ಜಾತಿಗಣತಿ ವಿಚಾರದಲ್ಲಿ ಸಾಕಷ್ಟು ನಾಯಕರು ಪ್ರತಿಕ್ರಿಯೆ ನೀಡುತ್ತಾ ಬಂದಿದ್ದಾರೆ ಅದರಲ್ಲೂ ಜಾತಿ ಗಣತಿ ಸರಿಯಿಲ್ಲ ಅಸಮರ್ಪಕ, ಜಾತಿ ಗಣತಿ ಎಂಬುದು ಪೂರ್ಣ ಗೊಂದಲಮಯವಾಗಿದೆ ಎಂದು ಸ್ವಪಕ್ಷ ಮತ್ತು ವಿಪಕ್ಷದ ನಾಯಕರು ವಿವಿಧ ರೀತಿಯಾಗಿ ಚಾಟಿ ಬೀಸಿದರು.ಇದನ್ನೂ ಓದಿ: ಜಾತಿ ಮುಂದೂಡಲು ಸಾಧ್ಯವಿಲ್ಲ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ…!!
ಆದರೆ ಈಗ ಸಮಯ ಬಂದಿರೋದು ಮಾಜಿ ಸಭಾಪತಿಯಾದ ಸುದರ್ಶನ್ ಅವರದು. ರಾಮನಗರದಲ್ಲಿ ದೇವರಾಜ ಅರಸು ಅವರ 110 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಭಾಪತಿ ಸುದರ್ಶನ್ ಅವರು ಜಾತಿ ಗಣತಿ ಸಮೀಕ್ಷೆ ವಿಚಾರದಲ್ಲಿ ಯಾಕಿಷ್ಟು ಗೊಂದಲ ಆಗುತ್ತದೆ ಎಂದು ಮಾಜಿ ಸಭಾಪತಿ ಸುದರ್ಶನ್ ಅಸಮಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾತಿ ರಾಜಕಾರಣ: ಶೋಭಾ ಕರಂದ್ಲಾಜೆ ಟೀಕೆ...!
ಈ ರೀತಿಯ ಗೊಂದಲಗಳಿಗೆ ಸರ್ಕಾರ ಕಾರಣವಾಗಬಾರದು. ಕೆಲವು ನಿರ್ಧಾರಗಳನ್ನು ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಸರ್ಕಾರ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾಗ ಸಾಕಷ್ಟು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಈ ರೀತಿಯ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ನೋಟಿಫಿಕೇಶನ್ ಹೊರಡಿಸಬೇಕಿತ್ತು. ವೇದಿಕೆಯ ಮೇಲೆಯೆ ಸಮೀಕ್ಷೆಯಲ್ಲಿ ಕೆಲವು ಗೊಂದಲಗಳನ್ನು ತೆಗೆದುಹಾಕಬೇಕು ಎಂದು ಡಿಕೆ ಶಿವಕುಮಾರ್ ಅವರಿಗೆ ಸುದರ್ಶನ್ ಅವರು ಮನವಿಯನ್ನು ಸಹ ಮಾಡಿದ್ದಾರೆ.C J Enterprise Women's Banarasi Pure Soft Kanjivaram Silk Saree With Blouse Piece For Wedding (Champa-51)