ಕೂಡಲಸಂಗಮದ ಪಂಚಮಸಾಲಿ ಮಹಾಪೀಠಕ್ಕೆ ಬೀಗ ಹಾಕಲಾಗಿದ್ದು, ಬಸವ ಜಯಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿದ ನಂತರ ನೀರವ ಮೌನ ಆವರಿಸಿದೆ. ಭಾನುವಾರ ಹುನಗುಂದದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಿಣಿಯು ಜಯಮೃತ್ಯುಂಜಯ ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವ ನಿರ್ಧಾರವನ್ನು ಪ್ರಕಟಿಸಿದೆ.
ಪೀಠದ ಅಧ್ಯಕ್ಷ ಕಾಶಪ್ಪನವರ ಮಾತನಾಡಿ, ಸ್ವಾಭಿಮಾನವಿದ್ದರೆ ಸ್ವಾಮೀಜಿ ಪೀಠದ ಕಡೆ ಬರಬಾರದು ಎಂದಿದ್ದಾರೆ. ಉಚ್ಚಾಟನೆಯ ನಂತರ ಶ್ರೀಗಳು ಕೂಡಲಸಂಗಮಕ್ಕೆ ತೆರಳಿದರೂ, ಅವರಿಗೆ ಸಭೆ ನಡೆಸಲು ಅವಕಾಶ ಸಿಗಲಿಲ್ಲ. ಕಾಶಪ್ಪನವರ ಸೂಚನೆಯಿಂದಾಗಿ ಯಾವುದೇ ಸಭಾಂಗಣಗಳು ಲಭ್ಯವಾಗಲಿಲ್ಲ. ಆದ್ದರಿಂದ, ಶ್ರೀಗಳು ಆಲದ ಮರದ ಕೆಳಗೆ ಭಕ್ತರೊಂದಿಗೆ ಸಭೆ ನಡೆಸಿದ್ದು, ಈ ವೇಳೆ ಭಾವುಕರಾದರು. ಇದರ ಬೆನ್ನಲ್ಲೇ, ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಶ್ರೀಗಳ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. Blue Heaven Festive Makeup Kit Set | Pack of 8 Makeup Essentials | Complete Makeup Kit Set for women | Ideal for Festive Looks, Gifting & Bridal Makeup | Medium Tone Combo | Pack of 8 | 32.1g+45.5ml
ಬಸವ ಜಯಮೃತ್ಯುಂಜಯ ಸ್ವಾಮೀಜಿ ತಮ್ಮ ಭಕ್ತರು ಹಾಗೂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದು, ಕೂಡಲಸಂಗಮದಲ್ಲೇ ಹೊಸ ಪೀಠ ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದಾರೆ. ಈ ಘಟನೆಗೆ ಹಿನ್ನೆಲೆಯಾಗಿ, ಕಳೆದ ಜುಲೈನಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಿರುವುದು ಭಾರಿ ಚರ್ಚೆಗೆ ಕಾರಣವಾಗಿತ್ತು. ವಿಜಯಾನಂದ ಕಾಶಪ್ಪನವರ ಸೂಚನೆ ಮೇರೆಗೆ ಪೀಠಕ್ಕೆ ಬೀಗ ಜಡಿಯಲಾಗಿತ್ತು ಎನ್ನಲಾಗಿದ್ದು, ನಂತರ ಶ್ರೀಗಳ ಬೆಂಬಲಿಗರು ಬೀಗ ಒಡೆದಿದ್ದರು.
ಈ ಸಂಬಂಧ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ, ಪಂಚಮಸಾಲಿ ಮೀಸಲಾತಿ ಹೋರಾಟ ರಾಜ್ಯದ ಗಮನ ಸೆಳೆದಿತ್ತು. ಆಗ ಕಾಂಗ್ರೆಸ್ ಪಂಚಮಸಾಲಿ ನಾಯಕರಾದ ವಿಜಯಾನಂದ ಕಾಶಪ್ಪನವರ, ಹೆಬ್ಬಾಳ್ಕರ್ ಮತ್ತು ಬಿಜೆಪಿ ನಾಯಕ ಯತ್ನಾಳ್ ಮುಂಚೂಣಿ ಹೋರಾಟ ನಡೆಸಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ, ಆ ಪಕ್ಷದ ನಾಯಕರು ಹೋರಾಟದಿಂದ ಹಿಂದೆ ಸರಿದರು. ಪಾಕ್ ಫೈಟರ್ ಜೆಟ್‌ಗಳಿಂದ 8 ಬಾಂಬ್‌ಗಳು: ಮ್ಯಾಟ್ರೆ ದಾರಾ ಗ್ರಾಮದಲ್ಲಿ 30 ಮಂದಿ ಸಾ*ವು, ಸ್ವಂತ ದೇಶದ ಜನರ ಮೇಲೆ ಭಯಂಕರ ದಾಳಿ!
ಆ ಸಂದರ್ಭದಲ್ಲಿ ಬಿಜೆಪಿಯಲ್ಲಿದ್ದ ಪಂಚಮಸಾಲಿ ನಾಯಕ ಯತ್ನಾಳ್ ಮತ್ತು ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಗ್ಗಟ್ಟಿನ ಮಂತ್ರವನ್ನು ಸಾರಿದ್ದರು. ಇದು ವಿಜಯಾನಂದ ಕಾಶಪ್ಪನವರ ಹಾಗೂ ಪಂಚಮಸಾಲಿ ಶ್ರೀಗಳ ನಡುವೆ ಬಿರುಕು ಮೂಡಲು ಕಾರಣವಾಗಿತ್ತು. ಬೆಸ್ಕಾಂ ಮೀಟರ್ ರೀಡರ್‌ಗಳಿಗೆ ಜಾತಿ ಸಮೀಕ್ಷೆ ಜವಾಬ್ದಾರಿ..ವಿದ್ಯುತ್ ಬಿಲ್‌ಗಳಲ್ಲಿ ದಿಢೀರ್ ಏರಿಕೆ, ಗ್ರಾಹಕರು ಆಕ್ರೋಶ!
ಈ ಎಲ್ಲ ಬೆಳವಣಿಗೆಗಳ ನಡುವೆ ಪೀಠಕ್ಕೆ ಬೀಗ ಜಡಿಯಲಾಗಿತ್ತು. ಜುಲೈ ತಿಂಗಳಲ್ಲೇ, ಸಂದರ್ಭ ಬಂದರೆ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದಲೇ ಇಳಿಸುತ್ತೇವೆ ಎಂದು ಕಾಶಪ್ಪನವರ ಎಚ್ಚರಿಕೆ ನೀಡಿದ್ದರು. ಇದೀಗ ಅವರ ಹೇಳಿಕೆಯಂತೆ ನಡೆದಿದ್ದು, ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.