ಡೆಹ್ರಾಡೂನ್: ಮಳೆಗಾಲದ ಸಂದರ್ಭ ಅದರಲ್ಲೂ ಉತ್ತರಾಖಂಡದ(Uttarakhand) ಪ್ರದೇಶಗಳಲಂತೂ ಮೇಘಸ್ಫೋಟ ಗುಡ್ಡ ಕುಸಿತ ಹೀಗೆ ಇತ್ಯಾದಿ ರೀತಿಯ ಅನಾಹುತಗಳು ನಡೆಯುತ್ತಲೇ ಇರುತ್ತವೆ ಅದೇ ರೀತಿಯಾಗಿ ಉತ್ತರಾಖಂಡದ ಚಮೋಲಿಯಲ್ಲಿ (Chamoli) ಮತ್ತೆ ಮೇಘಸ್ಫೋಟ (Cloudburst) ಸಂಭವಿಸಿದೆ. ಈ ಮೇಘಸ್ಫೋಟದಲ್ಲಿ 5 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂಬುದು ತಿಳಿದುಬಂದಿದೆ.ಇದನ್ನೂ ಓದಿ: ಬೀದರ್‌ನಲ್ಲಿ ಮನೆಯ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಚಿನ್ನಾಭರಣ ಕಳವು ಮಾಡಿದ ಖದೀಮರ ಗ್ಯಾಂಗ್..!!
ಚಮೋಲಿ ಜಿಲ್ಲೆಯ ನಂದಾ ನಗರದಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮೇಗಸ್ಫೋಟ ಸಂಭವಿಸಿದೆ. ಭಾರೀ ಪ್ರಮಾಣದ ನೀರು ಹರಿದುಬಂದ ಪರಿಣಾಮ 6 ಕಟ್ಟಡಗಳು ನೆಲಸಮಗೊಂಡಿದೆ. ಇನ್ನುಳಿದಂತೆ 5 ಕ್ಕೂ ಹೆಚ್ಚು ಜನ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿಯಿಡೀ ಧಾರಾಕಾರ ಮಳೆಯ ರುದ್ರನರ್ತನ....!
ಮೇಘಸ್ಫೋಟದಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಸದ್ಯ ಸ್ಥಳಕ್ಕೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಲೋಕೋಪಯೋಗಿ ಇಲಾಖೆಯ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ. ಜೊತೆಗೆ ಜೆಸಿಬಿ ಮತ್ತು ಇತರೆ ಉಪಕರಣಗಳನ್ನು ಬಳಸಿಕೊಂಡು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ.ಇದನ್ನೂ ಓದಿ:ನೇಪಾಳದಂತೆಯೇ ರಾಜ್ಯದಲ್ಲಿ ಸಿಡಿದೆದ್ದ Gen Z ಪ್ರತಿಭೆ : ಹಾಸ್ಟೆಲ್ ಸೀಟು ಸಿಗದ ಹಿನ್ನೆಲೆ ಸಚಿವರ ವಿರುದ್ಧ ಸಮರ..!
ಅಧಿಕಾರಿಗಳ ಮಾಹಿತಿಯ ಪ್ರಕಾರ ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ಜೀವಂತವಾಗಿ ಹೊರತಗಿಯಲಾಗಿದೆ. ಸದ್ಯ ಮಿಕ್ಕವರಿಗೋಸ್ಕರ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ. ಮತ್ತು ತುರ್ತು ಸೇವೆಗಳಾದ ಆಂಬ್ಯುಲೆನ್ಸ್, ಮತ್ತು ವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದೆ.ಇದನ್ನೂ ಓದಿ: ಯಡಿಯೂರಪ್ಪ–ಬೊಮ್ಮಾಯಿ ಹಾಗೂ ಮಾಡಾಳ್ ಕುಟುಂಬದ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ!
ಇನ್ನೂ ಕೆಲವು ದಿನ ಚಮೋಲಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕೂ ಮುನ್ನ ಡೆಹ್ರಾಡೂನ್ನ ಸಹಸ್ರಧಾರದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದರು.Yashika Women's Fancy Banarasi Kanjivaram Art Silk Saree with Blouse Pieces||Yellow Coloured Kanjivaram Saree|| AZ-YS-OG-YUKTI YELLOW