Skip to main content
ವಿಡಿಯೋ
1/2
crime

ಧರ್ಮಸ್ಥಳ ತಲೆಬುರುಡೆ ಪ್ರಕರಣ...ದೂರುದಾರನ ಜಾಮೀನು ಅರ್ಜಿಗೆ ಸೆಪ್ಟೆಂಬರ್ 16ರಂದು ತೀರ್ಪು!

By Pavitra Ganapathi Baradavalli
ಧರ್ಮಸ್ಥಳ ತಲೆಬುರುಡೆ ಪ್ರಕರಣ...ದೂರುದಾರನ ಜಾಮೀನು ಅರ್ಜಿಗೆ ಸೆಪ್ಟೆಂಬರ್ 16ರಂದು ತೀರ್ಪು!

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹ ಹೂತಿದ್ದಾರೆ ಎಂಬ ಪ್ರಕರಣದಲ್ಲಿ ಬಂಧಿತ ದೂರುದಾರನ ಜಾಮೀನು ಅರ್ಜಿಯ ತೀರ್ಪನ್ನು ಸೆಪ್ಟೆಂಬರ್ 16ರಂದು ಪ್ರಕಟಿಸಲು ನ್ಯಾಯಾಲಯ ಕಾಯ್ದಿರಿಸಿದೆ.

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷಿ ದೂರುದಾರನಿಗೆ ಜಾಮೀನು ನೀಡುವ ಕುರಿತು ನ್ಯಾಯಾಲಯವು ಸೆಪ್ಟೆಂಬರ್ 16 ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಆಗಸ್ಟ್ 22 ರಂದು ಈ ದೂರುದಾರನನ್ನು ಬಂಧಿಸಿತ್ತು.ಇದನ್ನೂ ಓದಿ: ಹಾಸನದಲ್ಲಿ ನಿನ್ನೆ ಅಸುನೀಗಿದ ಗೋಕುಲ್‌ ಕುಟುಂಬಕ್ಕೆ ಸಾಂತ್ವಾನ ಹೇಳಿದ,ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ..!!


ಬಂಧನದ ನಂತರ, ಬೆಳ್ತಂಗಡಿ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಹಜರು ನಡೆಸಲಾಯಿತು. ನಂತರ ಸೆಪ್ಟೆಂಬರ್ 6 ರಂದು, ಬೆಳ್ತಂಗಡಿಯ ಜಿಎಂಎಫ್‌ಸಿ ನ್ಯಾಯಾಲಯ ದೂರುದಾರನಿಗೆ ನ್ಯಾಯಾಂಗ ಬಂಧನ ವಿಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಿತ್ತು.ಇದನ್ನೂ ಓದಿ: SIT ತಂಡದ ನೈತಿಕ ಸ್ಥೈರ್ಯ ಕುಗ್ಗಿಸಲು ಹುನ್ನಾರ ಆರೋಪ: ಮೌನ ಪ್ರತಿಭಟನೆ ಮಾಡಿ SITಗೆ ಧೈರ್ಯ ತುಂಬಲು ಮಹೇಶ್‌ ತಿಮರೋಡಿ ಕರೆ: ಯಾವಾಗ?

ದೂರುದಾರನ ಜಾಮೀನು ಅರ್ಜಿ ಶುಕ್ರವಾರ ವಿಚಾರಣೆಗೆ ಬಂದಿತ್ತು. ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಅವರು ವಾದಗಳನ್ನು ಆಲಿಸಿದ ನಂತರ ಆದೇಶವನ್ನು ಕಾಯ್ದಿರಿಸಿದರು. ಎಸ್‌ಐಟಿ ಪೊಲೀಸರು ತಮ್ಮ ವಕೀಲರ ಮೂಲಕ ಜಾಮೀನು ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು ದೂರುದಾರನ ಪರವಾಗಿ ವಾದ ಮಂಡಿಸಿದರು.ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಆವರಣದಲ್ಲಿ ಇನ್ನು ಸೆಲ್ಫಿ, ರೀಲ್ಸ್‌ಗೆ ನಿಷೇಧ: ಉಲ್ಲಂಘಿಸಿದವರಿಗೆ ಕಾದಿದೆ ಕಠಿಣ ಶಿಕ್ಷೆ

ಇದೇ ವೇಳೆ, ಸಾಕ್ಷಿ ದೂರುದಾರನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತಲೆಬುರುಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆಗೆ ಒಳಗಾಗಿದ್ದ ವಿಠಲ ಗೌಡರ ಆಪ್ತ ಎಂದು ಹೇಳಲಾದ ಬಂಟ್ವಾಳ ನಿವಾಸಿ ಪ್ರದೀಪ್ ಅವರನ್ನು ಎಸ್‌ಐಟಿ ಶುಕ್ರವಾರ ವಿಚಾರಣೆಗೊಳಪಡಿಸಿದೆ.ಇದನ್ನೂ ಓದಿ: ಏಷ್ಯಾ ಕಪ್‌; ದುಬೈ ಕ್ರಿಕೆಟ್ ಸಂಘರ್ಷ; ಭಾರತ-ಪಾಕಿಸ್ತಾನ ಪಂದ್ಯ ರದ್ದುಗೊಳಿಸಿ ಎಂದು ಪ್ರಿಯಾಂಕಾ ಚತುರ್ವೇದಿ ಆಗ್ರಹ! ಕಾರಣ ಹೀಗಿದೆ


ಪ್ರದೀಪ್ ಅವರನ್ನು ಮಧ್ಯಾಹ್ನ 3 ಗಂಟೆಗೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಮುಂದೆ ಸುಮಾರು ಎರಡು ಗಂಟೆಗಳ ಕಾಲ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.GOBOULT Q Over Ear Bluetooth Headphones with 70H Playtime, 40mm Bass Drivers, Zen™ ENC Mic, Type-C Fast Charging, 4 EQ Modes, AUX Option, IPX5 Headphones Wireless with mic (Beige)