Skip to main content
ವಿಡಿಯೋ
1/2
weather

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತ, ಗೇರುಸೊಪ್ಪ ವಿದ್ಯುತ್‌ ಉತ್ವಾದನಾ ಘಟಕದ ಬಳಿಯೇ ಧರೆ ಕುಸಿತ…!!

By Pavitra Ganapathi Baradavalli
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗುಡ್ಡ ಕುಸಿತ, ಗೇರುಸೊಪ್ಪ ವಿದ್ಯುತ್‌ ಉತ್ವಾದನಾ ಘಟಕದ ಬಳಿಯೇ ಧರೆ ಕುಸಿತ…!!

ಮಳೆ ಎಲ್ಲೆಡೆ ತೀವ್ರವಾಗಿ ಸುರಿತ್ತಿರುವ ಹಿನ್ನೆಲೆ ಮಲೆನಾಡು ಭಾಗದಾದ್ಯಂತ ಗುಡ್ಡಕುಸಿತ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಸದ್ಯ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನಃ ಭೂಕುಸಿತವಾಗಿದೆ ಅದೂ ಗೇರುಸೊಪ್ಪ ವಿದ್ಯುತ್‌ ಉತ್ಪಾದನಾ ಘಟಕದ ಬಳಿ ಇರುವ ಬೃಹತ್‌ ಧರೆಯೇ ಕುಸಿದು ನೆಲಕಚ್ಚಿದೆ.

ಕಾರವಾರ: ಮಳೆ ಎಲ್ಲೆಡೆ ತೀವ್ರವಾಗಿ ಸುರಿತ್ತಿರುವ ಹಿನ್ನೆಲೆ ಮಲೆನಾಡು (Malenadu) ಭಾಗದಾದ್ಯಂತ ಗುಡ್ಡಕುಸಿತ (Land Slide) ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಸದ್ಯ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪುನಃ ಭೂಕುಸಿತವಾಗಿದೆ ಅದೂ ಗೇರುಸೊಪ್ಪ ವಿದ್ಯುತ್‌ ಉತ್ಪಾದನಾ ಘಟಕದ ಬಳಿ ಇರುವ ಬೃಹತ್‌ ಧರೆಯೇ ಕುಸಿದು ನೆಲಕಚ್ಚಿದೆ. ಆದರೂ ಸಹಿತ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ದುರಂತ...ಶಾಸಕ ಸತೀಶ್ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ!


ಮಲೆನಾಡಿನ ಭಾಗಗಳಲ್ಲಿ ಮೊದಲೇ ಮಳೆ ಪ್ರಮಾಣ ಹೆಚ್ಚಾಗಿರುತ್ತದೆ. ಅದ್ದರಿಂದ ಮಳೆಗಾಲ ಶುರುವಾಯಿತೆಂದರೆ ಅನಾಹುತಗಳೇ ಹೆಚ್ಚಾಗಿರುತ್ತವೆ. ವಿದ್ಯುತ್‌ ಕಂಬಗಳು ಧರೆಗುರುಳುವುದು, ಮರ ಬೀಳುವುದು ಹೀಗೆ ಒಂದಲ್ಲಾ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಬಳಿ ಇರುವ ಬೃಹದಾಕಾರದ ಧರೆ ಕುಸಿದಿದೆ.ಇದನ್ನೂ ಓದಿ: ಹಾಸನ ದುರಂತ: ಸಚಿವ ಕೃಷ್ಣಬೈರೇಗೌಡರನ್ನು ತರಾಟೆಗೆ ತೆಗೆದುಕೊಂಡು ಜನ ಆಕ್ರೋಶ..!

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತ್ತೆ ಭೂಕುಸಿತವಾಗಿದೆ. ಗೇರುಸೊಪ್ಪ ವಿದ್ಯುತ್ ಉತ್ಪಾದನಾ ಘಟಕದ ಬಳಿಯೇ ಧರೆ ಕುಸಿದಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿಯ ಜಲಾಶಯದ ಬಳಿ ಈ ಘಟನೆ ನಡೆದಿದೆ. ಈ ಹಿಂದೆ ಹೆಚ್ಚು ಮಳೆಯಾದ ಹಿನ್ನೆಲೆ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗಿತ್ತು.ಈ ಹಿನ್ನೆಲೆಯಲ್ಲಿ ಜಲಾಶಯದಿಂದ 20 ಕ್ಯೂಸೆಕ್‌ ನೀರನ್ನು ಹೊರಬಿಡಲಾಗಿತ್ತು. ಈ ಸಂದರ್ಭದಲ್ಲಿ ಜಲಾಶಯದ ತಡೆಗೋಡೆ ಪಕ್ಕದಲ್ಲೇ ಕುಸಿದಿತ್ತು.ಇದನ್ನೂ ಓದಿ: ಕೋಮು ಪ್ರಚೋದನೆ ಆರೋಪ: ಪೋಸ್ಟ್‌ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ಹೆಗ್ಗಡೆ ಬಂಧನ


ಆದರೆ ಈಗ ಜಲಾಶಯದ ಇನ್ನೊಂದು ಭಾಗದ ಧರೆ ಕುಸಿದು ಮರಗಳು ಬಿದ್ದಿವೆ. ಮತ್ತೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆ ಡ್ಯಾಂನ ತಡೆಗೋಡೆ ಇನ್ನೂ ಕುಸಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಡ್ಯಾಂ ಸಮೀಪದ ಧರೆ ಕುಸಿದರೂ ಸಹ ಜಲಾಶಯಕ್ಕೆ ಯಾವುದೇ ಹಾನಿಯಾಗಿಲ್ಲ.GOBOULT K40 True Wireless in Ear Earbuds with 48H Playtime, Clear Calling 4 Mics, 45ms Low Latency Gaming, Premium Grip, 13mm Bass Drivers, Type-C Fast Charging, BTv 5.3 Ear Buds TWS (Berry Red)