Skip to main content
ವಿಡಿಯೋ
1/2
crime

ಧರ್ಮಸ್ಥಳ ಬುರುಡೆ ಕೇಸ್: ಸಮೀರ್ ಎಂ.ಡಿ ತಪ್ಪೊಪ್ಪಿಗೆ...ನಮ್ಮವರೇ ನನಗೆ ಕೈಕೊಟ್ರು ಎಂದು ಅಳಲು!

By Gireesh Vasishta
ಧರ್ಮಸ್ಥಳ ಬುರುಡೆ ಕೇಸ್: ಸಮೀರ್ ಎಂ.ಡಿ ತಪ್ಪೊಪ್ಪಿಗೆ...ನಮ್ಮವರೇ ನನಗೆ ಕೈಕೊಟ್ರು ಎಂದು ಅಳಲು!

ಧರ್ಮಸ್ಥಳ ಬುರುಡೆ ಕೇಸಿಗೆ ಸಂಬಂಧಿಸಿದ ಎಐ ವಿಡಿಯೋ ನಂತರ ಸಮೀರ್ ಎಂ.ಡಿ. ತಮ್ಮ ಕಣ್ಣೀರಿನೊಂದಿಗೆ ನೋವು ಹಂಚಿಕೊಂಡು, ಮನೆಯನ್ನು ಕಳೆದು ಒಬ್ಬಂಟಿಯಾಗಿರುವ ಸ್ಥಿತಿಯನ್ನು ವಿವರಿಸಿದ್ದಾರೆ.

ಧರ್ಮಸ್ಥಳ ಗ್ರಾಮದ ಬುರುಡೆ ಕೇಸಿಗೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆ (AI) ವಿಡಿಯೊ ಮಾಡಿ, ಕಣ್ಣಿಗೆ ಕಟ್ಟುವಂತೆ ಕಥೆ ಕಟ್ಟಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಇದೀಗ ಮತ್ತೊಂದು ವಿಡಿಯೊ ಮೂಲಕ ತಮ್ಮ ಕಣ್ಣೀರ ಕಥೆ ಹೇಳಿಕೊಂಡಿದ್ದಾರೆ. ವಿಚಾರಣೆ ಬಳಿಕ ತಮ್ಮ ಮನೆ ಕಳೆದುಕೊಂಡಿದ್ದು, ಅನಾಥನಾಗಿರುವುದಾಗಿ ಸಮೀರ್ ಅಳಲು ತೋಡಿಕೊಂಡಿದ್ದಾರೆ. ಎಸ್‌ಐಟಿ ವಿಚಾರಣೆ ನಂತರ ನಾನು ಮನೆ ಕಳೆದುಕೊಂಡೆ. ಇರಲು ಮನೆಯೂ ಇಲ್ಲದೆ ಅನಾಥನಾದೆ. ನಾನು ನಂಬಿದವರು ನನ್ನ ಕೈಬಿಟ್ಟಿದ್ದು, ನಾನೀಗ ಒಬ್ಬಂಟಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

 

ಸುಜಾತಾ ಭಟ್ ಅವರ ಸಂದರ್ಶನ ಮತ್ತು ಅವರ ಕಣ್ಣೀರು ನೋಡಿ ಅವರ ಬಗ್ಗೆ ವಿಡಿಯೊ ಮಾಡಿದ್ದೆ. ಆದರೆ, ಈಗ ಆ ಕಣ್ಣೀರೇ ಸುಳ್ಳು ಅಂದರೆ ನಾನು ಏನು ಮಾಡಲಿ? ಎಂದು ಸಮೀರ್ ಹೇಳಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ಗೆ ಸಂಬಂಧಿಸಿದಂತೆ ಎಐ ವಿಡಿಯೊ ಮಾಡಿದ್ದರಿಂದ ಎಸ್‌ಐಟಿ ಪೊಲೀಸರು ಸಮೀರ್ ಅವರನ್ನು ವಿಚಾರಣೆ ನಡೆಸಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹುಲ್ಲಹಳ್ಳಿ ಸಮೀಪದ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿನ ಅವರ ಬಾಡಿಗೆ ಮನೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದರು. ಇದಾದ ನಂತರ ತಾವು ಸಂಕಷ್ಟಕ್ಕೆ ಈಡಾಗಿರುವುದಾಗಿ ಸಮೀರ್ ತಿಳಿಸಿದ್ದಾರೆ.Levi's Men's Slim Fit Mid Rise 511 Mid-Rise Jeans

 

