Skip to main content
ವಿಡಿಯೋ
1/2
crime

ಧರ್ಮಸ್ಥಳ ತಲೆಬುರುಡೆ ಪ್ರಕರಣ: ಚಿನ್ನಯ್ಯ-ತಿಮರೋಡಿ ಸಂಭಾಷಣೆಯ 8ನೇ ವಿಡಿಯೋ ವೈರಲ್..!

By Sushmitha R
ಧರ್ಮಸ್ಥಳ ತಲೆಬುರುಡೆ ಪ್ರಕರಣ: ಚಿನ್ನಯ್ಯ-ತಿಮರೋಡಿ ಸಂಭಾಷಣೆಯ 8ನೇ ವಿಡಿಯೋ ವೈರಲ್..!

ಧರ್ಮಸ್ಥಳ ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಚಿನ್ನಯ್ಯ-ತಿಮರೋಡಿ ಸಂಭಾಷಣೆಯ ಎಂಟನೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್. ತಿಮರೋಡಿ ಇನ್ನೂ ಪೊಲೀಸರಿಗೆ ಹಾಜರಾಗಿಲ್ಲ.

ಧರ್ಮಸ್ಥಳ ಗ್ರಾಮದ ತಲೆಬುರುಡೆ ಪತ್ತೆ ಪ್ರಕರಣದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಚಿನ್ನಯ್ಯ ನಡುವಿನ ಸಂಭಾಷಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳು ಚಿನ್ನಯ್ಯನಿಗೆ ತಿಮರೋಡಿ ಆಶ್ರಯ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿವೆ. ಭಾನುವಾರ ಎಂಟನೇ ವಿಡಿಯೋ ಬಿಡುಗಡೆಯಾಗಿದೆ..ಧರ್ಮಸ್ಥಳದಲ್ಲಿ ನಾವು ಗುರುತಿಸಿರುವ ಸ್ಥಳಗಳಲ್ಲಿ ಕೂಡಲೇ ಅಗೆಯುವ ವಿಚಾರ:- ಅರ್ಜಿ ವಿಚಾರಣೆ ನಡೆಸಲಿರುವ ಕರ್ನಾಟಕ ಹೈಕೋರ್ಟ್‌.

ಈ ವಿಡಿಯೋ 2023ರಲ್ಲಿ ತಿಮರೋಡಿಯವರ ಮನೆಯಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಈವರೆಗೆ ಬಿಡುಗಡೆಯಾದ ಕೊನೆಯ ಐದು ವಿಡಿಯೋಗಳಲ್ಲಿ ಚಿನ್ನಯ್ಯ ಧರ್ಮಸ್ಥಳ ಗ್ರಾಮದಲ್ಲಿ ನಡೆದ ವಿವಿಧ ಸಾವಿನ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಸೌಜನ್ಯ ಹತ್ಯೆಯ ನಂತರ ನಡೆದ ಘಟನೆಗಳು ಮತ್ತು ಆರೋಪಿ ಸಂತೋಷ್ ರಾವ್‌ನ ಬಂಧನದ ವಿವರಗಳನ್ನು ಚಿನ್ನಯ್ಯ ತಿಮರೋಡಿಯೊಂದಿಗೆ ಹಂಚಿಕೊಂಡಿದ್ದಾರೆ.Varanga Women's Silk Magenta Embroidered Aline Kurta Set With Dupatta Paired with Tonal Bottom

ಎಂಟನೇ ವಿಡಿಯೋದಲ್ಲಿ ಚಿನ್ನಯ್ಯ, ಸೌಜನ್ಯ ಹತ್ಯೆಯ ಬಳಿಕ ರವಿ ಪೂಜಾರಿ ಬಾಹುಬಲಿ ಬೆಟ್ಟದಲ್ಲಿ ಡ್ಯೂಟಿ ಮಾಡಿರಲಿಲ್ಲ. ಡ್ಯೂಟಿ ಮಾಡದ ಕಾರಣ ವ್ಯವಸ್ಥಾಪಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಘಟನೆಯ ನಂತರ ರವಿ ಪೂಜಾರಿ ವ್ಯವಸ್ಥಾಪಕರೊಂದಿಗೆ ಊಟಕ್ಕೂ ಹೋಗಿರಲಿಲ್ಲ.

ಊಟದಲ್ಲಿ ವಿಷ ಬೆರೆಸುವ ಅನುಮಾನ ಆತನಿಗೆ ಇತ್ತು. ಹೀಗಾಗಿ, ವಿಠಲ ಗೌಡರ ಹೋಟೆಲ್‌ಗೆ ಹೋಗಿ, ಬನ್ಸ್ ಮತ್ತು ಟೀ ಕುಡಿದು ಹೋಗಿದ್ದ. ಅಂದೇ ರಾತ್ರಿ 7.30ಕ್ಕೆ ಹಗ್ಗ ಬಿಗಿದು ಆತನನ್ನು ಕೊಲ್ಲಲಾಯಿತು, ಎಂದು ಹೇಳಿದ್ದಾರೆ.ಧರ್ಮಸ್ಥಳ ಪ್ರಕರಣದಲ್ಲಿ ಹೊಸ ತಿರುವು...SIT ತನಿಖೆ ಮಧ್ಯೆ ಹೈಕೋರ್ಟ್ ನೋಟಿಸ್!

ಇನ್ನು, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಎದುರಿಸುತ್ತಿರುವ ತಿಮರೋಡಿ ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತಿಮರೋಡಿ ಮನೆಗೆ ತೆರಳಿ, ಎರಡನೇ ಬಾರಿಗೆ ನೋಟಿಸ್ ಅಂಟಿಸಿದ್ದಾರೆ. ಸೆಪ್ಟೆಂಬರ್ 25ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.ಧರ್ಮಸ್ಥಳ ಪ್ರಕರಣ: ತನಿಖೆ ಚುರುಕುಗೊಳಿಸಿದ SIT...ಇಂದು ಬೆಳ್ತಂಗಡಿ ಕಚೇರಿಯಲ್ಲಿ ಐವರ ವಿಚಾರಣೆ..!