Skip to main content
ವಿಡಿಯೋ
general

ಟೇಕ್ ಆಫ್ ಬಳಿಕ ಕೆಳಗುರುಳಿದ ವಿಮಾನ ಚಕ್ರ - ಸ್ಪೈಸ್ ಜೆಟ್ ವಿಮಾನ ಮುಂಬೈನಲ್ಲಿ ಹಾಲ್ಟ್‌!

By Shravanthi R
ಟೇಕ್ ಆಫ್ ಬಳಿಕ ಕೆಳಗುರುಳಿದ ವಿಮಾನ ಚಕ್ರ - ಸ್ಪೈಸ್ ಜೆಟ್ ವಿಮಾನ ಮುಂಬೈನಲ್ಲಿ ಹಾಲ್ಟ್‌!

ಗುಜರಾತ್‌ನ ಕಾಂಡ್ಲಾದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ತುರ್ತು ಸಂದೇಶ ನೀಡಲಾಗಿದೆ. ವಿಮಾನದ ಟೇಕ್ ಆಫ್ ವೇಳೆ ಅದರ ಹೊರ ಚಕ್ರವು ರನ್‌ವೇ ಮೇಲೆ ಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆವರೆಗೆ ಮುಂಬೈನ ಎಲ್ಲಾ ಡಿಪಾರ್ಚರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ವಿಮಾನದಲ್ಲಿದ್ದ 75 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಗುಜಾರಾತ್‌ನ ಕಾಂಡ್ಲಾದಿಂದ ಹೊರಟ ಸ್ಪೈಸ್ ಜೆಟ್ Q400 ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ಸಂದರ್ಭದಲ್ಲಿ ಇಂದು ತುರ್ತು ಭೂ ಸ್ಪರ್ಶ ಮಾಡಿದೆ. 

ವಿಮಾನದ ಹೊರ ಚಕ್ರವು ಟೇಕ್ ಆಫ್ ಆಗುವ ಸಂದರ್ಭದಲ್ಲಿ ರನ್‌ವೇ ಮೇಲೆ ಬಿದ್ದ ಕಾರಣ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದು, ಯಾವುದೇ ಅನಾಹುತಗಳಾಗಿಲ್ಲ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ ಎನ್ನಲಾಗಿದೆ.

75 ಜನ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನವು ಕಾಂಡ್ಲಾ ವಿಮಾನ ನಿಲ್ದಾಣದಿಂದ ಹೊರಟು ಮುಂಬೈಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಆರಂಭಿಕ ಹಂತದ ರನ್‌ವೇ ಸಮಯದಲ್ಲಿ ವಿಮಾನದ ಹೊರಚಕ್ರವು ಪತ್ತೆಯಾಗಿದೆ.

Narendra Modi: A Global Transformative Leader Hardcover – 26 September 2024

ಆನಂತರ, ಮುಂಬೈವರೆಗೂ ಸಂಚರಿಸಿ, ಸುಗಮವಾದ ಲ್ಯಾಂಡಿಂಗ್ ಮಾಡಿ ಟರ್ಮಿನಲ್ ನಲ್ಲಿ ನಿಲ್ಲಿಸಲಾಗಿದೆ. ಪ್ರಯಾಣಿಕರು ಸುರಕ್ಷಿತರಾಗಿದ್ದಾರೆಂದು ತಿಳಿಸಲಾಗಿದೆ. ಇದರಿಂದಾಗಿ ಇಂದು ಸಂಜೆ 5 ಗಂಟೆವರೆಗೆ ಮುಂಬೈನ ಎಲ್ಲಾ ಡಿಪಾರ್ಚರ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.


ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು: ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಎಚ್ಚರಿಕೆ..!