ಹೊಸ ಯೂಟ್ಯೂಬ್ ವಿಡಿಯೊದಲ್ಲಿ ಸಮೀರ್, ಪ್ರಾಮಾಣಿಕವಾಗಿ ನಾನು ಹೇಳ್ತಿದ್ದೇನೆ. ಇವತ್ತು ನನಗೆ ಮನೆ ಇಲ್ಲ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇದ್ದೆವು. ಆದರೆ, ಪೊಲೀಸರು ತನಿಖೆಗೆಂದು ಮನೆಗೆ ಬಂದರು. ಇದಾದ ನಂತರ ಮನೆ ಮಾಲೀಕರು ನಮ್ಮನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂ.ಡಿ. ಅಂದರೆ ಯಾರೂ ಮನೆ ಕೊಡ್ತಿಲ್ಲ. ಸಮೀರ್ ಎಂ.ಡಿ. ಅಂದರೆ ಜನ ಹೆದರಿಕೊಳ್ಳುತ್ತಿದ್ದಾರೆ. ನನಗೀಗ ಬಾಡಿಗೆ ಮನೆಯೇ ಸಿಗುತ್ತಿಲ್ಲ. ಹೀಗಾಗಿ, ಇಂದು ನನಗೆ ಇರುವುದಕ್ಕೆ ಮನೆಯೇ ಇಲ್ಲ. ನಾನು ಮತ್ತು ನನ್ನ ತಾಯಿ ಮನೆಯಿಲ್ಲದೆ ಅಲೆದಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.T20 ಏಷ್ಯಾ ಕಪ್: ಒಮನ್‌ vs ಪಾಕಿಸ್ತಾನ್: ಪಂದ್ಯದ ರಿಸಲ್ಟ್‌ ಹೀಗಿದೆ

 

ಕಳೆದ ಒಂದೂವರೆ ತಿಂಗಳಿಂದ ನನ್ನ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ನನಗೆ ವಿದೇಶದಿಂದ ಹಣ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಹಣ ಬಂದಿಲ್ಲ. ಹಣ ತೆಗೆದುಕೊಂಡಿದ್ದರೆ ತನಿಖೆಯಿಂದ ಹೊರಬರುತ್ತಿತ್ತು. ಪೊಲೀಸರಿಗೆ ನನ್ನ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ನೀಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ, ನನ್ನ ವಿರುದ್ಧ ಸುಳ್ಳು ಆರೋಪ ಮಾಡುವವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ಸಮೀರ್ ಹೇಳಿದ್ದಾರೆ.ನೇಪಾಳದ ಪ್ರಗತಿಗೆ ಭಾರತ ಬದ್ಧವಿದೆ; ನೂತನ ಪ್ರಧಾನಿ ಸುಶೀಲಾ ಕರ್ಕಿಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

 

ಇಲ್ಲಿ ಗಟ್ಟಿಯಾಗಿ ನ್ಯಾಯದ ಪರ ನಿಂತರೆ ಎಲ್ಲರಿಗೂ ಇದೇ ಪರಿಸ್ಥಿತಿ ಬರುತ್ತದೆ. ನಾನು ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಟ ಮಾಡಿದ್ದೇನೆ. ಹೆಣ್ಣು ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲಿ ಎಂದು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ.

 

ಆ ತಾಯಿಯ ಕಣ್ಣೀರನ್ನು ನೋಡಿ, ಸುಜಾತಾ ಭಟ್ ಬಗ್ಗೆ ನಾನು ವಿಡಿಯೊ ಮಾಡಿದ್ದೆ. ಅವರ ಇಂಟರ್‌ವ್ಯೂ ನೋಡಿ, ಅವರ ಕಣ್ಣೀರು ನೋಡಿ, ಅದರ ಬಗ್ಗೆ ವಿಡಿಯೊ ಮಾಡಿದ್ದೆ. ಆದರೆ, ಈಗ ಆ ಕಣ್ಣೀರೇ ಸುಳ್ಳು ಅಂದರೆ ನಾನು ಏನು ಮಾಡಲಿ? ನನ್ನ ವಿಡಿಯೊನೇ ಸುಳ್ಳು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನು ಸಾಯಿಸಿದ್ದು ಯಾರು? ಎಂದು ಸಮೀರ್ ಪ್ರಶ್ನಿಸಿದ್ದಾರೆ.

 

ನಮ್ಮವರೇ ನನಗೆ ಕೈಕೊಟ್ಟರು. ಅವರನ್ನು ನಂಬಿ ನಾನೀಗ ಮೋಸ ಹೋದೆ ಎನಿಸುತ್ತಿದೆ. ನಾನೀಗ ಒಬ್ಬಂಟಿ ಎಂದೆನಿಸುತ್ತಿದೆ. ಯಾವಾಗಲೂ ಸ್ಟುಡಿಯೊದಲ್ಲಿ ಕ್ಯಾಮರಾ ಮುಂದೆ ಕೂತು ವಿಡಿಯೊ ಮಾಡುತ್ತಿದ್ದೆ. ಆದರೆ, ಇವತ್ತು ಕಾರಲ್ಲಿ ಕುಳಿತು ವಿಡಿಯೊ ಮಾಡುತ್ತಿದ್ದೇನೆ ಎಂದು ಸಮೀರ್ ಎಂ.ಡಿ. ತಮ್ಮ ನೋವು ಹಂಚಿಕೊಂಡಿದ್ದಾರೆ.