Skip to main content
ವಿಡಿಯೋ
1/2
globalnews

ಮಹಿಳೆಯ ವೈರಲ್‌ ಪೋಸ್ಟ್‌ - "No Food, Washroom" - 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.!

By Shravanthi R
ಮಹಿಳೆಯ ವೈರಲ್‌ ಪೋಸ್ಟ್‌ - "No Food, Washroom" - 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.!

ಈ ಅವಮಾನ ಹಾಗೂ ದೀರ್ಘಕಾಲದ ಬಂಧನವು ಅವರೆಲ್ಲರ ವೀಸಾಗಳನ್ನು ಕಸಿದುಕೊಳ್ಳುವಲ್ಲಿ ಅಧಿಕಾರಿಗಳು ಕ್ರೌರ್ಯ ತೋರಿದ್ದಾರೆ ಎಂದು ಛೀಮಾರಿ ಹಾಕಿರುವ ಪೋಸ್ಟ್‌ ಎಲ್ಲೆಡೆ ಶೇರ್‌ ಆಗಿದೆ. ಪ್ರಮುಖವಾಗಿ ಅವರು ಭಾರತದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ಸಾಮಾಜಿಕ ಪ್ರೊಫೈಲ್‌ಗಳನ್ನು ಟ್ಯಾಗ್‌ ಮಾಡಿದ್ದಾರೆ.

ಜಾರ್ಜಿಯಾದಿಂದ ಅರ್ಮೇನಿಯಾವನ್ನು ಪ್ರವೇಶಿಸುತ್ತಿದ್ದ, 56 ಜನ ಭಾರತೀಯ ಪ್ರವಾಸಿಗರನ್ನು ಅಲ್ಲಿನ ಗಡಿ ಭಾಗದ ಅಧಿಕಾರಿಗಳು ದುರ್ವತನೆಯಿಂದ ನಡೆಸಿಕೊಂಡಿರುವ ಬಗ್ಗೆ ಮಹಿಳೆಯೊಬ್ಬರು ಹಂಚಿಕೊಂಡಿರುವ ಪೋಸ್ಟ್‌ ಇದೀಗ ವೈರಲ್‌ ಆಗಿದೆ. ಅಲ್ಲಿನ ಶೀತಲ ವಾತಾವರಣದಲ್ಲೂ ತಿನ್ನಲು ಆಹಾರ ಕೊಡದೇ, ಶೌಚಾಲಯವನ್ನು ಬಳಸದೇ ಇರುವ ಹಾಗೆ ಹೊರಗೆ ಕೂರಿಸಿದ್ದಾರೆ ಎಂಬ ಮಾಹಿತಿಯಿರುವ ಸಂದೇಶವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ರೌಡಿಗಳ ಆಕ್ಟಿವಿಟಿ ಹೆಚ್ಚಾದ ಹಿನ್ನೆಲೆ: ರೌಡಿಗಳ ಊರು ಬಿಡಿಸಲು ಮುಂದಾದ ಸಿಸಿಬಿ

ಧ್ರುವಿ ಪಟೇಲ್‌ ಎಂಬುವವರು, ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ತಿಳಿಸಲಾಗಿರುವಂತೆ, ಭಾರತೀಯರು ಮಾನ್ಯವಾದ ಪ್ರವಾಸ ವೀಸಾಗಳು ಹಾಗೂ ದಾಖಲೆಗಳನ್ನು ಹೊಂದಿದ್ದರೂ ಸಹಾ 56 ಜನ ಭಾರತೀಯರನ್ನು ಯಾವುದೇ ಆಹಾರ ಹಾಗೂ ಶೌಚಾಲಯ ಸೌಲಭ್ಯಗಳನ್ನು ಒದಗಿಸದೇ ಎರಡು ಗಂಟೆಗಳ ಕಾಲ ಎಲ್ಲವನ್ನೂ ನಿರ್ಬಂಧಿಸಿ, ಮುಟ್ಟುಗೋಲು ಹಾಕಿದ್ದರು. ಫುಟ್‌ಪಾತ್‌ನಲ್ಲಿ ದನಗಳಂತೆ ಕುಳಿತುಕೊಳ್ಳಲು ಆದೇಶಿಸಿದರು, ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಗ್ರಹಿಸಿದ್ದಾರೆ.Vega Zap D/V ISI and DOT Certified Matte Finish Full Face Helmet for Men with Dual Visors and Spoiler-Dull Athena Grey-M

ಈ ಅವಮಾನ ಹಾಗೂ ದೀರ್ಘಕಾಲದ ಬಂಧನವು ಅವರೆಲ್ಲರ ವೀಸಾಗಳನ್ನು ಕಸಿದುಕೊಳ್ಳುವಲ್ಲಿ ಅಧಿಕಾರಿಗಳು ಕ್ರೌರ್ಯ ತೋರಿದ್ದಾರೆ ಎಂದು ಛೀಮಾರಿ ಹಾಕಿರುವ ಪೋಸ್ಟ್‌ ಎಲ್ಲೆಡೆ ಶೇರ್‌ ಆಗಿದೆ. ಪ್ರಮುಖವಾಗಿ ಅವರು ಭಾರತದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಹಾಗೂ  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ಸಾಮಾಜಿಕ ಪ್ರೊಫೈಲ್‌ಗಳನ್ನು ಟ್ಯಾಗ್‌ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಕೇಳಿಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ನಂಜೇಗೌಡರ ಗೆಲುವಿಗೆ ಅಸಿಂಧು ತೀರ್ಪು! ಹೈಕೋರ್ಟ್ ಹೇಳಿದ ಪ್ರಮುಖ ಕಾರಣಗಳು ಏನೇನು ಗೊತ್ತಾ?