Skip to main content
ವಿಡಿಯೋ
1/2
politics

ಮತಾಂತರ ಆದವರಿಗೆ ಮತಾಂತರ ಆದ ಜಾತಿಯೇ ಫಿಕ್ಸ್, ಹಿಂದುಳಿದ ಆಯೋಗದ ಅಧ್ಯಕ್ಷ ಮಧುಸೂದನ್‌ ಸ್ಪಷ್ಟನೆ…!!

By Pavitra Ganapathi Baradavalli
ಮತಾಂತರ ಆದವರಿಗೆ ಮತಾಂತರ ಆದ ಜಾತಿಯೇ ಫಿಕ್ಸ್, ಹಿಂದುಳಿದ ಆಯೋಗದ ಅಧ್ಯಕ್ಷ ಮಧುಸೂದನ್‌ ಸ್ಪಷ್ಟನೆ…!!

ಜಾತಿ ಗಣತಿ ವಿಚಾರ ತೆರೆ ಮೇಲೆ ಬರುತ್ತಿದ್ದಂತೆಯೇ ಹಿಂದು ಸಮುದಾಯದ ಜೊತೆ ಕ್ರಿಶ್ಚಿಯನ್‌ ಸಮುದಾಯವನ್ನು ಸೇರಿಸಬಾರದು. ಹಾಗೇ ಹೀಗೆ ಮತಾಂತರ ಆದ ಮೇಲೆ ಮತಾಂತರ ಆದ ಜಾತಿಗೆ ಅವರು ಸೇರ್ಪಡೆಯಾಗುತ್ತಾರೆ ಅಂತೆಲ್ಲಾ ಚರ್ಚೆಗಳು ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಕಂಡು ಬಂದಿವೆ.

ಬೆಂಗಳೂರು: ಜಾತಿ ಗಣತಿ ವಿಚಾರ ತೆರೆ ಮೇಲೆ ಬರುತ್ತಿದ್ದಂತೆಯೇ ಹಿಂದು ಸಮುದಾಯದ ಜೊತೆ ಕ್ರಿಶ್ಚಿಯನ್‌ ಸಮುದಾಯವನ್ನು ಸೇರಿಸಬಾರದು. ಹಾಗೇ ಹೀಗೆ ಮತಾಂತರ ಆದ ಮೇಲೆ ಮತಾಂತರ ಆದ ಜಾತಿಗೆ ಅವರು ಸೇರ್ಪಡೆಯಾಗುತ್ತಾರೆ ಅಂತೆಲ್ಲಾ ಚರ್ಚೆಗಳು ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಕಂಡು ಬಂದಿವೆ. ಅದಕ್ಕೆ ಸಂಬಂಧಿಸಿದಂತೆ ಹಿಂದುಳಿದ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್  ಸ್ಪಷ್ಟನೆ ಕೊಟ್ಟಿದ್ದಾರೆ.ಇದನ್ನೂ ಓದಿ: ಮತಕಳವು ಪ್ರಕರಣ - ರಾಜ್ಯ ಸರ್ಕಾರದಿಂದ ಎಸ್‌ಐಟಿಗೆ ಬುಲಾವ್‌


ಸಮುದಾಯಗಳ ತೀರ್ವ ಒತ್ತಡಕ್ಕೆ ಮಣಿದ ಸರ್ಕಾರ ಜಾತಿಗಣತಿ ನಮೂನೆಯಿಂದ ಹಿಂದೂ ಕ್ರೈಸ್ತರಿಗೆ ಕೊಕ್‌ ನೀಡಿದೆ. ಜೊತೆಗೆ ಕ್ರೈಸ್ತ ಜೊತೆ ನಾನಾ ಹಿಂದೂ ಜಾತಿ ಉಲ್ಲೇಖಕ್ಕೆ ಬ್ರೇಕ್‌ ಬಿದ್ದಿದೆ. ಜಾತಿ ಗಣತಿ ಕುರಿತು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಜಾತಿ ಗಣತಿ ಆಯೋಗ ಜಾತಿ ಗಣತಿ ಪಟ್ಟಿಯಿಂದ 33 ಜಾತಿಗಳನ್ನು ತೆಗೆದುಹಾಕಲಾಗಿದೆ ಎಂದು ಹಿಂದುಳಿದ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಮತ್ತು ಆಯುಕ್ತ ದಯಾನಂದ ತಿಳಿಸಿದರು.
ಇದನ್ನೂ ಓದಿ: ಸರಿ ಇರುವ ತೀರ್ಪುಗಳನ್ನೂ ಪ್ರಶ್ನಿಸುವ ಸರ್ಕಾರಿ ಇಲಾಖೆಗಳ ರೂಢಿ ತಪ್ಪಬೇಕು: ಕಾನೂನು ಸಚಿವ ಮೇಘವಾಲ್ ಹೇಳಿಕೆ

ಹಿಂದೆ ಆಗಿರುವ ಹಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್‌ ಎನ್ನುವ ಉಲ್ಲೇಖ ಇತ್ತು. ಈ ಕಾರಣಕ್ಕೆ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದ ಕಾರಣ ಈಗ ಜಾತಿ ಪಟ್ಟಿಯಿಂದ ಸೇರಿಸಲಾದ 33 ಜಾತಿಗಳನ್ನು ತೆಗೆಯಲಾಗಿದೆ ಎಂದು ಮಧುಸೂದನ್‌ ತಿಳಿಸಿದರು.


