ಕನ್ನಡ ಚಿತ್ರರಂಗ ಇಲ್ಲಿಯವರೆಗೆ ಸಾಕಷ್ಟು ನಟರು, ನಾಯಕ ನಟ, ನಾಯಕ ನಟಿಯರನ್ನು ನೋಡಿದೆ ನಾಯಕ ನಟಿಯರ ವಿಚಾರಕ್ಕೆ ಬರುವುದಾದರೆ ಬೇರೆ ಬೇರೆ ರಾಜ್ಯಗಳಿಂದ ಕರೆತಂದು ಚಿತ್ರದಲ್ಲಿ ಅವಕಾಶವನ್ನು ನೀಡಿ ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ನಾಯಕನಟಿಗೆ ಮಣೆ ಹಾಕುವುದು ಸಹಜ. ಅದೇ ರೀತಿ ಸ್ಯಾಂಡಲ್‌ವುಡ್ ಸೇರಿ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲೂ ಆಗುತ್ತಿದೆ.
ಆದರೆ ನಾಯಕ ನಟರ(ಹೀರೊಗಳ) ವಿಚಾರಕ್ಕೆ ಬರುವುದಾದರೆ ಅದು ಆ ರೀತಿ ಆಗುವುದಿಲ್ಲ. ಏಕೆಂದರೆ ಅಲ್ಲಿನ ಸಿನಿಮಾ ಪರಿಸರದ ಜನತೆ ಬೇರೆ ನಾಯಕ ನಟರನ್ನು ಒಪ್ಪುವುದು ಸ್ವಲ್ಪ ಕಷ್ಟ. ಏಕೆಂದರೆ ಭಾಷಾ ಪ್ರೇಮಿಯಾಗಿರುವ ಯಾವುದೇ ಸಿನಿಮಾ ಅಭಿಮಾನಿ ಅವನು ನೋಡುವ ಸಿನಿಮಾದಲ್ಲಿ ತನ್ನ ಮಾತೃಭಾಷೆಯ ನಾಯಕನೆ ತನ್ನ ಭಾಷೆಯ ಸಿನಿಮಾದಲ್ಲಿ ಇರಬೇಕು ಎಂದು ಬಯಸುತ್ತಾನೆ, ಹೀಗಾಗಿ ಬೇರೆ ರಾಜ್ಯದ ನಾಯಕನಟರನ್ನು ತಂದು ಬೇರೆ ರಾಜ್ಯಗಳಲ್ಲಿ ಅಭಿನಯಿಸುವಂತೆ ಮಾಡುವುದು ತುಸು ಕಷ್ಟ. ಆದರೆ ಅತಿಥಿ ಪಾತ್ರದಲ್ಲಿ ಬೇರೆ ರಾಜ್ಯದ ನಾಯಕ ನಟರು ಬಂದರೆ ಅವರನ್ನು ಮೆರೆಸಿ ಕಳಿಸುವುದರಲ್ಲಿ ನಾವು ನಿಸ್ಸೀಮರು ಎಂದೆ ಹೇಳಬಹುದು.
ಕೆಲವು ದಶಕಗಳಿಂದ ನಾವು ನೋಡಿಕೊಂಡು ಬಂದಿರುವ ನಾಯಕ ನಟರೆಂದರೆ ಡಾ. ಶಿವರಾಜ್‌ಕುಮಾರ್, ದರ್ಶನ್, ಯಶ್, ಸುದೀಪ್, ಹಾಗೂ ಯಶಸ್ವಿ ನಟ, ನಿರ್ದೇಶಕರಾದ ರಿಶಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ. ಹೀಗಾಗಿ ಇವರ ಚಿತ್ರಗಳನ್ನು ಬಿಟ್ಟರೆ ಬೇರೆ ಚಿತ್ರಗಳ ಕಡೆಗೆ ಪ್ರೇಕ್ಷಕ ಮಹಾಪ್ರಭು ಮನಸ್ಸು ಮಾಡಿ ಆ ಚಿತ್ರಗಳನ್ನು ನೋಡುತ್ತಿಲ್ಲ. ಹೀಗಿರುವ ಈ ತಲೆಮಾರು ಬಿಟ್ಟು ಮುಂದಿನ ತಲೆಮಾರಿನ ನಾಯಕರು ಯಾರು ಎಂದು ಪ್ರಶ್ನೆ ಹುಟ್ಟಿಕೊಂಡರೆ ಅದಕ್ಕೆ ಉತ್ತರವೇ ಇಲ್ಲದಂತಾಗಿದೆ.ಇದನ್ನು ಓದಿ: H-1B ವೀಸಾದ ಗೇಮ್ ಓವರ್? $100,000 ರ ದೊಡ್ಡ ಫೀ ವಿಧಿಸಿದ ಟ್ರಂಪ್: ಸೆಪ್ಟೆಂಬರ್ 21, 2025ರಿಂದ ಜಾರಿಗೆ: ಇಲ್ಲಿದೆ ಮಾಹಿತಿ
- ಈ ಮೇಲಿನ ಹೀರೋಗಳು ಅಷ್ಟೊಂದು ಪ್ರಸಿದ್ದಿ ಪಡೆದದ್ದು ಏತಕ್ಕೆ...?
