Skip to main content
ವಿಡಿಯೋ
1/2
politics

ಜಾತಿ ಗಣತಿ ಕುರಿತು ಸಿಎಂ ನಿವಾಸದಲ್ಲಿ ಮತ್ತೊಂದು ಸುತ್ತಿನ ಹೈವೋಲ್ಟೇಜ್‌ ಸಭೆ ನಿಗಧಿ…!!

By Pavitra Ganapathi Baradavalli
ಜಾತಿ ಗಣತಿ ಕುರಿತು ಸಿಎಂ ನಿವಾಸದಲ್ಲಿ ಮತ್ತೊಂದು ಸುತ್ತಿನ ಹೈವೋಲ್ಟೇಜ್‌ ಸಭೆ ನಿಗಧಿ…!!

ಜಾತಿ ಗಣತಿ ಗೊಂದಲ ಸಂಬಂಧಿಸಿ ಮತ್ತೊಂದು ಸುತ್ತಿನ ಸಭೆಯನ್ನು ಸಿಎಂ ನಡೆಸಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸಿಎಮ ಸಭೆ ಇನ್ನೇನು ಆರಂಭವಾಗಲಿದೆ. ಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ಮೀಟಿಂಗ್‌ ನಡೆಯಲಿದೆ. ಎಲ್ಲಾ ಸಚಿವರುಗಳು ಸಿಎಂ ನಿವಾಸಕ್ಕೆ ಈಗಾಗಲೇ ಆಗಮಿಸುತ್ತಿದ್ದಾರೆ.

ಬೆಂಗಳೂರು: ಜಾತಿ ಗಣತಿ ಗೊಂದಲ ಸಂಬಂಧಿಸಿ ಮತ್ತೊಂದು ಸುತ್ತಿನ ಸಭೆಯನ್ನು ಸಿಎಂ ನಡೆಸಲಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸಿಎಮ ಸಭೆ ಇನ್ನೇನು ಆರಂಭವಾಗಲಿದೆ. ಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ಮೀಟಿಂಗ್‌ ನಡೆಯಲಿದೆ. ಎಲ್ಲಾ ಸಚಿವರುಗಳು ಸಿಎಂ ನಿವಾಸಕ್ಕೆ ಈಗಾಗಲೇ ಆಗಮಿಸುತ್ತಿದ್ದಾರೆ. ಸಂಪುಟದ ಸಚಿವರ ಜೊತೆ ಸಭೆ ನಡೆಸಲಿರುವ ಸಿಎಂ.

ಜೊತೆಗೆ ಹಿಂದುಳಿದ ವರ್ಗಗಳ ಆಯೋಗದ ಜೊತೆಗೂ ಮೀಟಿಂಗ್‌ ನಡೆಸುವ ಸಾಧ್ಯತೆ ಇದೆ.ಇದನ್ನೂ ಓದಿ: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣ ದರ್ಶನ್ ಸೇರಿದಂತೆ 17 ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರು.


ಹೆಚ್ಚುವರಿ ಜಾತಿ ತೆಗೆದು ಸಮೀಕ್ಷೆ ಮುಂದುವರೆಕೆಯ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜಾತಿ ಗಣತಿ ಯಾವತ್ತೂ ಸಹ ಗೊಂದಲದ ವಿಚಾರ ಏಕೆ ಅಂದರೆ ಜಾತಿ ಗಣತಿಯಲ್ಲಿ ಒಂದು ವರ್ಗಕ್ಕೆ ಅನುಕೂಲವಾದರೆ ಮತ್ತೊಂದು ವರ್ಗಕ್ಕೆ ಅನಾನುಕೂಲವಾಗುತ್ತದೆ ಹಾಗಾಗಿ ಯಾವ ಜಾತಿಗಳಿಗೂ ಮೋಸವಾಗದ ರೀತಿಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.ಇದನ್ನೂ ಓದಿ: ECI ಅಪ್‌ಗಳಾದ NVSP, VHA ಮೂಲಕ ಆಳಂದದಲ್ಲಿ 6,018 ಮತಗಳ ಡೀಲಿಟ್‌ ಮಾಡಲು ಯತ್ನ; ಕರ್ನಾಟಕ CEO ತಿರುಗೇಟು


ಸಭೆಯಲ್ಲಿ ಒಟ್ಟು ಎರೆಡು ವಿಷಯದ ಕುರಿತು ಚರ್ಚೆ ನಡೆಯಲಿದೆ ಮೊದಲನೇಯದು ಸೆಪ್ಟೆಂಬರ್‌ 22 ಕ್ಕೆ ಜಾತಿ ಗಣತಿ ಆರಂಭ ಮಾಡಬೇಕೋ ಬೇಡವೋ ಎಂದು ಇನ್ನೂ ಎರಡನೇಯದು ಜಾತಿ ಗಣತಿ ಮುಂದೂಡಿದರೆ ಯಾವ ಸಮಯಾವಕಾಶವನ್ನು ಪಡೆದುಕೊಂಡು ಮುಂದೂಡಬೇಕು ಎಂಬುದಾಗಿ ಸಭೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ.C J Enterprise Women's Kanjivaram Art Silk Saree Soft Banarasi Style Sari With Blouse Piece For Wedding (Pari122-51)