Skip to main content
ವಿಡಿಯೋ
1/2
politics

ಹಾಸನ ದುರಂತ: ಸಚಿವ ಕೃಷ್ಣಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡು ಜನ ಆಕ್ರೋಶ..!

By Sushmitha R
ಹಾಸನ ದುರಂತ: ಸಚಿವ ಕೃಷ್ಣಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡು ಜನ ಆಕ್ರೋಶ..!

ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಟ್ರಕ್ ಹರಿದು 9 ಜನರು ಸಾವನ್ನಪ್ಪಿದ ಘನಘೋರ ದುರಂತದ ನಂತರ, ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಟ್ರಕ್ ಹರಿದು 9 ಜನರು ಸಾವನ್ನಪ್ಪಿದ ಘನಘೋರ ದುರಂತದ ನಂತರ, ಸ್ಥಳೀಯರು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಮದ್ದೂರು ಗಲಭೆ : ಯತ್ನಾಳ್‌, ಸಿ ಟಿ ರವಿ ವಿರುದ್ಧ ಎಫ್‌ಐಆರ್‌, ತಮ್ಮ ನಡೆ ಸಮರ್ಥಿಸಿಕೊಂಡ ಪರಮೇಶ್ವರ್‌…!!

ಈ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು ಇದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಒಬ್ಬ ವಿದ್ಯಾರ್ಥಿಯ ಸಾವು ಸಹ ಸೇರಿದೆ. ಆದರೆ, ಸಚಿವರು ತಮ್ಮ ಜವಾಬ್ದಾರಿ ನಿರ್ವಹಿಸದೆ ಇದ್ದಾರೆ ಎಂದು ಆಕ್ರೋಶಗೊಂಡಿರುವ ನಿವಾಸಿಗಳು.

Weavers Villa Women Dupatta

ನಿನ್ನೆ ಸಂಜೆ 8:45ರ ಸುಮಾರಿಗೆ ಮೊಸಳೆಹೊಸಹಳ್ಳಿಯಲ್ಲಿ ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದಾಗ, ಅರಕಲಗುಡು ಕಡೆಯಿಂದ ಬಂದ ಟ್ಯಾಂಕರ್ ಲಾರಿ ನಿಯಂತ್ರಣಗೊಳವಾಗದೆ ನುಗ್ಗಿತು. ಈ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ದೃಢಪಡಿಸಿದ್ದಾರೆ.

ಮೃತರಲ್ಲಿ ಹಾಸನದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಚಿಕ್ಕಮಗಳೂರಿನ ಸುರೇಶ್, ಚಿತ್ರದುರ್ಗದ ಮಿಥುನ್ ಹುಟ್ಟುಹಬ್ಬದ ದಿನ ಸಾವು, ಬಳ್ಳಾರಿಯ ಪ್ರವೀಣ್ ಕುಮಾರ್ ಸೇರಿದಂತೆ ಯುವಕರೇ ಹೆಚ್ಚು. 22 ಮಂದಿ ಗಾಯಗೊಂಡಿದ್ದು, ಅವರಲ್ಲಿ ಕೆಲವರು ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಾರಿಷಸ್ ಪ್ರಧಾನಿ ಭೇಟಿಯಾದ ಮೋದಿ...ಭಾರತ-ಮಾರಿಷಸ್ ಸಂಬಂಧಕ್ಕೆ ಹೊಸ ಪ್ರೇರಣೆ!

ಪ್ರಧಾನಿ ನರೇಂದ್ರ ಮೋದಿ ಕೂಡ ಈ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇದರ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯರೂ ಸ್ಥಳಕ್ಕೆ ಭೇಟಿ ನೀಡದೆ ಬೆಂಗಳೂರಿನಲ್ಲೇ ಉಳಿದಿರುವುದನ್ನು ಟೀಕಿಸುತ್ತಾ, ಸಿಎಂ ಯಾಕೆ ಬರಲಿಲ್ಲ? ನಮ್ಮ ನೋವನ್ನು ಅರ್ಥಮಾಡಿಕೊಳ್ಳಲು ಬಂದಿದ್ದರೆ ಒಂದು ರೀತಿ ಸಮಾಧಾನ ಎಂದು ಕಣ್ಣೀರು ಹಾಕಿದ ಕುಟುಂಬಸ್ಥರು. ಹಾಸನದಲ್ಲಿ ನಿನ್ನೆ ಅಸುನೀಗಿದ ಗೋಕುಲ್‌ ಕುಟುಂಬಕ್ಕೆ ಸಾಂತ್ವಾನ ಹೇಳಿದ,ಉಸ್ತುವಾರಿ ಸಚಿವ ಕೃಷ್ಣೇಬೈರೇ ಗೌಡ..!!