Skip to main content
ವಿಡಿಯೋ
1/2
general

ಬೀದರ್‌ನಲ್ಲಿ ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಕಳವು ಮಾಡಿದ ಖದೀಮರ ಗ್ಯಾಂಗ್‌..!!

By Pavitra Ganapathi Baradavalli
ಬೀದರ್‌ನಲ್ಲಿ ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಕಳವು ಮಾಡಿದ ಖದೀಮರ ಗ್ಯಾಂಗ್‌..!!

 ಮನೆಯಲ್ಲಿ ಇರುವವರು ಸ್ವಲ್ಪ ಹೊತ್ತು ಮನೆ ಬಿಟ್ಟು ಆಚೆ ಹೋದರೂ ಸಾಕು ಇಡೀ ಮನೆಯನ್ನೇ ಗುಡಿಸಿ ಗುಡಾಂತರ ಮಾಡುವ ಕಾಲವಿದು ಅಂತಹದರಲ್ಲಿ ಮನೆಯನ್ನು ಕೆಲಕಾಲ ಬೀದರ್‌ನಲ್ಲಿ ಬಿಟ್ಟು ಹೋದವರಿಗೆ ಮನೆಗೆ ಮರಳಿದ ಮೇಲೆ ಶಾಕ್‌ ಕಾದಿದೆ. ಮನೆಯ ಬೀಗ ಮುರಿದು  10 ಲಕ್ಷ ರೂಪಾಯಿಗೂ ಅಧಿಕ ಚಿನ್ನಾಭರಣವನ್ನು ದೋಚಿದ್ದಾರೆ.

ಬೀದರ್: ಮನೆಯಲ್ಲಿ ಇರುವವರು ಸ್ವಲ್ಪ ಹೊತ್ತು ಮನೆ ಬಿಟ್ಟು ಆಚೆ ಹೋದರೂ ಸಾಕು ಇಡೀ ಮನೆಯನ್ನೇ ಗುಡಿಸಿ ಗುಡಾಂತರ ಮಾಡುವ ಕಾಲವಿದು ಅಂತಹದರಲ್ಲಿ ಮನೆಯನ್ನು ಕೆಲಕಾಲ ಬೀದರ್‌ನಲ್ಲಿ ಬಿಟ್ಟು ಹೋದವರಿಗೆ ಮನೆಗೆ ಮರಳಿದ ಮೇಲೆ ಶಾಕ್‌ ಕಾದಿದೆ. ಮನೆಯ ಬೀಗ ಮುರಿದು  10 ಲಕ್ಷ ರೂಪಾಯಿಗೂ ಅಧಿಕ ಚಿನ್ನಾಭರಣವನ್ನು ದೋಚಿದ್ದಾರೆ.ಇದನ್ನೂ ಓದಿ: ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ ಸಾಧ್ಯತೆ! ಇಂದು ಎಷ್ಟು ಇಳಿಕೆ ?


ಈ ಘಟನೆ ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದ ಬಾಲಾಜಿ ನಗರದಲ್ಲಿ ನಡೆದಿದೆ. ಜಾಲೇಂದರ್‌ ಭೀಮಣ್ಣ ಮತ್ರೆ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿ ಭಾರೀ ಪ್ರಮಾಣದ ಚಿನ್ನಾಭರಣವನ್ನು ಖದೀಮರು ದೋಚಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಖಾತ್ರಿ ಮಾಡಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದಾರೆ.ಇದನ್ನೂ ಓದಿ: ಮಹಿಳೆಯ ವೈರಲ್‌ ಪೋಸ್ಟ್‌ - "No Food, Washroom" - 56 ಭಾರತೀಯರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.!


ಮನೆ ಮಾಲೀಕರು ಪುನಃ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಭಾಲ್ಕಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಸ್ಥಳಕಕ್ಕೆ ಭೇಟಿ ನೀಡಿ ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.MANOHARI Adorable Woven Pattern Banarasi Silk Saree For Women With Blouse Piece_Mn1742-1, Red