ಭಾರತದಲ್ಲಿದ್ದುಕೊಂಡು, ಪಕ್ಕದ ದೇಶ ಶ್ರೇಷ್ಠವೆಂದು ಕಿಚ್ಚು ಹಚ್ಚುವ ಕಿಡಿಗೇಡಿಗಳಿಗೆ ಕಡಿವಾಣ ಹಾಕಬೇಕಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಲಾಗಿದೆ, ಹಬ್ಬದ ಆಚರಣೆ ಕಾರಣವಿಟ್ಟುಕೊಂಡು ಪಾಕಿಸ್ತಾನ ಜಿಂದಾಬಾದ್ ಎನ್ನುವ ಪ್ರಚೋದನಕಾರಿ ಘೋಷಣೆ ಆರೋಪ ಕೇಳಿಬಂದಿತ್ತು. ಅದೇ ರೀತಿ ಚಿಕ್ಕಮಗಳೂರಿನ ತರೀಕೆರೆಯಲ್ಲೂ ಅದೇ ರೀತಿಯ ಘಟನೆ ನಡೆದಿದೆ ಎನ್ನಲಾಗಿದೆ.
ಗೃಹ ಇಲಾಖೆಯು ನೀಡಿರುವ ಅಂಕಿ-ಅಂಶದ ಪ್ರಕಾರವಾಗಿ ಕಳೆದ ಮೂರು ವರ್ಷಗಳಲ್ಲಿ ಇಂತಹ ಆರು ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ. 2023, 2024 ಹಾಗೂ 2025 ಕ್ರಮವಾಗಿ 1,2,3 ಪ್ರಕರಣಗಳು ಬೆಳಕಿಗೆ ಬಂದಿದೆ. ಧರ್ಮಾಧಾರಿತ ಪ್ರಕರಣಗಳ ಸಂಖ್ಯೆಯು ಹೆಚ್ಚಿದ್ದು, ಅದೇ ಪ್ರಕಾರವಾಗಿ, 36, 37 ಹಾಗೂ 21 ಇಂತಹ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಈದ್-ಎ-ಮಿಲಾದ್ - ಅಲ್ಲಾಹನ ಇತಿಹಾಸ ಜೀವನ ತತ್ತ್ವಗಳು ಮತ್ತು ಏಕತೆಯ ಮಹತ್ವದ ಹಬ್ಬ
ಈದ್ ಮಿಲಾದ್ ಮುಸಲ್ಮಾನರ ಹಬ್ಬ, ಮೆರವಣಿಗೆ ಸಂದರ್ಭದಲ್ಲಿ, ಯುವಕರ ಗುಂಪು ಒಡಗೂಡಿ, ಪಾಕಿಸ್ತಾನ ಪರ ಘೋಷಣೆ ಮೊಳಗಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡಿತ್ತು. ಇದರ ಜೊತೆಗೆ ಇತ್ತೀಚೆಗೆ, ಚಿಕ್ಕಮಗಳೂರಿನ ತರೀಕೆರೆಯಲ್ಲೂ ಇದೇ ರೀತಿಯ ಘಟನೆ ಜರುಗಿದ್ದು, ಹಿಂದೂ ಹಾಗೂ ಮುಸ್ಲೀಂ ಮುಖಂಡರ ನಡುವೆ ಸಂಘರ್ಷಕ್ಕೆ ತಿರುಗಿದೆ ಎನ್ನಲಾಗಿದೆ.
My Encounter with the Missile Man of India: A Doctor’s Narrative Paperback – 21 July 2025
ಸರಣಿ ಪಾಪಕೃತ್ಯ ಪ್ರಕರಣಗಳು -
ಬಾಂಬ್ ಬೆದರಿಕೆ, ಕೊಲೆ ಅಥವಾ ಮಾರಕವಾಗಿ ಹತ್ಯೆ ಮಾಡುವ ದೇಶದ್ರೋಹದಂತಹ ಅಮಾನವೀಯ ನಡಾವಳಿಗಳು ದೇಶದ ಪ್ರಮುಖ ರಾಜ್ಯಗಳೆನ್ನದೇ ದಾಖಲಾಗಿದೆ. ಇದಲ್ಲದೇ ಲೈಂಗಿಕ ಹಿಂಸೆ, ಸೈಬರ್ ವಂಚನೆ, ಹಲ್ಲೆ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿದ್ದು, ಅಪರಾಧ ಕೃತ್ಯಗಳು ಬಹುಸಂಖ್ಯೆಯಲ್ಲಿದೆ.
ದೇಶ ಯಾವುದಾದರೇನು ಆದರೆ, ಭಾವೈಕ್ಯತೆಗೆ ಅಡ್ಡಿತರುವ ಯಾವುದೇ ದುರ್ವತನೆಗೆ ತಕ್ಕ ಶಿಕ್ಷೆಯಾಗಲೇಬೇಕು. ಇಂತಹ ಅನೈತಿಕ ಸಂದರ್ಭಗಳು ಹುಟ್ಟುವುದು ಧರ್ಮಾಧಾರಿತ ಈರ್ಷೆಗಳಿಂದ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಜನರು ತಮ್ಮ ಇತರೆ ಧರ್ಮಗಳ ಅಲ್ಲಗೆಳೆಯುವ ಕೀಳು ಮನಸ್ಥಿತಿಯನ್ನು ಕಿತ್ತೊಗೆದಾಗಲೇ, ಭಾರತ ದೇಶ ಸಾಮರಸ್ಯದ ಏಕತೆಯ ದೇಶವಾಗಲು ಸಾಧ್ಯವೆನಿಸೀತು.
ಇದನ್ನೂ ಓದಿ: ಕಡಲ ಚಿಪ್ಪುಗಳು: ಪ್ರಾಕೃತಿಕ ಸೃಷ್ಟಿ - ಸೌಂದರ್ಯ, ಸಂಗ್ರಹಣೆ ಮತ್ತು ಉದ್ಯಮ