ವ್ಯಕ್ತಿಯ ತಲೆದಂಡ ನೀಡುವಂತೆ ಮಾಡಿದೆ.

ವಾಷಿಂಗ್ಟನ್: ಅಮೇರಿಕಾ ಅಂತಹ ದೇಶಗಳಲ್ಲಿ ತುಂಬಾ ಸಣ್ಣ ಸಣ್ಣ ವಿಚಾರಗಳೂ ಅತಿರೇಖಕ್ಕೆ ಹೋಗುತ್ತವೆ. ಹಾಗೆ ಇಲ್ಲೊಂದು ಸಣ್ಣ ಘಟನೆಗೆ ಕರ್ನಾಟಕ ಮೂಲದ ವ್ಯಕ್ತಿಯ ತಲೆಯೇ ಕಟ್‌ ಆಗಿದೆ. ಅದೇನೆಂದರೆ ವಾಷಿಂಗ್‌ ಮಿಷಿನ್‌ ಬಳಸುವ ವಿಚಾರಕ್ಕೆ ಹೋಟೆಲ್‌ನಲ್ಲಿ ಸಿಬ್ಬಂದಿಗಳ ನಡುವೆ ನಡೆದ ಜಗಳ ವ್ಯಕ್ತಿಯ ತಲೆದಂಡ ನೀಡುವಂತೆ ಮಾಡಿದೆ.  

ಬುಧವಾರ ಟೆಕ್ಸಾಸ್ ಡಲ್ಲಾಸ್ನಲ್ಲಿ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ  ಎಂದು ಗುರುತಿಸಲಾಗಿದೆ. ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ.ಇದನ್ನೂ ಓದಿ: ರೋಡ್‌ ಬದಿಯ ಗುಂಡಿಯ ಒಳಕ್ಕೆ ಇಳಿದ ಸ್ಕೂಲ್‌ ಬಸ್‌: ತಪ್ಪಿದ ಅನಾಹುತ- ರಸ್ತೆಗಳ ಸುರಕ್ಷತೆಗೆ ಎಚ್ಚರಿಕೆ ಘಂಟೆ


ಪತ್ನಿ ಮತ್ತು ಪುತ್ರನ ಎದುರಲ್ಲಿ ಇರುವಾಗಲೇ ಅಮೇರಿಕಾ ಮೂಲದ ವ್ಯಕ್ತಿ ಈ ಕೊಲೆ ಮಾಡಿದ್ದು, ಈ ಘಟನೆಯಿಂದ ಪತ್ನಿ ಮತ್ತು ಮಗ ಆಘಾತಕ್ಕೆ ಒಳಗಾಗಿದ್ದಾರೆ. ನಾಗಮಲ್ಲಯ್ಯ ಡೌನ್ಟೌನ್ ಸೂಟ್ಸ್ ಹೋಟೆಲ್ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ವೇಳೆ ಹೋಟೆಲ್ ಸ್ವಚ್ಛಗೊಳಿಸಲು ಮಾರ್ಟಿನೆಜ್ ಮತ್ತು ಇನ್ನೋರ್ವ ಮಹಿಳಾ ಸಹೋದ್ಯೋಗಿ ಬಂದಿದ್ದರು ಎನ್ನಲಾಗಿದೆ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಗಮಲ್ಲಯ್ಯ ಮುರಿದು ಹೋದ ವಾಷಿಂಗ್ ಮೆಚಿನ್ ನಲ್ಲಿ ಬಟ್ಟೆಗಳನ್ನು ಹಾಕಬೇಡಿ ಎಂದು ನೇರವಾಗಿ ಮಾರ್ಟಿನೆಜ್ ಗೆ ಹೇಳುವ ಬದಲು ಮಹಿಳಾ ಸಹೋದ್ಯೋಗಿ ಬಳಿ ಹೇಳಿದ್ದರು ಎನ್ನಲಾಗಿದೆ.ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ - ಇಂದೇ ಕಡೆ ದಿನ

ಇದರಿಂದ ಕೋಪಗೊಂಡ ಮಾರ್ಟಿನೆಜ್ ಕೊಠಡಿ ಒಳಗಿಂದ ಹರಿತವಾದ ಆಯುಧ ತಂದು ನಾಗಮಲ್ಲಯ ಮೇಲೆ ದಾಳಿ ಮಾಡಿದ್ದಾನೆ ಕೂಡಲೇ ಆತನಿಂದ ತಪ್ಪಿಸಿಕೊಂಡು ಒಡಲು ಯತ್ನಿಸಿದರು ಬೆನ್ನತ್ತಿದ್ದ ಮಾರ್ಟಿನೆಜ್ ನಾಗಮಲ್ಲಯ್ಯನ ಮೇಲೆ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ ಎನ್ನಲಾಗಿದೆ.ಇದನ್ನೂ ಓದಿ: ಬಿಎಂಟಿಆರ್‌ಸಿಎಲ್ ದರ ಏರಿಕೆ ವಿಚಾರ: ನ್ಯಾಯಯುತ bmrcl ದರಕ್ಕಾಗಿ ಏಳು ತಿಂಗಳ ಕಾಯುವಿಕೆ : MP ತೇಜಸ್ವಿ ಸೂರ್ಯ ಪೋಸ್ಟ್‌ ಹೀಗಿದೆ


ಘಟನೆ ನಡೆಯುವ ವೇಳೆ ನಾಗಮಲ್ಲಯ್ಯ ಅವರ ಪತ್ನಿ ಮತ್ತು ಮಗ ಅಲ್ಲೇ ಇದ್ದು ದಾಳಿ ತಡೆಯುವ ಯತ್ನ ಮಾಡಿದ್ದಾರೆ ಆದರೆ ಆರೋಪಿ ಇಬ್ಬರನ್ನೂ ದೂಡಿ ನಾಗಮಲ್ಲಯ್ಯ ಮೇಲೆ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ ವೇಳೆ ಅಲ್ಲಿಗೆ ಬಂದ ಪೊಲೀಸರು ಸದ್ಯ ಆರೋಪಿ ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ನನ್ನು ಬಂಧಿಸಿದ್ದಾರೆ

ಘಟನೆ ಕುರಿತು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿದ್ದು, ನಾವು ಕುಟುಂಬದ ಜೊತೆ ಸಂಪರ್ಕದಲ್ಲಿದ್ದು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹೇಳಿಕೊಂಡಿದೆ.Noise Buds VS104 Truly Wireless Earbuds with 45H of Playtime, Quad Mic with ENC, Instacharge(10 Min=200 Min), 13Mm Driver, Low Latency, BT V5.2 (Mint Green)