Skip to main content
ವಿಡಿಯೋ
1/2
crime

ಧರ್ಮಸ್ಥಳ ಪ್ರಕರಣ: ತನಿಖೆ ಚುರುಕುಗೊಳಿಸಿದ SIT...ಇಂದು ಬೆಳ್ತಂಗಡಿ ಕಚೇರಿಯಲ್ಲಿ ಐವರ ವಿಚಾರಣೆ..!

By Sushmitha R
ಧರ್ಮಸ್ಥಳ ಪ್ರಕರಣ: ತನಿಖೆ ಚುರುಕುಗೊಳಿಸಿದ SIT...ಇಂದು ಬೆಳ್ತಂಗಡಿ ಕಚೇರಿಯಲ್ಲಿ ಐವರ ವಿಚಾರಣೆ..!

ಧರ್ಮಸ್ಥಳದಲ್ಲಿ ಕೇಳಿಬಂದ ಶವ ಹೂತ ಪ್ರಕರಣದ ತನಿಖೆ ಗಟ್ಟಿಗೊಳ್ಳುತ್ತಿದೆ. ಇಂದು ಎಸ್‌ಐಟಿ ತಂಡವು ಐವರ ವಿಚಾರಣೆ ನಡೆಸಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಧರ್ಮಸ್ಥಳದಲ್ಲಿ ಕೇಳಿಬಂದ ಶವ ಹೂತ ಪ್ರಕರಣ ಸಂಬಂಧ, ಇಂದು SIT ತಂಡ ಐವರ ವಿಚಾರಣೆ ನಡೆಸಿದೆ. ಬುರುಡೆ ಇದ್ದ ಜಾಗವನ್ನು ಪೊಲೀಸರಿಗೆ ಕಾಡಿನಲ್ಲಿ ತೋರಿಸಿದ್ದ ಸಾಕ್ಷಿ ದೂರುದಾರ ಪಾಂಗಳ ವಿಠಲ, ಧರ್ಮಸ್ಥಳ ಗ್ರಾಮದ ಪ್ರದೀಪ್, ಬುರುಡೆ ತೆಗೆಯುವ ವಿಡಿಯೋ ಪ್ರಸಾರ ಮಾಡಿದ್ದ 'ಯುನೈಟೆಡ್ ಮೀಡಿಯಾ' ಯೂಟ್ಯೂಬ್ ಚಾನಲ್‌ನ ಅಭಿಷೇಕ್, ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಹಾಗೂ ಗಿರೀಶ್ ಮಟ್ಟಣ್ಣನವರ್ ಸೇರಿ ಐವರನ್ನು ಎಸ್‌ಐಟಿ ಅಧಿಕಾರಿಗಳು ಇಂದು ಬೆಳ್ತಂಗಡಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.ಧರ್ಮಸ್ಥಳ ಬುರುಡೆ ಕೇಸ್: ಸಮೀರ್ ಎಂ.ಡಿ ತಪ್ಪೊಪ್ಪಿಗೆ...ನಮ್ಮವರೇ ನನಗೆ ಕೈಕೊಟ್ರು ಎಂದು ಅಳಲು!

ಇನ್ನು ಇದೇ ಸೆಪ್ಟೆಂಬರ್ 17ರಂದು ಸೌಜನ್ಯ ಪರ ಹೋರಾಟಗಾರರು ಮಠ, ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಧರ್ಮಸ್ಥಳದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳಿಗೆ, ಸತ್ಯ ಹೊರತೆಗೆಯುವ ಶಕ್ತಿ ಸಿಗಲೆಂದು ಕೋರಿಕೆ ಸಲ್ಲಿಸುವ ಬಗ್ಗೆ ಮಹೇಶ್ ತಿಮರೋಡಿ ಅವರು ಹೇಳಿದ್ದಾರೆ.

Navlik Women's Vichitra Silk Embroidered Straight Kurta with Pant and Dupatta Sets (NK-695)https://amzn.in/d/8B7l65E

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ, ಮಹೇಶ್ ತಿಮರೋಡಿ ಅವರು ತಿಳಿಸಿದ್ದು, ಎಸ್‌ಐಟಿ ಅಧಿಕಾರಿಗಳು ಅಚ್ಚುಕಟ್ಟಾಗಿ ತನಿಖೆ ನಡೆಸುತ್ತಿದ್ದಾರೆ. ಆದ್ರೆ ತನಿಖೆಯನ್ನು ದುರ್ಬಲಗೊಳಿಸುವ ಯತ್ನವೂ ನಡೆಯುತ್ತಿದೆ ಎಂದಿದದ್ದಾರೆ.ಧರ್ಮಸ್ಥಳ ತಲೆಬುರುಡೆ ಪ್ರಕರಣ...ದೂರುದಾರನ ಜಾಮೀನು ಅರ್ಜಿಗೆ ಸೆಪ್ಟೆಂಬರ್ 16ರಂದು ತೀರ್ಪು!