ಯಾರು ಯಾವ ಜಾತಿ ಬೇಕಾದರೂ ಬರೆಸಬಹುದು. 1561 ಜಾತಿ ಬಿಟ್ಟು ಬೇರೆ ಯಾವುದೇ ಜಾತಿ ಇದ್ದರು ಮಾಹಿತಿ ಕೊಡಬಹುದು. ನಾನು ಜಾತಿ ಹೇಳುವುದಿಲ್ಲ ಎಂದರೂ ಅದಕ್ಕೂ ಅವಕಾಶವಿದೆ. ಇತರೇ ಅಂತಲೂ ಕಾಲಂ ಕೊಡಲಾಗಿದೆ. ಗೊಂದಲಲವಾಗಿರುವ ಜಾತಿಗಳ ಹೆಸರನ್ನು ತೆಗೆಯಲಾಗಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿಸಿದ ಕೋವಿಡ್‌ ಲಸಿಕೆ ಉಚಿತವಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋ…!!

ಕ್ರಿಶ್ಚಿಯನ್ ಒಕ್ಕಲಿಗ, ಲಿಂಗಾಯತ ಅಂತ ಜನರು ಇದ್ದರೆ ಬರೆಸಬಹುದು. ಡ್ರಾಪ್ ಔಟ್ ನಿಂದ ಮಾತ್ರ ತೆಗೆಯಲಾಗಿದೆ. ಆದರೆ ಆ ಜಾತಿಗಳು ಇರಲಿವೆ. ಬರೆಯಲು ಇಚ್ಛೆ ಇರುವವರು ಬರೆಸಬಹುದು. ಇದನ್ನು ಪಬ್ಲಿಕ್ ಮಾಡೋ ಅವಶ್ಯಕತೆ ಇಲ್ಲ.

ಪ್ರಾಟೆಸ್ಟೆಂಟ್ ಕ್ರೈಸ್ತ, ಕ್ರೈಸ್ತಪ್ರಾಟೆಸ್ಟೆಂಟ್, ಸಿರಿಯನ್ ಕ್ರೈಸ್ತ, ಎಸ್‌ಸಿ ಮತಾಂತರ ಕ್ರೈಸ್ತವನ್ನು ಉಳಿಸಿದ್ದೇವೆ‌. ಇದನ್ನ ಹೊರತುಪಡಿಸಿ 33 ಜಾತಿ ತೆಗೆದಿದ್ದೇವೆ. ಬ್ರಾಹ್ಮಣ ಮುಸ್ಲಿಂ, ಜೈನ್, ಇದಕ್ಕೆ ವಿರೋಧ ಬರಲಿಲ್ಲ. ಅದಕ್ಕೆ ಅದನ್ನ ಮುಂದುವರಿಸಿದ್ದೇವೆ. ಯಾರು ಯಾವ ಜಾತಿ ಬೇಕಾದ್ರು ಬರೆಸಬಹುದು ಎಂದು ತಿಳಿಸಿದರು.ಇದನ್ನೂ ಓದಿ: ಶ್ರೀನಗರ-ಜಮ್ಮು ಹೆದ್ದಾರಿ ಬಂದ್: ಕಾಶ್ಮೀರದ ಸೇಬು ಬೆಳೆಗಾರರಿಗೆ ಬೆಲೆ ಕುಸಿತ..!

 
ಸಮೀಕ್ಷೆಯಾದ ಮೇಲೆ ತಜ್ಞರು ಎಲ್ಲಾ ಜಾತಿಗಳ ಮಾಹಿತಿ ಪಡೆದು ಯಾವ ಯಾವ ಕೆಟಗೆರಿಗೆ ಬರುತ್ತಾರೆ ಎಂದು ಪಟ್ಟಿ ಮಾಡುತ್ತಾರೆ. ಮತಾಂತರ ಆಗಿದ್ದರೆ ಮತಾಂತರ ಆದ ಧರ್ಮದಲ್ಲಿ ಅವರು ಇರುತ್ತಾರೆ. ಮತಾಂತರ ಆದವರು ಮೂಲ ಜಾತಿಗೆ ಬರುವುದಿಲ್ಲ. ಯಾವ ಜಾತಿ, ಧರ್ಮದ ಅಂಕಿಅಂಶಗಳನ್ನು ಜಾಸ್ತಿ ಮಾಡುವುದಿಲ್ಲ. ಮತಾಂತರ ಆದವರಿಗೆ ಮತಾಂತರವಾದ ಧರ್ಮವೇ ಇರಲಿದೆ. ಮೂಲ ಜಾತಿ ಅವರಿಗೆ ಅನ್ವಯ ಆಗುವುದಿಲ್ಲ. ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದು ನಮಗೂ ಸರ್ಕಾರಕ್ಕೂ ಸಂಬಂಧವಿಲ್ಲ. ನಿಯಮದ ಪ್ರಕಾರ ನಾವು ಸಮೀಕ್ಷೆ ಮಾಡುತ್ತೇವೆ.NOBERO Men's Cotton Solid Regular Fit Polo Shirt