Skip to main content
ವಿಡಿಯೋ
1/2
politics

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ರಾಜಕಾರಣ: ಶೋಭಾ ಕರಂದ್ಲಾಜೆ ಟೀಕೆ...!

By Sushmitha R
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ರಾಜಕಾರಣ: ಶೋಭಾ ಕರಂದ್ಲಾಜೆ ಟೀಕೆ...!

ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಫಲರಾದಾಗ ಜಾತಿ ಅಸ್ತ್ರವನ್ನು ಬಳಸುತ್ತಾರೆ ಎಂದು ತೀವ್ರ ಟೀಕೆ ಮಾಡಿದ್ದಾರೆ.

ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಫಲರಾದಾಗ ಜಾತಿ ಅಸ್ತ್ರವನ್ನು ಬಳಸುತ್ತಾರೆ ಎಂದು ತೀವ್ರ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯನವರು ಈ ಹಿಂದೆ ಲಿಂಗಾಯತ ಮತ್ತು ವೀರಶೈವ ಸಮುದಾಯಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈಗ ಮತ್ತೆ ಜಾತಿಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.ಜಾತಿ ವಿಚಾರದಲ್ಲಿ ಸರ್ಕಾರದಿಂದ ಎಡವಟ್ಟು ಇದೊಂದು ಎಡವಟ್ಟಿನ ಸರ್ಕಾರ : ಅಶ್ವತ್ಥ್‌ ನಾರಾಯಣ್‌ ಕಿಡಿ..!!

ಶೋಭಾ ಕರಂದ್ಲಾಜೆ ಅವರು, ಒಕ್ಕಲಿಗ, ಲಿಂಗಾಯತ, ಗಾಣಿಗ, ವೀರಶೈವ, ನೇಕಾರ ಮುಂತಾದ ಸಮುದಾಯಗಳಲ್ಲಿ ಹೊಸದಾಗಿ ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ವೀರಶೈವ ಕ್ರಿಶ್ಚಿಯನ್ ಎಂಬ ವರ್ಗಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದ್ದಾರೆ. ಈ ಹೊಸ ವರ್ಗೀಕರಣದ ಮೂಲಕ ಸಿದ್ದರಾಮಯ್ಯನವರು ಮೀಸಲಾತಿ ವ್ಯವಸ್ಥೆಯನ್ನು ಕಿತ್ತುಕೊಳ್ಳಲು ಯೋಜನೆ ರೂಪಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.GRECIILOOKS Hand bags For Women Stylish | Office use | Ladies Purse | Latest | Handbags | Tote Bag | Handbag For Women's Big Size

ಹಿಂದೂ ಸಮಾಜವು ಜಾತಿ ಮತ್ತು ಧರ್ಮದ ಗೋಡೆಗಳನ್ನು ಮೀರಿ ಒಗ್ಗೂಡಬೇಕು ಎಂದು ಕರೆ ನೀಡಿರುವ ಶೋಭಾ, ಒಡೆಯುವ ರಾಜಕಾರಣದಿಂದ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿದ್ದಾರೆ. ಬ್ರಿಟಿಷರ ಕಾಲದ ಒಡೆದು ಆಳುವ ಮನಸ್ಥಿತಿಯನ್ನೇ ಸಿದ್ದರಾಮಯ್ಯ ಸರ್ಕಾರವೂ ಅನುಸರಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಎಂಬ CJI ಗವಾಯಿ ಹೇಳಿಕೆ ವಿವಾದ: ಕೊನೆಗೆ ಏನಾಯಿತು? ಇಲ್ಲಿದೆ ಮಾಹಿತಿ

ಸಿದ್ದರಾಮಯ್ಯನವರ ಈ ಕ್ರಮಗಳು ಸಮಾಜದ ಐಕ್ಯತೆಗೆ ಧಕ್ಕೆ ತರುತ್ತವೆ ಎಂದು ಆರೋಪಿಸಿರುವ ಶೋಭಾ ಕರಂದ್ಲಾಜೆ, ಹಿಂದೂ ಸಮುದಾಯವು ಒಗ್ಗಟ್ಟಿನಿಂದ ಈ ರಾಜಕೀಯ ತಂತ್ರಗಾರಿಕೆಗೆ ಪ್ರತಿರೋಧ ಒಡ್ಡಬೇಕು ಎಂದು ಒತ್ತಾಯಿಸಿದ್ದಾರೆ. ಜಾತಿಗಳ ವಿಭಜನೆಯಿಂದ ರಾಜಕೀಯ ಲಾಭ ಪಡೆಯುವ ಬದಲು, ಸಮಾಜದ ಸಾಮರಸ್ಯಕ್ಕೆ ಒತ್ತು ನೀಡಬೇಕು ಎಂಬುದು ಅವರ ವಾದವಾಗಿದೆ.ಯಾವ ಸಮುದಾಯದಲ್ಲಿ ಎಷ್ಟು ಜನ ಬಡವರಿದ್ದಾರೆ, ಯಾವ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಷ್ಟು ಮುಂದುವರೆದಿದೆ ಎಂದು ತಿಳಿಯಲು ಜಾತಿ ಸಮೀಕ್ಷೆ ಅಗತ್ಯ : ಸಂತೋಷ್‌ ಲಾಡ್‌..!!