ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ (TRUMP)ಮೊದಲು ಭಾರತದ (INDIA) ಮೇಲೆ ಹೇರಿದ 50% ಸುಂಕ ನೀತಿಯಿಂದ ಭಾರತ ಅಮೇರಿಕಾ ಸಂಬಂಧ ಹದಗೆಟ್ಟು ಹೋಗಿದೆ. ಈಗ ರಷ್ಯಾದಿಂದ ತೈಲ ಖರೀದಿಸಲು (OIL PURCHASE) ಭಾರತ ಮುಂದಾಗಿದೆ. ನಾನು 50% ತೆರಿಗೆ ನೀತಿಯನ್ನು ಭಾರತದ ಮೇಲೆ ವಿಧಿಸದೇ ಹೋಗಿದ್ದರೆ ಭಾರತ ಅಮೇರಿಕಾ ಸಂಬಂಧ ಉತ್ತಮವಾಗಿರುತ್ತಿತ್ತು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಇದನ್ನೂ ಓದಿ: ಹಾಸನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕ್ಯಾಂಟರ್ ಹರಿದು 9 ಸಾವು, 27 ಗಾಯ,ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ…!!
ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ರಷ್ಯಾದಿಂದ ತೈಲ (Russian Oil) ಖರೀದಿಸುತ್ತಿರುವುದರಿಂದ ಭಾರತದ ಮೇಲೆ ವಿಧಿಸಲಾದ 50% ಸುಂಕವು ಎರಡೂ ದೇಶಗಳ ನಡುವಿನ ಸಂಬಂಧ ಹದಗೆಡಿಸಿದೆ. ಭಾರತ ರಷ್ಯಾದ ಅತಿದೊಡ್ಡ ಗ್ರಾಹಕ, ಹಾಗಾಗಿ ಸುಂಕ ವಿಧಿಸಲಾಯ್ತು. ಆದ್ರೆ ಇದು ಸುಲಭದ ನಿರ್ಧಾರವಲ್ಲ, ಇದು ಯುರೋಪಿನ ಮೇಲೂ ಸಮಸ್ಯೆ ಆಗಿದೆ ಎಂದೂ ಅವರು ಹೇಳಿದರು.ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ಭೂಕಂಪಕ್ಕೆ ತತ್ತರಿಸಿದ ರಷ್ಯಾ: ಸುನಾಮಿ ಎಚ್ಚರಿಕೆಯ ಭೀತಿ..!
ಜೊತೆಗೆ ಇದು ಅಮೇರಿಕಾದ ಒಂದು ದೊಡ್ಡ ಹೆಜ್ಜೆಯಾದರೂ ಭಾರತದೊಂದಿಗಿನ ಸಂಬಂಧಗಳನ್ನ ಹಾಳು ಮಾಡಿದೆ. ವ್ಯಾಪಾರ ಮತ್ತು ಯುದ್ಧವು, ಎರಡೂ ದೇಶಗಳ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಭಾರತದ ಮೇಲೆ 50% ಸುಂಕ ವಿಧಿಸಿದ ಬಳಿಕದಿಂದ ಅಮೇರಿಕಾ ವಿರುದ್ಧ ಭಾರತಕ್ಕಿರುವ ಅಸಮಧಾನ ಹೆಚ್ಚಾಗಿದೆ.ಉಕ್ರೇನ್ ಮೇಲಿನ ಯುದ್ಧಕ್ಕಾಗಿ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿವೆ. ಈ ಪರಿಸ್ಥಿತಿಯಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ 50% ಆಮದು ಸುಂಕ ವಿಧಿಸಿರೋದು ಅಮೇರಿಕಾಕ್ಕೆ ಹೊಡೆತ ಕೊಟ್ಟಂತಾಗಿದೆ.ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್: ಸಮೀರ್ ಎಂ.ಡಿ ತಪ್ಪೊಪ್ಪಿಗೆ...ನಮ್ಮವರೇ ನನಗೆ ಕೈಕೊಟ್ರು ಎಂದು ಅಳಲು!
ಈ ಹಿಂದೆ 25% ಆಮದು ಸುಂಕ ವಿಧಿಸಿದ್ದ ಅಮೇರಿಕಾ ಅಧ್ಯಕ್ಷ, ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಬಳಿಕ ಆಗಸ್ಟ್ 27ರಿಂದ ಅನ್ವಯವಾಗುವಂತೆ 50% ಸುಂಕ ನೀತಿಯನ್ನು ವಿಧಿಸಿದ್ದರು. ಆದರೆ ಅಮೇರಿಕಾ ಪಾಕಿಸ್ತಾನದ ಆಮದಿನ ಮೇಲೆ ಕೇವಲ 19% ಸುಂಕ ಮಾತ್ರ ವಿಧಿಸಿದ್ದರು. ಆದೃಉ ಟ್ರಂಪ್ ಸಂಬಂಧಕ್ಕೆ ಉಂಟಾಗಿರುವ ಅಡೆತಡೆಗಳನ್ನು ತೆಗೆದುಹಾಕಲು ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.ಇದನ್ನೂ ಓದಿ: ಭ್ರಷ್ಟಾಚಾರದ ಜಾಲ: ಡ್ರಗ್ಸ್ ಪೂರೈಕೆಗೆ ಪೊಲೀಸ್ ಬೆಂಬಲ, ತಿಂಗಳಿಗೆ 2 ಲಕ್ಷ ಮಾಮೂಲಿ – ಇನ್ಸ್‌ಪೆಕ್ಟರ್ ಸೇರಿ 11 ಜನ ಸಸ್ಪೆಂಡ್..!
ಟ್ರಂಪ್ ಅವರ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್ ಮಾತನಾಡಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಗ್ಗೆ ಟ್ರಂಪ್ ಅವರ ತಾಳ್ಮೆ ಈಗ ಕೊನೆಯಾಗುತ್ತಿದೆ. ಬ್ಯಾಂಕುಗಳು ಮತ್ತು ತೈಲದ ಮೇಲೆ ಹೊಸ ನಿರ್ಬಂಧ ವಿಧಿಸಬಹುದು. ಅದಕ್ಕಾಗಿ ಯುರೋಪಿಯನ್ ರಾಷ್ಟ್ರಗಳು ಒಗ್ಗೂಡಬೇಕಾಗುತ್ತದೆ ಎಂದು ಇತ್ತೀಚೆಗೆ ಕರೆ ನೀಡಿದ್ದರು.Stealodeal Eva Portable Headphone Headset Carry Case