ಮುಖ್ಯವಾಗಿ ಈ ಮೇಲಿನ ಹೀರೋಗಳು ಅದರಲ್ಲೂ ದರ್ಶನ್, ಸುದೀಪ್, ಯಶ್ ಈ ಮೂವರು ಹೀರೋಗಳು ಸಾಕಷ್ಟು ಕಷ್ಟಪಟ್ಟು ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಅವರ ಅಪಾರ ಶ್ರದ್ಧೆ ಚಿತ್ರದ ಮೇಲಿರುವ ಅಭಿಮಾನ, ಅಭಿಮಾನಿಗಳ ಮೇಲಿರುವ ಅಭಿಮಾನ, ಇವೆಲ್ಲವೂ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಿಲ್ಲ...
ಮತ್ತೊಂದು ಮುಖ್ಯವಾದ ಅಂಶವೆಂದರೆ ಚಿತ್ರಕ್ಕೆ ಕಥೆಗಳ ಆಯ್ಕೆ. ಈ ಹಿಂದಿನ ನಿರ್ದೇಶಕರು ಉತ್ತಮ ಚಿತ್ರಕಥೆಗಳನ್ನು ನೀಡುತ್ತಿದ್ದರು. ಒಂದೊಂದು ಬಾರಿ ಅದು ಬೇರೆ ಸಿನಿಮಾ ಇಂಡಸ್ತ್ರಿಯಿಂದ ರಿಮೇಕ್ ಆಗಿದ್ದರೂ ಪರವಾಗಿಲ್ಲ, ಒಳ್ಳೆಯ ಚಿತ್ರಕಥೆಗಳು ಇದ್ದವು. ಅದರಲ್ಲಿ ಉದಾಹರಣೆಯಾಗಿ ನೋಡುವುದಾದರೆ ದರ್ಶನ್ ಅವರ ಸುಂಟರಗಾಳಿ, ಪೊರ್ಕಿ ಇನ್ನೂ ಈ ರೀತಿಯ ಹಲವು ಚಿತ್ರಗಳು.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಡಾ. ರಾಜಕುಮಾರ್ ಫ್ಯಾಮಿಲಿಯ ಕುಡಿಗಳಾದ ಡಾ. ಶಿವರಾಜ್‌ಕುಮಾರ್ ಮತ್ತು ದಿ. ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಾಯಕ ನಟರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ದಿ. ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಂದು ಇಲ್ಲ ಹೀಗಾಗಿ ಒಬ್ಬ ಉತ್ತಮ ನಾಯಕ ನಟ ಮತ್ತು ಜನಪ್ರಿಯ ವ್ಯಕ್ತಿಯನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ ಹೀಗಾಗಿ ಅವರ ಜಾಗವನ್ನು ತುಂಬಬಲ್ಲ ಮತ್ತೊಬ್ಬ ನಟ ಸದ್ಯಕ್ಕೆ ಇಲ್ಲ..
ಇನ್ನು ಶಿವರಾಜ್‌ಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿ ಅಷ್ಟೇ ಅಲ್ಲದೆ ತಮಿಳು ಫಿಲಂ ಇಂಡಸ್ಟ್ರಿಗು ತುಂಬಾ ಹತ್ತಿರವಾದವರು. ಈಗಂತೂ ಸಕ್ಕತ್ ಕೊಲಾಬರೇಷನ್ಗಳು ನಡೆಯುತ್ತಿವೆ. ಹೀಗಾಗಿ ಶಿವರಾಜ್‌ಕುಮಾರ್ ಅವರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಸಹ ಅವರಿಗೆ ಅಭಿಮಾನಿ ಬಳಗವಿದೆ ಹೀಗೆ ಶಿವರಾಜ್‌ಕುಮಾರ್ ಕನ್ನಡದ ಆಸ್ತಿ ಎಂದರೆ ತಪ್ಪಿಲ್ಲ.
ನಾನು ಒಬ್ಬ ಪ್ರೇಕ್ಷಕನಾಗಿ ಯೋಚನೆ ಮಾಡಿದಾಗ ನನಗೆ ಅನಿಸುವ ಪ್ರಶ್ನೆ ಇವರೆಲ್ಲರ ನಂತರ ಇವರ ಜಾಗವನ್ನು ತುಂಬುವ ಮುಂದಿನ ಪೀಳಿಗೆಯ ನಟರು ಯಾರು ಎಂಬುದು?ಇದನ್ನು ಓದಿ: ಶೃಂಗೇರಿ ಲಾಡ್ಜ್‌ನಲ್ಲಿ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಲಾಕ್: ಅಬ್ದುಲ, ರಮೇಶನಾದ ಕಥೆ: ಇಲ್ಲಿದೆ ಮಾಹಿತಿ
ಇದಕ್ಕೆ ಉತ್ತರ ಹುಡುಕುವುದು ತುಂಬಾ ಕಷ್ಟ ಏಕೆಂದರೆ ಈಗಿನ ಕಾಲದ ಯುವ ಹೀರೋಗಳು ಸಾಧಾರಣವಾಗಿ ಫ್ಯಾನ್ಸಿ ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆ ಕಥೆಗಳಲ್ಲಿ ಗಟ್ಟಿಯಾದ ಕಥಾ ಹಂದರವಾಗಲಿ ವಸ್ತುನಿಷ್ಠ ಚಿತ್ರಕಥೆಯಾಗಲಿ ಇರುವುದಿಲ್ಲ. ಹೀಗಾಗಿ ಚಿತ್ರರಸಿಕರು ಅವರನ್ನು ನಾಯಕನಟ ಎಂದು ಒಪ್ಪಿಕೊಳ್ಳುವುದು ತುಂಬಾ ಕಷ್ಟವಾಗಿದೆ. ಆದರೆ ಡಾಕ್ಟರ್ ರಾಜಕುಮಾರ್ ಕುಟುಂಬದ ಪ್ರತಿಭೆಯಾದ ಯುವರಾಜ್ ಕುಮಾರ್ ಅವರಿಗೆ ಮುಂದೆ ಜನಪ್ರಿಯ ನಾಯಕನಟರಾಗುವ ಎಲ್ಲಾ ಲಕ್ಷಣಗಳು ಇದೆ. ಆದರೆ ಅವರು ಯಾವ ಯಾವ ರೀತಿಯ ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಬಹು ಮುಖ್ಯ... ಒಟ್ಟಾರೆ ಎಂದಿಗೂ ಪ್ರತಿಯೊಬ್ಬ ಚಿತ್ರರಸಿಕನಿಗೂ ಕಾಡುವ ಪ್ರಶ್ನೆ ಯಶ್, ದರ್ಶನ್, ಸುದೀಪ್, ಶೆಟ್ಟ್ರ ಗ್ಯಾಂಗ್ ಆದ ನಂತರ ಇವರ ಜಾಗವನ್ನು ತುಂಬುವ ಮುಂದಿನ ತಲೆಮಾರಿನ ನಾಯಕರು ಯಾರು? ಎಂದು ಅದಕ್ಕೆ ಉತ್ತರ ಸಿಗುವುದ ಕಷ್ಟವಾಗಿದೆ.